ಪ್ರತಿಯೊಂದು ಕ್ಷೇತ್ರಗಳಿಗೂ ಬೇಕಾದ ಅಂಕಿ ಅಂಶ ತಜ್ಞರು

ಅವಕಾಶಗಳನ್ನು ತೆರೆದಿರುವ ಸಂಖ್ಯಾಶಾಸ್ತ್ರ ಶಿಕ್ಷಣ

Team Udayavani, Feb 12, 2020, 5:02 AM IST

sds-21

ಅಂಕಿಅಂಶ, ದತ್ತಾಂಶಗಳು ಇಂದು ಪ್ರಾಮುಖ್ಯತೆ ಪಡೆದಿದೆ. ಜಗತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ. ಇಲ್ಲಿ ವಿಭಿನ್ನ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಈ ಯೋಜನೆಗಳು ರೂಪಿತಗೊಳ್ಳುವುದು ಅಂಕಿ ಅಂಶಗಳ ಮೇಲೆ. ಜನರಿಗೆ ಅಗತ್ಯ ಸೌಕರ್ಯ, ಸೌಲಭ್ಯಗಳನ್ನು ಸಮರ್ಪಕವಾಗಿ ಹೇಗೆ ಒದಗಿಸಿಕೊಡಬಹುದು ಎಂಬುದು ಕೂಡ ಸಂಖ್ಯಾಶಾಸ್ತ್ರ ತಜ್ಞರ ಸಲಹೆಯಂತೆ ನಿರ್ಧಾರಗೊಳ್ಳುವ ಕಾಲವಿದು. ಸರಕಾರಿ ಮತ್ತು ಖಾಸಗಿ ಎರಡೂ ಕ್ಷೇತ್ರಗಳು ಕೂಡ ಅಂಕಿ ಅಂಶಗಳಿಲ್ಲದೆ ಯೋಜನೆಗಳನ್ನು ರೂಪಿಸುವುದು ಅಸಾಧ್ಯವಾಗಿದೆ. ಇದು ಅಂಕಿ ಅಂಶ ತಜ್ಞರು ಅಥವಾ ಸಂಖ್ಯಾಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚಿಸಿದೆ. ಸಂಖ್ಯಾಶಾಸ್ತ್ರ (ಸ್ಟಾಟಿಸ್ಟಿಕ್‌) ವಿದ್ಯಾಭ್ಯಾಸ ನೀಡುವ ಶಿಕ್ಷಣ ಸಂಸ್ಥೆಗಳು ಕೂಡ ಅಧಿಕವಾಗಿವೆ.

ಗಣಿತ ಅಥವಾ ಸ್ಯಾಟಿಸ್ಟಿಕ್ಸ್‌ ವಿಷಯಗಳಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದಲ್ಲಿ ಮುಖ್ಯವಾಗಿ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್‌.ಡಿ.ಗಳಿಸಬಹುದು. ಮೂರು ವರ್ಷದ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ, ಆರು ತಿಂಗಳಿಂದ ಒಂದು ವರ್ಷದ ಸರ್ಟಿಫಿಕೇಟ್‌ ಕೋರ್ಸ್‌ ಮತ್ತು ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿವೆ. ಈ ಕೋರ್ಸ್‌ಗಳಲ್ಲಿ ದತ್ತಾ¤ಂಶ ಸಂಗ್ರಹಣೆ, ತರ್ಕಬದ್ಧ ವಿಶ್ಲೇಷಣೆ, ಸಂಖ್ಯಾಶಾಸ್ತ್ರೀಯ ಜಿಜ್ಞಾಸೆ, ದತ್ತಾಂಶದ ಮೌಲ್ಯ ನಿರ್ಣಯ, ಅಂಕಿ-ಸಂಖ್ಯೆ ಗಣಿತದ ಮೂಲಸಿದ್ಧಾಂತಗಳನ್ನು ಕಲಿಸಿಕೊಡಲಾಗುತ್ತದೆ. ಸಂಖ್ಯಾಶಾಸ್ತ್ರಜ್ಞರು ಸಮಸ್ಯೆ ಬಿಡಿಸುವುದು, ಬದಲಾಗುತ್ತಿರುವ ಅಂಕಿ-ಅಂಶಗಳ ತ್ವರಿತ ತಿಳಿವಳಿಕೆ, ಸಂಖ್ಯಾಶಾಸ್ತ್ರದ ವಿಸ್ತೃತ ಮತ್ತು ಖಚಿತ ಜ್ಞಾನ ಹೊಂದಿ ಉದ್ಯಮ, ಸರಕಾರ ಅಥವಾ ಇತರ ಸಂಸ್ಥೆಗಳು ಬಯಸುವ ಕೌಶಲವನ್ನು ಹೊಂದಿದವರಾಗಿರುತ್ತಾರೆ.

ಸಂಖ್ಯಾಶಾಸ್ತ್ರ ಇದು ಮಾರುಕಟ್ಟೆ, ಸಾರ್ವಜನಿಕ ಆರೋಗ್ಯ, ಕ್ರೀಡೆ, ವೈದ್ಯಕೀಯ ಇತರ ಹಲವಾರು ಕ್ಷೇತ್ರಗಳಿಗೂ ಸಂಖ್ಯಾಶಾಸ್ತ್ರಜ್ಞರ ಅಗತ್ಯವಿದೆ. ಸಂಖ್ಯಾಶಾಸ್ತ್ರ ಗಣಿತದ ಇನ್ನೊಂದು ಪ್ರಮುಖ ಶಾಖೆ. ವೈಜ್ಞಾನಿಕ ಸಂಶೋಧನೆ, ಆರ್ಥಿಕ, ವೈದ್ಯಕೀಯ, ಜಾಹೀರಾತು ಮೊದಲಾದ ಕ್ಷೇತ್ರಗಳಲ್ಲಿಯೂ ಬಳಕೆಯಾಗುತ್ತದೆ.

ಪಿಎಚ್‌ಡಿ ಇನ್‌ ಸ್ಟಾಟಿಸ್ಟಿಕ್ಸ್‌
ದ್ವಿತೀಯ ಪಿಯುಸಿಯಲ್ಲಿ ಮ್ಯಾತಮ್ಯಾಟಿಕ್ಸ್‌ ಅಥವಾ ಸ್ಟಾಟಿಸ್ಟಿಕ್ಸ್‌ ವಿಷಯವನ್ನು ಕಡ್ಡಾಯವಾಗಿ ಓದಿರುವವರು ಈ ಕೋರ್ಸ್‌ಗಳನ್ನು ಮಾಡಬಹುದು. ಸ್ಟಾಟಿಸ್ಟಿಕ್ಸ್‌ನಲ್ಲಿ ಬ್ಯಾಚುಲರ್‌ ಪದವಿ ಪೂರ್ಣಗೊಳಿಸಿ ಮಾಸ್ಟರ್‌ ಕೋರ್ಸ್‌ ಮಾಡಬಹುದು. ಲೋಕಸೇವಾ ಪರೀಕ್ಷೆಗಳನ್ನು ಕೂಡ ಬರೆಯಬಹುದು. ಸ್ಟಾಟಿಸ್ಟೀಷಿಯನ್‌, ರಿಸ್ಕ್ ಅನಾಲಿಸ್ಟ್‌, ಲೆಕ್ಚರರ್‌, ಪ್ರೊಫೆಸರ್‌, ಕಂಟೆಂಟ್‌ ಅನಾಲಿಸ್ಟ್‌, ಸ್ಟಾಟಿಸ್ಟಿಕ್‌ ಟ್ರೈನರ್‌, ಡಾಟಾ ಸೈಂಟಿಸ್ಟ್‌, ಕನ್ಸಲ್ಟೆಂಟ್‌, ಬಯೋಸ್ಟಾಟಿಸ್ಟೀಶಿಯನ್‌ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ. ಅಲ್ಲದೆ ಡಾಟಾ ಸರ್ವೆ ಏಜೆನ್ಸಿಗಳು, ಪ್ಲಾನಿಂಗ್‌ ಕಮಿಷನ್‌ಗಳು, ಎಕನಾಮಿಕ್‌ ಬ್ಯೂರೋಗಳಲ್ಲಿಯೂ ಅವಕಾಶಗಳಿರುತ್ತವೆ. ಸ್ಟಾಟಿಸ್ಟಿಕ್ಸ್‌ನಲ್ಲಿ ಬಿಎಸ್‌ಸಿ, ಎಂಎಸ್‌ಸಿ ಪೂರೈಸಿದವರಿಗೆ ಮಾಹಿತಿ ತಂತ್ರಜ್ಞಾನ, ವಿಮೆ, ಬ್ಯಾಂಕಿಂಗ್‌ ಮೊದಲಾದ ಖಾಸಗಿ ಮತ್ತು ಸರಕಾರಿ ಕ್ಷೇತ್ರಗಳಲ್ಲಿಯೂ ಅಪಾರ ಅವಕಾಶಗಳಿರುತ್ತವೆ.

ಯಾವ ಕೋರ್ಸ್‌
  ಸರ್ಟಿಫಿಕೇಟ್‌ ಇನ್‌ ಸ್ಟಾಟಿಸ್ಟಿಕಲ್‌ ಮೆಥಡ್ಸ್‌ ಆ್ಯಂಡ್‌ ಅಪ್ಲಿಕೇಶನ್ಸ್‌
  ಡಿಪ್ಲೊಮಾ ಕೋರ್ಸಸ್‌ ಇನ್‌ ಸ್ಟಾಟಿಸ್ಟಿಕ್ಸ್‌
  ಬ್ಯಾಚುಲರ್‌ ಆಫ್ ಆರ್ಟ್ಸ್(ಬಿಎ) ಇನ್‌ ಸ್ಟಾಟಿಸ್ಟಿಕ್ಸ್‌
  ಬ್ಯಾಚುಲೆರ್‌ ಆಫ್ ಸಾಯನ್ಸ್‌ ಇನ್‌ ಸ್ಟಾಟಿಸ್ಟಿಕ್ಸ್‌
  ಮಾಸ್ಟರ್‌ ಆಫ್ ಆರ್ಟ್ಸ್ ಇನ್‌ ಸ್ಟಾಟಿಸ್ಟಿಕ್ಸ್‌
  ಮಾಸ್ಟರ್‌ ಇನ್‌ ಸ್ಟಾಟಿಸ್ಟಿಕ್ಸ್‌
  ಮಾಸ್ಟರ್‌ ಆಫ್ ಸಾಯನ್ಸ್‌ ಇನ್‌ ಸ್ಟಾಟಿಸ್ಟಿಕ್ಸ್‌
  ಮಾಸ್ಟರ್‌ ಆಫ್ ಫಿಲಾಸಫಿ ಇನ್‌ ಸ್ಟಾಟಿಸ್ಟಿಕ್ಸ್‌

- ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.