ಬದುಕಿಗೆ ಹೊಸ ದಾರಿ ತೋರುವ ಉಪ್ಪಿ
Team Udayavani, May 8, 2019, 5:50 AM IST
ಒಬ್ಬ ಸಾಮಾನ್ಯ ಮನುಷ್ಯ ಆತನ ಸುತ್ತಮುತ್ತಲಿನ ವಾತಾವರಣ ವನ್ನು ಗೆದ್ದು ಹೇಗೆ ಅಸಾಮಾನ್ಯನಾದ ಎನ್ನುವುದು ಮತ್ತು ಜನರ ಮುಂದೆ ಅಸಮಾನ್ಯನಾದ ವ್ಯಕ್ತಿ ಸಾಮಾನ್ಯನಾಗಿ ಹೇಗೆ ಮಿಂಗಲ್ ಆದ ಎನ್ನುವುದು “ನಮ್ಮ ಉಪ್ಪಿ’ ಎನ್ನುವ ಪುಸ್ತಕದಲ್ಲಿ ಉಪೇಂದ್ರ ಅವರ ಬದುಕಿಗೆ ಹತ್ತಿರಾದವರ ಕುತೂಹಲಕಾರಿ ಮಾತುಗಳು ಇಲ್ಲಿವೆ. ಚಿತ್ರನಟ ಉಪೇಂದ್ರ ಬೆಳೆದು ಬಂದ ಹಾದಿಯ ಸಂಪೂರ್ಣ ಚಿತ್ರಣ ಈ ಕೃತಿಯಲ್ಲಿದೆ.
ಘಟನೆ: 1
ಬಾಲ್ಯದಲ್ಲಿ ಕಷ್ಟಗಳ ಜತೆಗೆ ಬೆಳೆದ ಉಪ್ಪಿ ತನ್ನ ಜೀವನದಲ್ಲಿ ಏನಾದರೂ ಸಾಧಸಬೇಕೆಂಬ ಕನಸಿಗೆ ನಿರ್ದೇಶಕ ಕಾಶೀನಾಥರ ಮನೆಯ ಹಾದಿಗಳಲ್ಲಿ ಕಾದ ದಿನಗಳು ಮತ್ತು ಕಾಶಿನಾಥರೇ ಅವರ ಮೊದಲ ಭೇಟಿಯಲ್ಲಿ ಇವನಲ್ಲಿ ಏನೋ ಒಂದು ಇದೆ ಉದ್ಗರಿಸಿದ್ದು, ಅನಂತರ ಕಾಲೇಜು ದಿನಗಳಲ್ಲೇ ಅವರ ಜತೆಗೆ ಸಹನಿರ್ದೇಶನ ಮಾಡಿದ್ದು ಮುಂದೆ ಅವರೇ ನಿರ್ದೇಶನ ಮಾಡಲು ಕೈ ಹಿಡಿಯಿತು.
ಘಟನೆ:2
ಪ್ರಿಯಾಂಕಾ ಉಪೇಂದ್ರ ಅವರು, ಉಪೇಂದ್ರ ಅವರ ಬಗ್ಗೆ ಡೌನ್ ಟು ಅರ್ಥ್ ಪರ್ಸನ್ ಎಂಬ ಒಂದೇ ವಾಕ್ಯದಲ್ಲಿ ಅವರ ವ್ಯಕ್ತಿತ್ವವನ್ನು ತೆರೆದಿಡುವಂತೆ ಮಾಡಿ ದ್ದಾರೆ. ಇದು ಸತ್ಯವೂ ಹೌದು. ಉಪೇಂದ್ರ ಅವರು ದೊಡ್ಡವರು ಇವರು ಚಿಕ್ಕವರು ಎನ್ನುವ ಬೇಧ ಭಾವವಿಲ್ಲದೆ ಪ್ರತಿಯೋರ್ವನಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಅವರ ಮಾತುಗಳನ್ನು ಆಲಿಸುತ್ತಾರೆ.
ಘಟನೆ:3
ಉಪೇಂದ್ರ ಅವರು ಪೆದ್ದರಂತೆ. ಹಾಗೆಂದು ಈ ಪುಸ್ತಕದಲ್ಲಿ ಹೇಳಿರುವವರು ಬೇರಾರು ಅಲ್ಲ ಸ್ವತಃ ಉಪೇಂದ್ರ ಅವರ ತಾಯಿ. ಹೌದು, ಅವರ ಮಾತುಗಳಲ್ಲೇ ಅವನಿಗೆ ಸಾಮಾನ್ಯ ವಿಚಾರಗಳೂ ಕೂಡ ಅಷ್ಟೊಂದು ಬೇಗನೆ ಹೊಳೆಯುವುದಿಲ್ಲ. ಆದರೆ ಇದಕ್ಕೆಲ್ಲ ಶಾಕ್ ಕೊಟ್ಟದ್ದು ಆತನ ಚಿತ್ರಗಳು. ಅವನ ತಲೆಯಲ್ಲಿ ಅಷ್ಟೊಂದು ವಿಚಾರಗಳು ಇದೆಯೆನ್ನುವುದೇ ಅವರನ್ನು ಅಚ್ಚರಿಯ ಗೂಡಿಗೆ ತಲ್ಲಲ್ಪಟ್ಟಿತಂತೆ. ಬದು ಕಿ ನಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ಈ ಕೃತಿಯೊಂದು ಹೊಸ ದಾರಿಯನ್ನು ತೆರೆದಿಡಬಲ್ಲದು.
– ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.