ಸವಾಲುಗಳ ನಡುವೆ ಅಸ್ಥಿತ್ವದ ಹುಡುಕಾಟ
Team Udayavani, Jul 3, 2019, 5:00 AM IST
ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಲು ಆಗದ ಒಂದು ಕಾಲಘಟ್ಟವಿತ್ತು. ಅಲ್ಲಿ ಸ್ತ್ರೀಯರ ಮಾತು, ಬರವಣಿಗೆಗಳಿಗೆ ಯಾವುದೇ ಬೆಲೆಯಿರುತ್ತಿರಲಿಲ್ಲ. ಮುಂದೆ ಸಮಾಜ ಬೆಳೆಯುತ್ತ ಹೋಯಿತು. ಅದರಂತೆ ಚಿಂತನೆಗಳೂ ಬದಲಾಗುತ್ತಾ ಹೋದವು. ಪಾಶ್ಚಾತ್ಯರಲ್ಲಿ ಹುಟ್ಟಿಕೊಂಡ ಸ್ತ್ರೀವಾದಿ ಎಂಬ ಸಾಹಿತ್ಯ ಪರಿಕಲ್ಪನೆ ಭಾರತದಲ್ಲೂ ಕಾಣಿಸಿಕೊಂಡಿತು. ಅದರ ಸವಾಲುಗಳು ಹಾಗೂ ವಿಮರ್ಶೆಯನ್ನು ಒಂದೇ ಪುಸ್ತಕದಲ್ಲಿ ಸಂಪಾದಿಸಿ ಕೊಟ್ಟ ಕೀರ್ತಿ ತೇಜಸ್ವಿನಿ ನಿರಂಜನ ಹಾಗೂ ಸೀಮಂತಿನಿ ನಿರಂಜನರಿಗೆ ಸಲ್ಲುತ್ತದೆ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಎಂಬ ಪುಸ್ತಕದಲ್ಲಿ ಇದರ ಪರಿಕಲ್ಪನೆಯನ್ನು ವಿವರಿಸಿದ್ದಾರೆ.
••ಘಟನೆ: 1
ಸ್ತ್ರೀವಾದ ಎಂಬ ಪರಿಕಲ್ಪನೆಯನ್ನು ವಿವರಿಸುತ್ತಾ ಆ ಪದದಲ್ಲಿರುವ ಗೊಂದಲಗಳಿಗೆ ಉತ್ತರವನ್ನು ಹೀಗೆ ಹೇಳುತ್ತಾರೆ. ಸ್ತ್ರೀವಾದವೆಂದರೆ ಏನು ಎನ್ನುವುದನ್ನು ಸ್ಥೂಲವಾಗಿ ವಿವರಿಸುವುದು ಸೂಕ್ತ. ಸ್ತ್ರೀವಾದವು ಪುರುಷಪ್ರಧಾನ ಮತ ಮತ್ತು ಸಂರಚನೆಗಳನ್ನು ವಿಮರ್ಶಿಸುತ್ತದೆ. ಪ್ರಚಲಿತ ಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಅದು ಈ ಬಗೆಯ ವಿಮರ್ಶೆಯನ್ನು ಮುಂದಿಡುತ್ತದೆ. ಇಲ್ಲಿನ ಗ್ರಹಿತವೆಂದರೆ ಪುರುಷ ಪ್ರಧಾನತೆಯ ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶಗಳ ಫಲವೇ ಹೊರತು ಸಹಜವಾದುದೇನೂ ಅಲ್ಲ.
••ಘಟನೆ: 2
ಮಹಿಳೆಯರಿಂದ ರಚಿತವಾಗಿದ್ದ ಕೃತಿಗಳೂ ಜನಮನ್ನಣೆ ಗಳಿಸಿರುವುದನ್ನು ಹೀಗೆ ವಿವರಿಸುತ್ತಾರೆ. ಮುದ್ದುಪಳನಿಯ ಕಾಲದಲ್ಲಿ ಅವಳ ಕೃತಿಯನ್ನು ತಿರಸ್ಕರಿಸಲಾಗಿತ್ತು ಎನ್ನುವುದಕ್ಕೆ ಯಾವ ಪುರಾವೆಗಳಿಲ್ಲ. ರಾಜಸ್ಥಾನದಲ್ಲಿ ಅವಳ ಕೃತಿಗಳು ಮನ್ನಣೆ, ಮೆಚ್ಚುಗೆಗಳಿಗೆ ಪಾತ್ರವಾಗಿದ್ದವು ತಿಳಿದು ಬರುತ್ತದೆ.
••ಘಟನೆ: 3
ಕನ್ನಡ ಸಾಹಿತ್ಯದಲ್ಲಿ ಸ್ತ್ರೀಪರ ದೃಷ್ಟಿಯನ್ನು ವಿವರಿಸುತ್ತಾ ಕನ್ನಡ ಸಾಹಿತ್ಯದಲ್ಲಿ ಪರಂಪರಾಗತವಾಗಿ ಬಂದ ಸಾಂಪ್ರದಾಯಿಕ ಸ್ತ್ರೀ ಮಾಲ್ಯಗಳು ಅನೇಕ ಶತಮಾನಗಳವರೆಗೆ ಸ್ಥಾಯಿಯಾಗಿಯೇ ಉಳಿದಿದ್ದವು. ನವೋದಯ ಕಾಲದಲ್ಲಿ ಸ್ತ್ರೀ ಸುಧಾರಣಾ ಚಳುವಳಿಯು ತಲೆಯೆತ್ತಿತು.•
••ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.