ಫೋಟೋ ಎಡಿಟಿಂಗ್‌ನಲ್ಲಿದೆ ವಿಪುಲ ಅವಕಾಶ
Team Udayavani, Jan 22, 2020, 5:05 AM IST
ನಾವು ಮಾಡುವ ಕೆಲಸವು ಆದಾಯ ಗಳಿಕೆ ಮಾತ್ರವೆನಿಸಿದಾಗ ಅದೆನೋ ಕೊರಗು, ಬಯಸಿದಂತೆ ಬದುಕು ಸಾಗದ ಬೇಸರ ಸಹಜ. ಆದರೆ ಆದಾಯದೊಂದಿಗೆ ನಿಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸಿ ನಿಮ್ಮನ್ನು ಗುರುತಿಸಿಕೊಳ್ಳುವ ನೆಲೆಯಲ್ಲಿ ಫೋಟೋ ಎಡಿಟಿಂಗ್ ಒಂದು ಉತ್ತಮ ವೇದಿಕೆಯಾಗಿದೆ.
ಏನಿದು ಫೋಟೋ ಎಡಿಟಿಂಗ್?
ತೆಗೆದ ಫೋಟೋ ಯಥಾಸ್ಥಿತಿಯಲ್ಲಿ ನೀಡುವವರು ತುಂಬಾ ಕಡಿಮೆ. ಒಂದು ವೇಳೆ ಹಾಗೆಯೇ ನೀಡಿದರೂ ಅದರಲ್ಲಿ ಏನಾದರೂ ವಿಶೇಷತೆ, ಕ್ರಿಯಾಶೀಲತೆ ಇದ್ದರೆ ಜನರಿಗೆ ಇಷ್ಟವಾಗುತ್ತದೆ. ಆದರೆ ಬಹುತೇಕರಿಗೆ ನ್ಯಾಚುರಲ್‌ಗಿಂತಲೂ ಎಡಿಟಿಂಗ್‌ಗೆ ಬಹು ಇಷ್ಟ ಎನ್ನಬಹುದು. ಯಾಕೆಂದರೆ ಕಾಣದ ಪ್ರಕೃತಿ ನಮ್ಮ ಹಿಂದೆ ನಿಂತು ನಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಿರುವುದನ್ನು ಯಾರು ತಾನೇ ಇಷ್ಟಪಡಲಾರರು. ಈ ಕಾರಣದಿಂದಲೇ ಎಡಿಟಿಂಗ್ ಒಂದು ಉತ್ತಮ ಕ್ಷೇತ್ರವಾಗಿದ್ದು, ಆಸಕ್ತರಿಗೆ ಒಂದು ನೆಚ್ಚಿನ ಉದ್ಯೋಗವನ್ನು ಇಲ್ಲಿ ಅರಸಬಹುದಾಗಿದೆ.
ಎಷ್ಟು ಆದಾಯ?
ಫೋಟೋ ಎಡಿಟಿಂಗ್ ಎಲ್ಲರಿಂದಲೂ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ಕೆಲವು ಕೌಶಲಗಳು ಅಗತ್ಯವಿದೆ. ಒಮ್ಮೆ ಇದನ್ನು ನೀವು ಕರಗತ ಮಾಡಿಕೊಂಡಿರೆಂದರೆ ಅರೆಕಾಲಿಕ ಅಥವಾ ಪೂರ್ಣಕಾಲಿಕ ಉದ್ಯೋಗವನ್ನು ನೀವು ಪಡೆಯಬಹುದಾಗಿದೆ. ನಿಮ್ಮ ನೈಪುಣ್ಯತೆ ಆಧಾರದ ಮೇಲೆ ಆದಾಯದ ಅಂಶ ನಿರ್ಧಾರವಾಗುತ್ತದೆ. ತಿಂಗಳಿಗೆ ಸುಮಾರು 15ರಿಂದ 20 ಸಾವಿರದವರೆಗೂ ಇದರಲ್ಲಿ ಆದಾಯ ಗಳಿಸಬಹುದಾಗಿದೆ.
ಎಲ್ಲೆಲ್ಲಿ ಇದೆ ಅವಕಾಶ?
ಇಂದು ಸಾಮಾನ್ಯ ಮದುವೆ ಕಾಗದದಿಂದ ಹಿಡಿದು ಮಾಡೆಲಿಂಗ್ ಫೋಟೋದವರೆಗೂ ಎಡಿಟಿಂಗ್ ತನ್ನ ಚಾಕಚಕ್ಯತೆಯನ್ನು ಹೊಂದಿರುತ್ತದೆ. ಕೆಲವೊಂದು ಪೋಟೋಶಾಪ್‌ಗ್ಳಲ್ಲಿ ಎಡಿಟಿಂಗ್‌ಗಾಗಿ ಅರೆಕಾಲಿಕ ಉದ್ಯೋಗಸ್ಥರಿಗೆ ಇಂದು ಬೇಡಿಕೆ ಬರುತ್ತಿರುವುದನ್ನು ಕಾಣಬಹುದು. ಅದೇ ರೀತಿ ವೆಡ್ಡಿಂಗ್ ಫೋಟೋ, ರಿಸೆಪ್ಶನ್, ಬರ್ತ್‌ಡೇ, ಡಾಗ್ ಶೋ, ಜಾಹಿರಾತು ಫೋಟೋ, ಕಾರ್ಡ್ ಗಳ ತಯಾರಿಕೆ ಇನ್ನೂ ಹಲವಾರು ಕ್ಷೇತ್ರದಲ್ಲಿ ಫೋಟೋ ಎಡಿಟಿಂಗ್ ಇಂದು ಜನಮನ್ನಣೆ ಪಡೆದಿದೆ.
ಯಾವೆಲ್ಲ ಆ್ಯಪ್?
ಫೋಟೋ ಎಡಿಟಿಂಗಿಗೆ ಸಂಬಂಧಿಸಿದಂತೆ ಫೋಟೋ ಶಾಪ್, ಲೈಟ್ರೋಮ್, ಪಿಕಾಸೋ, ಇಲ್ಯುಸ್ಟ್ರೇಟರ್ ಆ್ಯಪ್‌ಗ್ಳು ಇತ್ತೀಚೆಗೆ ಕಂಪ್ಯೂಟರ್‌ನಲ್ಲಿ ಅಧಿಕವಾಗಿ ಬಳಸಲ್ಪಡುತ್ತವೆ. ಅದರಂತೆ ಮೊಬೈಲ್ ಫೋನ್‌ನಲ್ಲಿಯೂ ಪಿಕ್ಸಾರ್ಟ್, ಸ್ನಾಪ್ ಶೀಟ್, ಫಿಕ್ಸೆಲ್ ಮುಂತಾದ ಆ್ಯಪ್ ಇಂದಿನ ಟ್ರೆಂಡ್ ಆಗಿದೆ. ಆ್ಯಪ್ ಬಳಸುವುದನ್ನು ತಿಳಿದಿರುವಂತೆ ಕೆಲವು ಕವಿ ವಾಕ್ಯ ಪೋಣಿಸುವ ಕಲೆ ಇಲ್ಲಿ ಬಹುಮುಖ್ಯವೆನಿಸುತ್ತದೆ. ಫೋಟೋ ನಡುವೆ ಸಂಬಂಧಗಳಿಗೆ, ನಮ್ಮ ಭಾವನೆಗಳಿಗೆ ಸಂಬಂಧಿಸಿದ ಬರಹ ಸಾಲು ಎಡಿಟಿಂಗ್ ಮಾಡಿದ ಫೋಟೋ ಇನ್ನಷ್ಟು ಅಚ್ಚುಕಟ್ಟಾಗಿ ಜನರನ್ನು ತಲುಪಲು ಸಾಧ್ಯವಾಗಿದೆ.
ಈ ಕೌಶಲ ನಿಮ್ಮಲ್ಲಿರಲಿ
ಫೋಟೋ ಎಡಿಟಿಂಗ್‌ಗೆ ಸಂಬಂಧಿಸಿದ ವಿವಿಧ ಆ್ಯಪ್‌ನ ಬಗ್ಗೆ ತಿಳಿದಿರಬೇಕು.
ಕಲರಿಂಗ್ ಬಗ್ಗೆ ತಿಳಿದಿರಬೇಕು.
ಜನರ ಅಪೇಕ್ಷೆಯನ್ನು ಅರ್ಥೈಸಬೇಕು.
ಸಮಯ ಪಾಲನೆ ಬಹುಮುಖ್ಯ (ನಿಗದಿತ ಸಮಯದೊಳಗೆ ಕೆಲಸ ಮುಗಿಸುವಿಕೆ).
ಕೆಲಸದ ಕುರಿತು ತಾಳ್ಮೆ ಇರಬೇಕು.
ಕಲ್ಪನಾ ಲೋಕದ ಕುರಿತು ಅರಿತಿರಬೇಕು.
ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆ ಬಹುಮುಖ್ಯ.
ಫೋಟೋಗ್ರಾಫಿ ಬಗ್ಗೆ ತಿಳಿದಿರಬೇಕು.
ಕವಿ ಮನೋಭಾವನೆ ಉಳ್ಳವರಾಗಿರಬೇಕು
ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ
Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.