ಟೂರ್ ಗೈಡ್, ಇವರಿಗೆ ಮಾತು, ಜ್ಞಾನವೇ ಬಂಡವಾಳ
Team Udayavani, Sep 26, 2018, 3:20 PM IST
ಒಬ್ಬೊಬ್ಬರಲ್ಲಿ ಒಂದೊಂದು ಕಲೆಗಳು ಅಡಗಿರುತ್ತವೆ. ಅಂತೆಯೇ ಕೆಲವರಿಗೆ ಊರು ಸುತ್ತುವುದು, ಟ್ರಕಿಂಗ್, ಟ್ರಿಪ್, ಟೂರ್ ಹೋಗುವುದೆಂದರೆ ತುಂಬಾ ಇಷ್ಟ. ಆದರೆ ಕೆಲವರು ಕೇವಲ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಬರುತ್ತಾರೆ ಬಿಟ್ಟರೆ ಅಲ್ಲಿನ ವರ್ಣನೆಯನ್ನು ಮಾಡುವುದಿಲ್ಲ. ಆದರೆ ಇನ್ನು ಕೆಲವರು ತಾವು ಹೋದ ಪ್ರತಿ ಪ್ರದೇಶಗಳನ್ನು ನೆನಪಿನಲ್ಲಿಟ್ಟುಕೊಂಡು ಅದರ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಅಂಥವರಿಗೆ ಟೂರ್ ಗೈಡ್‌ಗಳಾಗಿ ಕೆಲಸವನ್ನು ಮಾಡಬಹುದು.
ಗೈಡ್ ಎಂಬುದು ಸಾಮಾನ್ಯ ವಿಷಯವಲ್ಲ. ಯಾವುದೇ ಪ್ರದೇಶದ ಹಿನ್ನಲೆ, ಆಗಿರುವ ಬದಲಾವಣೆಯನ್ನು ತಿಳಿದು ಪ್ರವಾಸಿಗರಿಗೆ ತನ್ನ ಮಾತಿನಿಂದ ಸಂಪೂರ್ಣವಾಗಿ ಪರಿಚಯಿಸುವುದು ಆತನ ಕರ್ತವ್ಯ. ಹಾಗಾಗಿ ಈ ಗೈಡ್ ಬರೀ ಒಂದು ಭಾಷೆಯನ್ನು ತಿಳಿದಿದ್ದರೆ ಸಾಕಾಗುವುದಿಲ್ಲ. ಬದಲಾಗಿ ಕನಿಷ್ಠ ಐದು- ಆರು ಭಾಷೆಗಳನ್ನಾದರು ಕಲಿತಿರಬೇಕು. ಏಕೆಂದರೆ ಪ್ರವಾಸಿಗರು ದೇಶದ ನಾನಾ ಕಡೆಗಳಿಂದ ಬರುತ್ತಿರುತ್ತಾರೆ. ಅವರಿಗೆ ಅವರದೇ ಭಾಷೆಯಲ್ಲಿ ಇಲ್ಲಿನ ವೈಶಿಷ್ಟ್ಯವನ್ನು ತಿಳಿಸುವುದು ಬಹುಮುಖ್ಯ.
ಹಲವು ಉದ್ಯೋಗಾವಕಾಶ
ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಭಾರತದಲ್ಲಿ ಈಗಂತೂ ಇಂತಹ ಟೂರಿಸಂ ಗೈಡ್‌ಗಳ ಅವಶ್ಯಕತೆ ತುಂಬಾನೇ ಇದೆ. ದಿನಕ್ಕೊಂದು ಪ್ರದೇಶಗಳು ಅಭಿವೃದ್ಧಿ ಹೊಂದಿ ಪ್ರವಾಸೋದ್ಯಮ ತಾಣಗಳಾಗುತ್ತಿವೆ. ಹಾಗಾಗಿ ಖಾಸಗಿ ಉದ್ಯೋಗ ಮಾತ್ರವಲ್ಲದೆ ಸರಕಾರಿ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯೂ ಹೆಚ್ಚಿದೆ. ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಈ ಟೂರಿಸಂಗಳು ವಿಸ್ತರಿಸಿ ದೆ. ಇದರಿಂದ ರೈಲು, ವಿಮಾನ, ಹಡಗು ಎನ್ನದೆ ಎಲ್ಲವೂಗಳಲ್ಲಿ ಪ್ರಯಾಣಿಸುವ ಸಂದರ್ಭ ಸಿಕ್ಕರೂ ಆಶ್ಚರ್ಯ ಪಡುವಂತಹದ್ದೇನಿಲ್ಲ.
ಹಲವು ಕೋರ್ಸ್‌ಗಳು
ಟೂರಿಸಂ ಗೈಡ್ ಅನ್ನು ಕೋರ್ಸ್‌ಗಳ ಮುಖಾಂತರ ಕಲಿಯಬೇಕೆಂದಿಲ್ಲ. ಆದರೂ ಹಲವು ಕೋರ್ಸ್‌ಗಳು, ಪದವಿಗಳು ಈಗಾಗಲೇ ಹಲವರ ಬದುಕನ್ನು ರೂಪಿಸಿದೆ. ಐಐಟಿಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್), ಹಾಗೂ ಡಿಪ್ಲೊಮಾ ಕೋರ್ಸ್‌ಗಳು ಇವೆ. ನಮ್ಮ ಶಿಕ್ಷಣದ ಜತೆ ಜತೆಗೂ ಇದನ್ನು ಕಲಿ ತರೆ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಇದೇ ವೃತ್ತಿಯಲ್ಲಿ ಮುಂದುವರಿಯಬಹುದು. ದೇಶ ಸುತ್ತಿ ನೋಡು ಕೋಶ ಓದಿ ನೋಡು ಅನ್ನುವಂತೆ ಈ ಗೈಡ್ ಕೆಲಸ ಒಂದು ಮಜಾ ನೀಡುವ ಹಾಗೂ ಸದಾ ಹುಮ್ಮಸ್ಸಿನಿಂದ ಇರುವಂತೆ ಮಾಡುವುದಂತು ಸತ್ಯ. ಜತೆಗೆ ಇಂಥವರಿಗೆ ಅವಕಾಶಗಳು ಸಾಕಷ್ಟಿವೆ.
ಬದುಕು ರೂಪಿಸಬಹುದು
ಕೆಲವರು ಹಲವು ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಮಾತುಗಾರಿಕೆಯಲ್ಲಿ ತುಂಬಾ ನಿಪುಣರೂ ಆಗಿರುತ್ತಾರೆ. ಟೂರ್ ಗೈಡ್‌ನ ಮುಖ್ಯ ಬಂಡವಾಳವೇ ಮಾತು. ಕಾಲೇಜುಗಳಲ್ಲಿ ಚಾರಣಕ್ಕೆ ಹೋದಾಗ ಕೆಲವೊಂದು ವ್ಯಕ್ತಿಗಳು ತಾನು ಕಂಡಂದ್ದನ್ನು ಅದ್ಭುತವಾಗಿ ವರ್ಣಿಸುತ್ತಾರೆ. ಇಂಥವರು ಟೂರ್ ಗೈಡ್ ಆಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು.
. ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.