“ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯಲ್ಲಿ ಹೊಸತನ
Team Udayavani, Nov 27, 2019, 4:10 AM IST
ಕಥೆಗಳು ಹುಟ್ಟೋದೇ ಹಾಗೆ. ಎಲ್ಲೋ ಒಂದು ಕಡೆ ನಡೆದು ಹೋದ ಘಟನೆ, ಮಾಸಿ ಹೋದ ನೆನಪು, ಅವಿತುಕೊಂಡಿರುವ ನೋವು, ಹೂತು ಹೋಗಿರುವ ಪಳೆಯುಳಿಕೆಗಳಲ್ಲಿ ಕಥೆಗಳು ಹುಟ್ಟುತ್ತವೆ. ಇವುಗಳೆಲ್ಲದರಲ್ಲಿ ಎಷ್ಟು ಬೇಕೋ ಅಷ್ಟನ್ನು ಮತ್ತೆ ಹೆಕ್ಕಿ ತಂದು ಹೊಸ ತೋರಣ ಕಟ್ಟಿ ಅಲಂಕರಿಸುವ ಹಾಗೆ ಕಳೆದು ಹೋದದ್ದನ್ನು, ಕಳೆದ ಕ್ಷಣವನ್ನು, ಮರು ಸ್ಥಾಪಿಸುವ ಕಲೆಗಾರಿಕೆ ಕಥೆಗಾರನಿಗೆ ಕರಗತವಾಗಿರಬೇಕು. ಇದರಲ್ಲಿ ಕಥೆಗಾರ ಶಿವಕುಮಾರ ಮಾವಲಿ ಅವರ ಟೈಪಿಸ್ಟ್ ತಿರಸ್ಕರಿಸಿದ ಕಥೆ ಕೂಡ ಇಂಥದೇ ಹೊಸ ಯುಗಕ್ಕೆ ತೆರೆದುಕೊಂಡ ಕಥೆಗಳಾಗಿವೆ.
ಘಟನೆ 1
ಹೂ ಮಾರಿ ಜೀವನದೂಡುವ ಹುಡುಗನೊಬ್ಬನ ಬಾಳಿನಲ್ಲಿ ಹೂ ಒಂದು ಸೊಗಸಾದ ಗೆಳತಿಯನ್ನು ಕೊಟ್ಟು, ಗೆಳತಿಯ ಮದುವೆಗೂ ಹೂ ಕೊಟ್ಟು ಬರುವ ಆ ಹುಡುಗ ಅದೊಂದು ದಿನ, ರಸ್ತೆ ಬದಿ ಹೂ ಮಾರುತ್ತಾ ಹೋದಾಗ ತನ್ನ ಗೆಳತಿಯ ಗಂಡ ಹೂ ಮಾರುವ ಹುಡುಗನ ಅಂತಸ್ತನ್ನು ನೋಡಿ ಬಾಕಿ ಹಣದಲ್ಲಿ ಹೇಳುವ ಮಾತು ಹೂ ಮಾರುವವನ ಮನಸ್ಸಿಗೆ ಮುಳ್ಳಾಗಿ ಚುಚ್ಚುವಂತೆ ಹೇಳಿದ್ದಾರೆ.
ಘಟನೆ 2
ಸಿರಿವಂತ ಶಾಸಕರೊಬ್ಬರು ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಲು, ಊರಿನಲ್ಲಿ ಸ್ಥಳೀಯರಿಂದ ನಡೆಯುವ ಪಿತೂರಿಯನ್ನು ನಾನಾ ಪರಿಸ್ಥಿತಿಯನ್ನು ಇಟ್ಟುಕೊಂಡು ಗ್ರಾಮೀಣ ಭಾಗದ ವಾಸ್ತವತೆಯನ್ನು ಈ ಕಥಾ ಸಂಕಲದದಲ್ಲಿ ಕಥೆಯೊಂದರಲ್ಲಿ ಬೆಳಕು ಚೆಲ್ಲಲಾಗಿದೆ.
ಘಟನೆ 3
ಮನೆ ಮಂದಿಯ ಅಂತರಾಳದ ಮಾತನ್ನು, ಎರಡು ಡಸ್ಟ್ ಬಿನ್‌ಗಳ ನಡುವೆ ನಡೆಯುವ ಸಂಭಾಷಣೆಯ ಮೂಲಕ ಲೇಖಕರು ಹೇಳಿರುವುದು ಹೊಸತನದ ಕಥೆಗಳಿಗೆ ಪೂರಕವಾಗಿರುವಂತೆ ಇದೆ.
ಈ ಸಂಕಲನದಲ್ಲಿ ಮೂವತ್ತು ಕಥೆಗಳು ಹಿಂದೆ ನಡೆದದ್ದನ್ನು,ಮುಂದೆ ನಡೆಯುವುದನ್ನು ಹಾಗೂ ನಮ್ಮ ನಡುವೆಯೇ ನಡೆದು ಹೋದದ್ದನ್ನು ನೆನಪಿಸುತ್ತವೆ. ಅವುಗಳ ಹೆಸರುಗಳು ಬೇರೆಯಾಗಿವೇ ಅಷ್ಟೇ, ಒಳಹೊಕ್ಕು ಇಣುಕಿದರೆ ಇದು ನಮ್ಮಲ್ಲೂ ನಡೆದಿದೆ ಅನ್ನುವುದು ಕಥೆಗಳ ಗುಟ್ಟು ಎಂಬುದು ಅರಿಯಬಹುದು. ಇಲ್ಲಿ ಕಥೆಗಾರ ನಮಗೆ ಆಯ್ಕೆಗಳನ್ನು ಬಿಟ್ಟು ಹೋಗಿ¨ªಾರೆ. ಆಯ್ಕೆ ನಮ್ಮದು ಅದು ಕಥೆಯ ಕೊನೆಯನ್ನು ನಾವು ಅಂದುಕೊಂಡಂತೆ ಮುಕ್ತಾಯಗೊಳಿಸಲು ಕಥೆಗಾರ ಬಿಟ್ಟು ಹೋದ ಕಲ್ಪಿತ ಅವಕಾಶ.!
- ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.