ವೆಲ್ತ್ ಮ್ಯಾನೇಜರ್ ವಿಪುಲ ಅವಕಾಶ
Team Udayavani, Aug 14, 2019, 5:00 AM IST
ಜೀವನದಲ್ಲಿ ಹಣದ ನಿರ್ವಹಣೆ ಅತೀ ಮುಖ್ಯ. ಜೀವನ ಸಾಗಿಸಲು ಹಣವೇ ಮುಖ್ಯ ಎಂಬ ಕಾಲದಲ್ಲಿ ಜಾಗೃತೆಯಿಂದ ಹಣವನ್ನು ವ್ಯಯಿಸುವ ಬಗ್ಗೆ ಎಲ್ಲರೂ ಗಮನ ಹರಿಸುತ್ತಾರೆ. ಉದ್ಯಮದಲ್ಲಂತೂ ಹಣ ವ್ಯವಹಾರವೇ ಇರುವುದರಿಂದ ಅದರ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ. ಹಣದ ವ್ಯವಹಾರ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಎಷ್ಟು ಹಣ ಖರ್ಚು ಮಾಡಿದರೆ ಹೇಗೆ ಲಾಭ ಗಳಿಸಬಹುದು ಹೀಗೆ ಅನೇಕ ವಿಷಯಗಳನ್ನು ಬಲ್ಲವನಾಗಿರಬೇಕು. ಹೀಗೆ ಕಂಪೆನಿಗಳಲ್ಲಿ ಹಣದ ವ್ಯವಹಾರಗಳನ್ನು ನಿರ್ವಹಿಸಲು ಒಂದು ಹುದ್ದೆ ಇದೆ. ಅದೇ ವೆಲ್ತ್ ಮ್ಯಾನೇಜರ್.
ಭಾರತದಲ್ಲಿ ವೆಲ್ತ್ ಮ್ಯಾನೇಜರ್‌ಗಳಿಗೆ ಅಭೂತಪೂರ್ವ ಬೇಡಿಕೆ ಇದ್ದು ಇದು ಪದವೀಧರರನ್ನು ಆಕರ್ಷಿಸುತ್ತಿದೆ. ಆರ್ಥಿಕತೆ ಹೆಚ್ಚಾಗುತ್ತಿರುವಂತೆ ಜನರ ಜೀವನ ಮಟ್ಟವು ಸುಧಾರಿಸಿದೆ ಅದಲ್ಲದೆ ಎರಡು ದಶಕಗಳಿಂದ ಭಾರತೀಯರ ಆದಾಯವು ಗಣನೀಯವಾಗಿ ಏರಿಕೆಯಾಗಿದೆ.
ವೆಲ್ತ್ ಮ್ಯಾನೇಜರ್‌ಗಳಿಗೆ ಅಧಿಕ ಬೇಡಿಕೆಯಿದ್ದು ಭಾರತೀಯ ವಿಶ್ವ ವಿದ್ಯಾಲಯದ ಪದವೀಧರರಿಗೂ ಅದರಲ್ಲೂ ವಿಶೇಷವಾಗಿ 950 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಈ ವಿಷಯ ಅಧ್ಯಯನದ ಭಾಗವಾಗಿದೆ.
ಅರ್ಹತೆಗಳು
ಹೆಚ್ಚಿನ ಸಂಸ್ಥೆಗಳು ವ್ಯವಹಾರ ಹಣಕಾಸು ಅಥವಾ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅದಕ್ಕಿಂತ ಹೆಚ್ಚಾಗಿ ಸಂವಹನ ಹಾಗೂ ಇನ್ನೊಬ್ಬರು ಹೇಳುವ ಮಾತನ್ನು ಆಲಿಸುವ ಕೌಶಲವಿರಬೇಕು. ಇದಕ್ಕೆ ತರಬೇತಿ ನಿಮ್ಮನ್ನು ನೇಮಕ ಮಾಡಿಕೊಳ್ಳುವ ಸಂಸ್ಥೆ ಒದಗಿಸುತ್ತದೆ. ಅದಲ್ಲದೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಸರಳವಾಗಿ ವಿವರಿಸುವ ಸಾಮರ್ಥ್ಯ ಮತ್ತು ಸಮಾಲೋಚನ ಕೌಶಲವಿರಬೇಕು.
ಈ ಕ್ಷೇತ್ರದಲ್ಲಿ ವೃತ್ತಿಪರ ಪ್ರಗತಿಗೆ ಅನಿಯಮಿತ ಅವಕಾಶವಿದೆ. ಎಚ್ಡಿಎಫ್ಸಿ, ಐಸಿಐಸಿಐ ಸೇರಿದಂತೆ ಖಾಸಗಿ ಬ್ಯಾಂಕುಗಳು, ಅನ್ರೋ, ಸಿಟಿಗೋಲ್ಡ್ ವೆಲ್ತ್ ಮ್ಯಾನೇಜ್‌ಮೆಂಟ್, ಸಿಟಿಬ್ಯಾಂಕ್‌ಗಳು ಮತ್ತು ಹೂಡಿಕೆ ಸಂಸ್ಥೆಗಳಾದ ಕೊಟಾಕ್ ಸೆಕ್ಯುರಿಟೀಸ್ ಮುಂತಾದ ಬ್ಯಾಂಕುಗಳಲ್ಲಿ ಈ ವೃತ್ತಿಗೆ ತುಂಬಾ ಬೇಡಿಕೆಯಿದೆ. ಇನ್ನು ಕೆಲವರು ತಮ್ಮದೇ ಕಂಪೆನಿ ಸ್ಥಾಪಿಸಿ ಸ್ವತಂತ್ರವಾಗಿ ಹೂಡಿಕೆ ಸಲಹೆ, ಬಂಡವಾಳ ನಿರ್ವಹಣೆ, ತೆರಿಗೆ ಸಲಹೆ, ಇತರ ಪೂರ್ಣ ಶ್ರೇಣಿಯ ಸೇವೆಗಳನ್ನು ನೀಡುತ್ತದೆ.
ಈ ವೃತ್ತಿಯಲ್ಲಿ ವೇತನವೂ ಚೆನ್ನಾಗಿದ್ದು ಆರಂಭಿಕ ವರ್ಷದಲ್ಲಿ ಇವರಿಗೆ 4 ರಿಂಂದ 5 ಲಕ್ಷ ರೂ. ಇರುತ್ತದೆ ಮತ್ತು ವರ್ಷದಿಂದ ವರ್ಷಕ್ಕೆ ಇಲ್ಲಿ ವೇತನ ಕೂಡ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ಇದು ವಿದ್ಯಾರ್ಥಿ ಜೀವನ ಮುಗಿಸಿದವರಿಗೆ ಒಳ್ಳೆಯ ವೃತ್ತಿಯಾಗಿದೆ ಅದಲ್ಲದೆ ಓದಿ ಮನೆಯಲ್ಲಿರುವವರು ಕೂಡ ಈ ಕೋರ್ಸ್ ಮಾಡಿ ವೃತ್ತಿ ಗಿಟ್ಟಿಸಿಕೊಳ್ಳಬಹುದಾಗಿದೆ.
•ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.