ಯೋಗ ಶಿಕ್ಷಣ ಬದುಕಿಗೊಂದು ದಾರಿ


Team Udayavani, Aug 8, 2018, 4:30 PM IST

8-agust-18.jpg

ಮಾನಸಿಕ ನೆಮ್ಮದಿಗಾಗಿ ಕಲಿಯುವಂತಹ ಶಿಕ್ಷಣದ ಸಾಲುಗಳು ಹಲವಾರು ಇವೆ. ದೈಹಿಕವಾಗಿ ಆಟೋಟ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡರೂ ಅಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಇರುತ್ತವೆ. ಪ್ರಸ್ತುತ ಶೈಕ್ಷಣಿಕವಾ
ಗಿಯೂ ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಪಠ್ಯದ ಒಂದು ಭಾಗವಾಗಿ ಪರಿಗಣಿಸಲಾಗುತ್ತಿದೆ. ಪೇಟೆ-ಪಟ್ಟಣಗಳಲ್ಲಿ ಉದ್ಯೋಗ ಪಡೆದಿರುವ ಮಂದಿ, ಬೆಳಗೆದ್ದು, ಜಾಗಿಂಗ್‌, ಸ್ವಿಮ್ಮಿಂಗ್‌ ಅಂತ ಹೊರಡುವ ಯುವ ಜನತೆ ಯೋಗ ಶಿಕ್ಷಣದಿಂದಲೂ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಕೊಂಚ ಗಮನ ಹರಿಸಿದರೆ, ಇಲ್ಲಿಯೂ ಹಲವಾರು ಅವಕಾಶಗಳ ಬಾಗಿಲು ತೆರೆದಿರುತ್ತದೆ.

2015ನೇ ಸಾಲಿನಲ್ಲಿ ಮಧ್ಯಪ್ರದೇಶದಲ್ಲಿ ಎಲ್ಲ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ 35 ಸೀಟ್‌ಗಳು ಮಾತ್ರವೇ ಇದ್ದವು. ಯೋಗ ಕಲಿಯಲು ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾ ಗಿತ್ತು. ಅನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಇತ್ತೀಚೆಗೆ ಸುಮಾರು ಶೇ. 100 ರಷ್ಟು ಹೆಚ್ಚಾಗಿದೆ ಎನ್ನುವುದು ವಿಶೇಷ. ಹೆಚ್ಚಿನ ಕಾಲೇಜು, ಹೈಸ್ಕೂಲ್‌ಗ‌ಳಲ್ಲಿ ಯೋಗ ಕಲಿಸಲು ಅಧ್ಯಾಪಕರನ್ನು ಹುಡುಕುತ್ತಿದ್ದಾರೆ. ಇದರಿಂದ ಯೋಗ ಕೋರ್ಸ್‌ ಗಳ ಅಗತ್ಯ ಹೆಚ್ಚಾಗಿದೆ.

ಶಿಕ್ಷಣ ಸಂಸ್ಥೆಗಳು
ಯೋಗದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿಸಿಕೊಳ್ಳಲು ಈಗ ಹಲವಾರು ಶಿಕ್ಷಣ ಸಂಸ್ಥೆಗಳು ಇವೆ. ಅಕೌಂಟೆನ್ಸ್‌, ಬಿಜಿನೆಸ್‌ ಇನ್ನಿತರ ಕೆಲಸದಲ್ಲಿ ತೊಡಗಿಸಿಕೊಂಡವರು ದಿನದ ಒಂದು ಹೊತ್ತು ಅಥವಾ ದಿನದಲ್ಲಿ ಕನಿಷ್ಟ ಅಂದರೆ ಒಂದು ತಾಸು ಯೋಗ ಕಲಿತರೆ, ಕಾಯಿಲೆಗಳಿಂದ ದೂರವಿರಬಹುದು. ನಾವಿಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ನೋಡಬಹುದು.

ಹರಿದ್ವಾರದಲ್ಲಿ ಯೋಗ ಸಂಬಂಧಿತ ಸ್ನಾತಕೋತ್ತರ ಕೋರ್ಸ್‌ಗಳಿವೆ. ಇಲ್ಲಿ 2009ನೇ ಇಸವಿಯಲ್ಲಿ ಕೇವಲ 40 ಸೀಟ್‌ ಗಳು ಮಾತ್ರವಿದ್ದವು. ಆದರೆ, ಈಗ 10 ಜನ ಒಂದು ಸೀಟಿಗಾಗಿ ಕಾಯುತ್ತಿದ್ದಾರೆ ಎಂದು ಇಲ್ಲಿನ ಉಪನ್ಯಾಸಕ ಗಿರೀಶ್‌ ಮಿಶ್ರ ತಿಳಿಸಿದ್ದಾರೆ. ಯೋಗ ತರಗತಿಗಳ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಅಲ್ಲಿನ ಉಪನ್ಯಾಸಕ ವೃಂದದವರು.ಯೋಗ ವಿಶ್ವಾದ್ಯಂತ ಗಮನ ಸೆಳೆಯುತ್ತಿದೆ.

ಯಂಗ್‌ ಸ್ಟರ್ ಗಳಿಗೆ ತೆರೆದ ಬಾಗಿಲು
ಇಂದಿನ ಯುವ ಪೀಳಿಗೆ ಯೋಗದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಮಾನಸಿಕ ನೆಮ್ಮದಿ ಜತೆಗೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಯೋಗ ಟ್ರೆçನರ್ಗಳ ಸಂಖ್ಯೆಯೂ ಹೆಚ್ಚಾಗಿದೆ. ತಿಂಗಳಿಗೆ 40 ಸಾವಿರ ರೂ.ಆದಾಯ ಗಳಿಸಬಹುದು. ಆರಾಮದಾಯಕ ಜೀವನವನ್ನು ಕೇವಲ ಒಂದು ಯೋಗದಿಂದ ನಿಮ್ಮದಾಗಿಸಿಕೊಳ್ಳಬಹುದು.

ಯೋಗ ಮಾರ್ಗದರ್ಶಕರು
ಯೋಗದ ಬಗ್ಗೆ ಕೊಂಚ ತಿಳಿದುಕೊಂಡಿರಾದರೆ ಪದವಿ ಶಿಕ್ಷಣದಲ್ಲಿ ಯೋಗ ತರಗತಿಗಳಿಗೆ ಸೇರಿಕೊಂಡ ಅನಂತರ, ಎಂಎಸ್ಸಿ ಇನ್‌ ಯೋಗ ಪೂರ್ತಿಗೊಳಿಸಿ, ಯೋಗ ಮಾರ್ಗದರ್ಶಕರಾಗಿ ವೃತ್ತಿ ಕ್ಷೇತ್ರಕ್ಕೆ ಕಾಲಿಡಬಹುದು. ಬೆಂಗಳೂರು, ಮೈಸೂರು, ಕರಾವಳಿಯಾದ್ಯಂತ ಯೋಗ ಕೋರ್ಸ್‌ಗಳು ಇವೆ. ಆದಾಯವನ್ನು ಗಳಿಸಲು ಯೋಗವೂ ಒಂದು ದಾರಿಯಾಗುತ್ತದೆ.

ಫಿಟ್ನೆಸ್‌ ತರಬೇತುದಾರರಾಗಿ
ಆಧುನಿಕ ಯುಗದಲ್ಲಿ ಆಫೀಸು, ಕೆಲಸ ಕಾರ್ಯ ಅಂತ ಮನುಷ್ಯ ನೆಮ್ಮದಿಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಫಿಟ್ನೆಸ್‌ ಬಗ್ಗೆ ಒಂದಿಷ್ಟು ಕಾಳಜಿಯ ಅಗತ್ಯ ಇರುತ್ತದೆ. ರಜಾ ದಿನಗಳಲ್ಲಿ ಜಿಮ್‌ಗೆ ಹೋಗಿ ದೇಹ ದಂಡಿಸಲು ಸಮಯನೂ ಸಿಗುವುದಿಲ್ಲ. ಆದ್ದರಿಂದ ಬಿಡುವಿನ ಸಮಯದಲ್ಲಿ μಟೆ°ಸ್‌ ಕೇಂದ್ರಗಳಿಗೆ ಹೋಗಿ ಕಲಿತು, ಹೊಸದಾದ ಫಿಟ್ನೆಸ್‌ ಕೇಂದ್ರವನ್ನು ಶುರುಮಾಡಿ, ಆದಾಯ ಗಳಿಸಬಹುದು. ಪಬ್ಲಿಕ್‌ ಹೆಲ್ತ್‌ ಸೆಂಟರ್‌, ಕಾಲೇಜು, ಆಸ್ಪತ್ರೆಗಳಲ್ಲಿಯೂ ಸೇರಿಕೊಂಡು ವೃತ್ತಿ ನಿರ್ವಹಿಸಬಹುದು

ವಿವಿಧ ಕೋರ್ಸ್‌
ಸ್ನಾತಕೋತ್ತರ ಪದವಿಯಲ್ಲಿ ಯೋಗಿಕ್‌ ಸೈನ್ಸ್‌, ಡಿಪ್ಲೊಮಾ ಇನ್‌ ಯೋಗ ಮತ್ತು ಮೆಡಿಟೇಷನ್‌, ನ್ಯಾಚುರೋಪತಿಗೆ ಸಂಬಂಧಿಸಿದ ಥೆರಪಿಗಳನ್ನು ಅಧ್ಯಯನ ಮಾಡಬಹುದು. ದಕ್ಷಿಣ ಕನ್ನಡದ ಉಜಿರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾರೆ. ಉಡುಪಿ ಹತ್ತಿರದ ಮಣಿಪಾಲದಲ್ಲಿಯೂ ಪ್ರಕೃತಿ ಚಿಕಿತ್ಸಾ ಕೇಂದ್ರವಿದೆ.

ಶ್ರುತಿ ನೀರಾಯ

ಟಾಪ್ ನ್ಯೂಸ್

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.