ಪ್ರಾಣಿಶಾಸ್ತ್ರ: ಸಂಶೋಧನೆ ಸ್ವೋದ್ಯೋಗದ ಅವಕಾಶ
Team Udayavani, Feb 6, 2019, 7:27 AM IST
Qಈ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ?
ಮೂಲ ವಿಜ್ಞಾನದ ಭಾಗವಾಗಿರುವ ಇದು ಸಂಶೋಧನೆಯಿಂದ ಹಿಡಿದು ಸ್ವ ಉದ್ಯೋಗದವರೆಗೆ ಬೇರೆ ಬೇರೆ ಆಯಾಮಗಳಲ್ಲಿ ಇಂದು ಉದ್ಯೋಗಾವಕಾಶವನ್ನು ನೀಡಿದೆ.
Qಕಲಿಕೆಯ ಅನಂತರ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆಯೇ?
ವಿದ್ಯಾರ್ಥಿಗಳು ಕಲಿಕೆಯ ಅನಂತರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಬದಲು ಪದವಿ ಮಟ್ಟದಲ್ಲೇ ಈ ರೀತಿಯಾಗಿ ಸಂಶೋಧನೆಗಳನ್ನು ನಡೆಸಿ, ಆ ವಿಷಯದಲ್ಲಿ ಮುಂದುವರಿಯುವ ಆಸಕ್ತಿಯನ್ನು ಕೆಲವರಾದರೂ ತೋರಿಸುತ್ತಿದ್ದಾರೆ.
Qಜೀವಶಾಸ್ತ್ರದ ಭಾಗವಾಗಿರುವ ಪ್ರಾಣಿಶಾಸ್ತ್ರವನ್ನು ಪ್ರತ್ಯೇಕವಾಗಿ ಕಲಿಯುವ ಮಹತ್ವ ಏನು?
ವಿದ್ಯಾರ್ಥಿಗಳಿಗೆ ಜೀವವಿಜ್ಞಾನದ ಯಾವುದೇ ವಿಭಾಗಗಳ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ಇರುತ್ತವೆ. ಜೀವಶಾಸ್ತ್ರದ ಭಾಗವಾಗಿರುವ ಪ್ರಾಣಿಶಾಸ್ತ್ರ ಸಂಶೋಧನ ವಿದ್ಯಾರ್ಥಿ ಗಳಿಗೆ ಒಂದು ಉತ್ತಮ ಆಯ್ಕೆ. ಪ್ರಾಣಿ ಗಳ ವರ್ಗೀಕರಣಗಳಿಂದ ಪ್ರಾರಂಭಿಸಿ ಶರೀರಶಾಸ್ತ್ರ, ತಳವಿಜ್ಞಾನ, ಅಣುವಿಜ್ಞಾನ, ವಿಕಸನಶಾಸ್ತ್ರ ಹಾಗೂ ಭೌತಶಾಸ್ತ್ರಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು.
Qಉದ್ಯೋಗ, ಸಂಪಾದನೆ ಗಾಗಿ ಮಾತ್ರ ವಿಜ್ಞಾನ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತೇನು?
ವಿಜ್ಞಾನವನ್ನು ಉದ್ಯೋಗ ಅಥವಾ ಸಂಪಾದನೆಯ ದೃಷ್ಟಿಯಿಂದ ಆಯ್ಕೆ ಮಾಡಬಹುದು ಎನ್ನುವುದು ನನ್ನ ಅನಿಸಿಕೆ. ವಿಷಯದಲ್ಲಿ ವಿಶೇಷವಾದ ಜ್ಞಾನ, ಕ್ರಿಯಾಶೀಲತೆಯನ್ನು ಮೂಡಿಸಿದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪ್ರಾಣಿಶಾಸ್ತ್ರವನ್ನು ಕಲಿತರೂ ವಿವಿಧ ಪ್ರಯೋಗಾಲಯಗಳಲ್ಲಿ, ಅನೇಕ ಸಂಶೋಧನ ಸಂಸ್ಥೆಗಳಲ್ಲಿ ಕೆಲಸ ಪಡೆಯಬಹುದು.
Qಸ್ಪರ್ಧಾತ್ಮಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಪ್ರಾಣಿಶಾಸ್ತ್ರದ ಮಹತ್ವ ಏನು?ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸಂಶೋಧನ ವಿದ್ಯಾರ್ಥಿಯಾಗಿ ಅಥವಾ ಉಪನ್ಯಾಸಕನಾಗಿಯೂ ವೃತ್ತಿಯನ್ನು ಆಯ್ಕೆ ಮಾಡಬಹುದು. ಇದಲ್ಲದೆ, ಜೇನು ಸಾಕಾಣಿಕೆ, ಮೀನುಗಾರಿಕೆ, ಎರೆಹುಳ ಗೊಬ್ಬರಗಳ ತಯಾರಿ ಮುಂತಾದ ಸ್ವ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
Qಪ್ರಾಣಿಶಾಸ್ತ್ರ ಕ್ಷೇತ್ರದಲ್ಲಿ ಆಗಬೇಕಾಗಿರುವ ಬದಲಾವಣೆಗಳು ಏನು? ಹೇಗೆ? ಮೂಲ ಪ್ರಾಣಿಶಾಸ್ತ್ರಗಳ ವಿಭಾಗಗಳಾದ ಟೇಕ್ಸೊನೋಮಿ (ಜೀವ ವರ್ಗೀಕರಣಶಾಸ್ತ್ರ), ಕೀಟಶಾಸ್ತ್ರಗಳಂತಹ ವಿಷಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಅಧ್ಯಯನ ಮತ್ತು ಸಂಪನ್ಮೂಲ ವ್ಯಕ್ತಿಗಳು ತಯಾರಾಗಬೇಕಿದೆ. ಪದವಿ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಂಗಾಂಶ ರಚನೆಯನ್ನು ತಿಳಿಸಿ ಕೊಡುವುದಕ್ಕಾಗಿ ಕೆಲವೊಂದು ಪ್ರಾಣಿಗಳ ಡಿಸೆಕ್ಷನ್ ಆದರೂ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.