100ರ ಕರ್ಣೆ; 101ರ ಉಮಿಲ್‌! 


Team Udayavani, Nov 8, 2018, 12:25 PM IST

8-november-9.gif

ಅಂತೂ ತುಳು ಸಿನೆಮಾಲೋಕದ 100ನೇ ಸಿನೆಮಾ ಯಾವುದು ಎಂಬುದು ಕೊನೆಗೂ ಫಿಕ್ಸ್‌ ಆದಂತಾಗಿದೆ. ಅರ್ಜುನ್‌ ಕಾಪಿಕಾಡ್‌ ಮುಖ್ಯ ತಾರಾಗಣದ ‘ಕರ್ಣೆ’ ಸಿನೆಮಾ ಇದೇ ತಿಂಗಳಿನಲ್ಲಿ ಬಿಡುಗಡೆ ಯಾಗಲಿದ್ದು, ಇದು ತುಳುವಿನ 100ನೇ ಸಿನೆಮಾವಾಗಲಿದೆ ಎಂಬುದು ಲೇಟೆಸ್ಟ್‌ ಮಾಹಿತಿ. ಸದ್ಯ 99ನೇ ಸಿನೆಮಾ ‘ಕೋರಿ ರೊಟ್ಟಿ’ ಪ್ರದರ್ಶನದಲ್ಲಿದೆ. ಇದಾದ ಬಳಿಕ ಬೇರೆ ಸಿನೆಮಾ ಯಾವುದಾದರೂ ತೆರೆಕಾಣುವುದಿದ್ದರೆ ಆ ಸಿನೆಮಾವೇ 100ನೇ ಸಿನೆಮಾವಾಗಲಿದೆ. ಹೀಗಾಗಿ ಸದ್ಯದ ಮಾಹಿತಿ ಪ್ರಕಾರ 100ರ ಗಡಿಬಿಡಿಯಲ್ಲಿ ಬೇರೆ ಯಾರು ಕಾಣುತ್ತಿಲ್ಲ. ಹೀಗಾಗಿ ‘ಕರ್ಣೆ’ 100ನೇ ಸಿನೆಮಾವಾಗುವುದು ಬಹುತೇಕ ಪಕ್ಕಾ ಆದಂತಾಗಿದೆ.

ಬಹುತೇಕ ಮಲ್ಪೆ ಭಾಗದಲ್ಲಿಯೇ ಶೂಟಿಂಗ್‌ ಆಗಿರುವ ಹಾಗೂ ಮೀನುಗಾರಿಕಾ ಸಂಬಂಧಿತ ಕಥೆಯ ಎಳೆಯನ್ನು ಹೊಂದಿರುವ ಕರ್ಣೆ ಸಿನೆಮಾದಲ್ಲಿ ಕೋಸ್ಟಲ್‌ ವುಡ್‌ನ‌ ಖ್ಯಾತನಾಮರು ಅಭಿನಯಿಸಿದ್ದಾರೆ. ಕಾಮಿಡಿ ಮೂಡ್‌ ನಲ್ಲಿಯೇ ಈ ಸಿನೆಮಾ ಮೂಡಿ ಬಂದಿದೆ. ಇದರ ಟೀಸರ್‌ ಕೂಡ ಈಗಾಗಲೇ ಸಖತ್‌ ಸುದ್ದಿ ಮಾಡಿತ್ತು. ಕಡಲಿನಲ್ಲಿ ಗುದ್ದಾಡುವ ವಿನೂತನ ಕಥಾಹಂದರದ ಸಿನೆಮಾ ಇದಾಗಿದೆ. ಸಮುದ್ರದಲ್ಲಿ ನಾಲ್ಕು ದೋಣಿಗಳು ಸುತ್ತಾಡುವ ವಿಭಿನ್ನ ದೃಶ್ಯವನ್ನು ಟೀಸರ್‌ನಲ್ಲಿ ಬಳಸಲಾಗಿದೆ.

ತಾರಾಗಣದಲ್ಲಿ ಪ್ರಮುಖರು
ದೇವದಾಸ್‌ ಕಾಪಿಕಾಡ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸಾಯಿಕೃಷ್ಣ, ಗೋಪಿನಾಥ್‌ ಭಟ್‌, ಮಂಜು ರೈ ಮೂಳೂರು, ವಿಸ್ಮಯ ವಿನಾಯಕ್‌ ಸೇರಿದಂತೆ ಪ್ರಮುಖರ ತಾರಾಗಣದಲ್ಲಿ ಸಿನೆಮಾ ರೆಡಿಯಾಗಿದೆ. ರಕ್ಷಿತ್‌ ಎಸ್‌.ಕೋಟ್ಯಾನ್‌ ಹಾಗೂ ರಕ್ಷಿತ್‌ ಎಚ್‌.ಸಾಲಿಯಾನ್‌ ನಿರ್ಮಾಣದ ಈ ಸಿನೆಮಾಕ್ಕೆ ಸಾಕ್ಷಾತ್‌ ಮಲ್ಪೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಘು ಧನ್ವಂತರಿ ಸಂಗೀತ ನೀಡಿದ್ದಾರೆ. ಕೆಲವೇ ದಿನದಲ್ಲಿ ಸಿನೆಮಾದ ಹಾಡುಗಳು ಕೂಡ ಬಿಡುಗಡೆಯಾಗಲಿವೆ ಎಂಬುದು ಸದ್ಯದ ಮಾಹಿತಿ.

ಗ್ರಾಫಿಕ್ಸ್‌ ತಂತ್ರಜ್ಞಾನ
ಈ ಮಧ್ಯೆ ಕೋಸ್ಟಲ್‌ವುಡ್‌ನ‌ 101ರ ಸಿನೆಮಾವಾಗಿ ‘ಉಮಿಲ್‌’ ರಿಲೀಸ್‌ ಆಗಲಿದೆ. ಡಿಸೆಂಬರ್‌ನಲ್ಲಿ ಉಮಿಲ್‌ ಹಾರಾಟ ಆರಂಭವಾಗಲಿದೆ. ಭವಾನಿ ಫಿಲ್ಮ್ ಮೇಕರ್ ಬ್ಯಾನರ್‌ನಲ್ಲಿ ತಯಾರಾದ ಕರುಣಾಕರ ಶೆಟ್ಟಿ, ಪ್ರಜ್ಞೆಶ್ ಶೆಟ್ಟಿ, ಪ್ರಜ್ವಲ್‌ ಶೆಟ್ಟಿ ನಿರ್ಮಾಣದ ರಂಜಿತ್‌ ಸುವರ್ಣ ನಿರ್ದೇಶನದ ತುಳು ಚಿತ್ರರಂಗದ ಮೊದಲ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿದ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ವಿಶೇಷವೆಂದರೆ, ತುಳು ಚಿತ್ರರಂಗದ ಇತಿಹಾಸದಲ್ಲೆ ಮೊತ್ತ ಮೊದಲ ಬಾರಿಗೆ ದೊಡ್ಡ ಮೊತ್ತಕ್ಕೆ ಹಿಂದಿ ಡಬ್ಬಿಂಗ್‌ ರೈಟ್‌ ಸೇಲಾಗಿದೆ. ಹೀಗಾಗಿ ಇನ್ನು ಮುಂದೆ ಹಿಂದಿ ಚಾನಲ್‌ಗ‌ಳಲ್ಲಿ ತುಳು ಚಿತ್ರವೊಂದು ಪ್ರದರ್ಶನಗೊಳ್ಳುತ್ತಿರುವುದು ತುಳುನಾಡಿಗೆ ಹೆಮ್ಮೆಯ ವಿಷಯಕ್ಕೆ ಉಮಿಲ್‌ ಪಾತ್ರವಾಗಿದೆ. 

8 ವಿಭಿನ್ನ ಪಾತ್ರ
ಹಲವು ವಿಶೇಷತೆಗಳನ್ನು ಒಳಗೊಂಡ ಉಮಿಲ್‌ ಚಿತ್ರಕ್ಕೆ ಮೊದಲ ಬಾರಿಗೆ ಪವರ್‌ ಸ್ಟಾರ್‌ ಪುನಿತ್‌ ರಾಜ್‌ ಕುಮಾರ್‌ ತುಳು ಹಾಡೊಂದನ್ನು ಹಾಡಿದ್ದಾರೆ. ಅವರ ಮಾಲಕತ್ವದ ಪಿ.ಆರ್‌. ಕೆ. ಆಡಿಯೋ ಸಂಸ್ಥೆ ಉಮಿಲ್‌ನ ಆಡಿಯೋ ರೈಟ್ಸ್‌ ಖರೀದಿಸಿದ್ದು, ಮತ್ತೊಂದು ವಿಶೇಷ. ಅರವಿಂದ ಬೋಳಾರ್‌, ಉಮೇಶ್‌ ಮಿಜಾರ್‌, ಅರ್ಜುನ್‌ ಕಾಪಿಕಾಡ್‌ ಈ ಸಿನೆಮಾದಲ್ಲಿ ಹಾಡಿದ್ದಾರೆ. ಬೋಜರಾಜ್‌ ವಾಮಂಜೂರು ಅವರು 8 ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನವೀನ್‌ ಡಿ. ಪಡೀಲ್‌ ಮುಖ್ಯ ಪಾತ್ರದಲ್ಲಿದ್ದಾರೆ. ಯಕ್ಷಗಾನದ ಚಾರ್ಲಿ ಚಾಪ್ಲಿನ್‌ ಸೀತಾರಾಮ ಕಟೀಲ್‌ ಕೂಡ ಮೊದಲ ಬಾರಿಗೆ ಉಮಿಲ್‌ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದು ಹರೀಶ್‌ ಕೊಡ್ಪಾಡಿ ಸಂಕಲನ ಪವನ್‌ ಕರ್ಕೇರ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

16-

Shelter: ಸೂರು ಹುಡುಕಲೆಂದು ಹೊರಟೆ

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.