ಹಿಮಾಲಯಕ್ಕೆ ಹೆಜ್ಜೆ ಹಾಕಿದ ನಡೆ


Team Udayavani, Jan 23, 2020, 5:07 AM IST

led-14

ಕುತೂಹಲ ಪ್ರದೇಶಕ್ಕೆ ಹೋಗುವುದೆಂದರೆ ನಿಜಕ್ಕೂ ಸಾಹಸ ಹಾಗೂ ಮೈ ರೋಮಾಂಚನಗೊಳ್ಳುವ ವಿಚಾರ. ಚಿತ್ರದಲ್ಲಿ ಹಿಮಾಲಯದ ಸೌಂದರ್ಯವನ್ನು ನೋಡಿ ಖುಷಿ ಪಟ್ಟಿದ್ದೆ. ಆದರೆ ಪ್ರತ್ಯಕ್ಷವಾಗಿ ನಾನೇ ಅಲ್ಲಿ ಹೋಗುತ್ತೇನೆ ಎಂದು ಕಣ್ಮನಸ್ಸಿನಲ್ಲಿಯೂ ನೆನಪಿಸಿಕೊಂಡಿರಲಿಲ್ಲ. ಹೌದು ಅಂತಹ ಒಂದು ವಿಶೇಷ ಜೀವನಾನುಭವ ನೀಡಿದೆ ಈ ಪ್ರವಾಸ.

ಹಿಮಾಲಯವೆಂದರೆ ಸಂಸ್ಕೃತದಲ್ಲಿ ಹಿಮದ ಮನೆ ಎಂದರ್ಥ. ಹಿಮಾಲಯ ಭೂಮಿಯ ಅತ್ಯಂತ ವಿನೂತನ ಪರ್ವತ ಶ್ರೇಣಿಗಳಲ್ಲೊಂದು. ನನಗೆ ಎಲ್ಲೋ ಓದಿದ ನೆನಪು ಸುಮಾರು 25 ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ ಭೂಭಾಗ ಒಡೆದು ಇಂಡೋ ಆಸ್ಟ್ರೇಲಿಯನ್‌ ಭೂಭಾಗ ಯುರೋಪಿಯನ್‌ ಭೂಭಾಗದತ್ತ ತೇಲಲಾರಂಭಿಸಿದಂತೆ.

ಸುಮಾರು 4.7 ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯವೆಂಬ ಪರ್ವತ ಸೃಷ್ಟಿಯಾಯಿತಂತೆ. ಪುರಾಣ ಪ್ರೇಮಿಗಳು ಇದನ್ನು ಸಾಕ್ಷಾತ್‌ ಶಿವನೇ ವಾಸಿಸಿರುವ ಭೂಕೈಲಾಸ ಎಂದು ನಂಬುತ್ತಾರೆ. ಅಂತಹ ಸೌಂದರ್ಯ, ಪ್ರಕೃತಿ, ರಹಸ್ಯ, ಹಿಮಾವೃತ, ಭಯಾನಕ, ಕುತೂಹಲ ಪ್ರದೇಶಕ್ಕೆ ಹೋಗುವುದೆಂದರೆ ನಿಜಕ್ಕೂ ಸಾಹಸ ಹಾಗೂ ಮೈ ರೋಮಾಂಚನಗೊಳ್ಳುವ ವಿಚಾರ. ಹಳ್ಳಿ ಹುಡುಗಿ ನಾನು. ಚಿತ್ರದಲ್ಲಿ ಹಿಮಾಲಯದ ಸೌಂದರ್ಯ ರೋಚಕತೆಯನ್ನು ನೋಡಿ ಖುಷಿಪಟ್ಟಿದ್ದೆ. ಆದರೆ ಪ್ರತ್ಯಕ್ಷವಾಗಿ ನಾನೇ ಅಲ್ಲಿ ಹೋಗುತ್ತೇನೆ ಎಂದು ಕಣ್ಮನಸ್ಸಿನಲ್ಲಿಯೂ ನೆನಪಿಸಿಕೊಂಡಿರಲಿಲ್ಲ. ಹೌದು ಅಂತಹ ಒಂದು ವಿಶೇಷ ಜೀವನಾನುಭವ ನೀಡಿದ ಪ್ರವಾಸ ಕಥನವೇ ನನ್ನ ನಡೆ ಹಿಮಾಲಯದ ಕಡೆ ಕನಸು ನನಸಾದ ಬಗೆ.

ಆಯ್ಕೆ ಶಿಬಿರದಲ್ಲಿ ತೇರ್ಗಡೆಯಾಗಬೇಕು
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪರೀಕ್ಷೆ. ಹಿಮಾಲಯದ ತುತ್ತತುದಿಯಲ್ಲಿ ಫ‌ಲಿತಾಂಶದ ನೀರಿಕ್ಷೆ. ನಾನೇನು ಬರೆದಿದ್ದೇನೆ ಎಂದು ಆಲೋಚಿಸಬೇಡಿ. ನನ್ನದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೇಪೆಜಾರು ಎಂಬ ಚಿಕ್ಕ ಊರು. ಬಾಲ್ಯದಲ್ಲಿ ಶಾಲಾ ಮೈದಾನದಲ್ಲಿ ಸಹಪಾಠಿಗಳೊಂದಿಗೆ ಆಟೋಟದಲ್ಲಿ ಪಾಲ್ಗೊಳ್ಳುತ್ತಿದ್ದೆ. ಟಿ.ವಿ ಪೇಪರ್‌ಗಳಲ್ಲಿ ನಮ್ಮ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮೈದಾನ ಕಂಠೀರವ ಸ್ಟೇಡಿಯಂನ ಹೆಸರು ಕೇಳುತ್ತಿದ್ದೆ. ಒಂದು ದಿನವಾದರೂ ಅದರೊಳಗೆ ಪ್ರವೇಶ ಪಡೆದು ಏನನ್ನಾದರೂ ಸಾಧಿಸಬೇಕೆಂದು ಆಸೆಪಟ್ಟಿದ್ದೆ. ಅಂತಹದೊಂದು ಅವಕಾಶ ಸಿಕ್ಕಿದ್ದು ಹಿಮಾಲಯ ಪರ್ವತಾರೋಹಣ ಆಯ್ಕೆ ಶಿಬಿರದಲ್ಲಿ. ಎರಡು ವಾರದ ಬಳಿಕ ನನಗೆ ಪರ್ವತಾರೋಹಣಕ್ಕೆ ಆಯ್ಕೆಯಾದ ಬಗ್ಗೆ ಸಂದೇಶ ಬರುತ್ತದೆ. ಅನಂತರದ ಸವಿ ನೆನಪು ಹೇಗಿತ್ತು ಎಂಬುದನ್ನು ಮುಂದಕ್ಕೆ ನೀವೆ ಓದಿ.

ಹೊಸದಿಲ್ಲಿಯತ್ತ ಪಯಣ
ಸುಮಾರು 350ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಲ್ಲಿ 120ರಷ್ಟು ವಿದ್ಯಾರ್ಥಿಗಳು ಪರ್ವತಾರೋಹಣಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ ನಾನು ಒಬ್ಬಳು. ರೈಲಿನಲ್ಲಿ ಹೊಸದಿಲ್ಲಿಯತ್ತ ಪಯಣ ಆರಂಭ. ರೈಲು ದಿಲ್ಲಿಯ ನಿಜಾಮುದ್ದೀನ್‌ ರೈಲ್ವೇ ಸ್ಟೇಶನ್‌ ತಲುಪಿತು. ಅಲ್ಲಿಂದ ಶ್ರೀನಗರಕ್ಕೆ ಹೋಗಬೇಕಿತ್ತು. ಐಎಂಎಫ್ನ ಸುಸಜ್ಜಿತ ವಾಹನ ನಮಗಾಗಿ ಕಾಯುತ್ತಾ ಇತ್ತು. ನಾವು ಹೋಗಬೇಕಾಗಿದ್ದದ್ದು ಜಮ್ಮು ಕಾಶ್ಮೀರದ ಸೋನಾ ಮಾರ್ಗಕ್ಕೆ. ಒಂದು ರೀತಿಯ ಸಂದಿಗ್ಧ ವಾತಾವರಣಕ್ಕೆ ಸದಾ ಪ್ರಚಾರವಾಗುತ್ತಿದ್ದ ಪ್ರದೇಶ ಅದು. ಸೋನಾ ಮಾರ್ಗಕ್ಕೆ ತಲುಪುತ್ತಾ ಇದ್ದ ಹಾಗೇ ಶಿಸ್ತು, ಸಮಯಪಾಲನೆ, ಜವಾಬ್ದಾರಿಗಳು ಹೊಣೆಗಾರಿಕೆಯ ಒತ್ತಡಗಳು ಕಾಣಬಂದವು. ಯಾಕೆಂದರೆ ನಾವು 25 ದಿನಗಳ ಕಾಲ ಸೈನಿಕರ ಮಧ್ಯೆಯೇ ನಮ್ಮ ಹಿಮಾಲಯ ಪರ್ವತಾರೋಹಣದ ಕಾರ್ಯಚಟುವಟಿಕೆಯನ್ನು ಮಾಡಬೇಕಾಗಿತ್ತು.

ಟೆಂಟ್‌ಗಳೇ ನಮಗಾಧಾರ
ವಿಚಿತ್ರ ವಿಶೇಷ ಪ್ರದೇಶ ಅದು. ಸುತ್ತಲೂ ಗಗನಕ್ಕೆ ಮುತ್ತಿಕ್ಕುವ ಪರ್ವತಗಳು, ಹಿಮಾವೃತಗೊಂಡ ಪ್ರದೇಶಗಳು. ಅಲ್ಲಲ್ಲಿ ಹರಿದು ಹೋಗುವ ನದಿಗಳು, ನಿರ್ಜನ ಪ್ರದೇಶ, ಹಕ್ಕಿಗಳ ಚೀರಾಟ ಇಲ್ಲ. ಪ್ರಾಣಿಗಳ ಓಡಾಟ ಇಲ್ಲ. ಆದರೂ ಕ್ಷಣ ಕ್ಷಣಕ್ಕೂ ಭಯ. ವಾಸಿಸಲು ಮನೆಯಿಲ್ಲ. ಕಟ್ಟಿದ ಟೆಂಟ್‌ಗಳೇ ನಮ್ಮ ಮನೆ. ಒಂದಿಷ್ಟು ಗುಂಪನ್ನು ಬಿಟ್ಟರೂ ದಾರಿತಪ್ಪುವ ಮುನ್ಸೂಚನೆ, ಎಲ್ಲವೂ ಹೊಸತನ. ಅಬ್ಟಾಬ್ಟಾ ಒಮ್ಮೆ ಹಿಂದೆ ಬಂದರೆ ಸಾಕು ಎನಿಸಿತ್ತು. ಆದರೆ ದಿನಕಳೆದಂತೆ ಅಲ್ಲಿ ಕಂಡ ಅನುಭವ ಹಿಮಾಲಯಕ್ಕೆ ಹಿಮಾಲಯವೇ ಸಾಟಿ. ಅದಕ್ಕೆ ನಾನೇ ಅಚ್ಚುಮೆಚ್ಚಿನ ಸಹಪಾಠಿ ಎನ್ನುವ ಮಟ್ಟಕ್ಕೆ ನನ್ನ ಖುಷಿ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು.

11,500 ಅಡಿ ಎತ್ತರ
ಸುಮಾರು 11,500 ಅಡಿ ಎತ್ತರಕ್ಕೆ ಏಕಾಂಗಿಯಾಗಿ ಏರಬೇಕಾದ ಚಟುವಟಿಕೆಯಾಗಿರಬಹುದು. ಗಗನಕ್ಕೆತ್ತರವಾಗಿರುವ ಪರ್ವತವನ್ನು ಏರಿ ಹಿಂದಿರುಗಿ ಇಳಿಯಬೇಕಾದ ಪರ್ವತಾರೋಹಣ ಎಂಬ ಪ್ರಾಣಾಪಾಯದ ಪಯಣ ನಿಜಕ್ಕೂ ಒಂದು ಸಾಹಸವೇ ಸರಿ. ಅದನ್ನೆಲ್ಲಾ ಪೂರೈಸಿದ ನಾನು ನಿಜವಾಗಿ ಇಂದು ಒಬ್ಬ ಧೈರ್ಯವಂತೆಯಾಗಿದ್ದೇನೆ. ಯಾವುದನ್ನು ಆಲೋಚಿಸಿ ಮುನ್ನಡೆ ಇಟ್ಟರೆ ಗುರಿ ತಲುಪಬಹುದು ಎನ್ನುವ ಸತ್ಯಾಂಶ ನನಗೀಗ ಅರಿವಾಗಿದೆ. ಹಿಮಾಲಯ ತಲುಪಬೇಕಾದರೆ ಅನೇಕ ನದಿ-ಕಣಿವೆಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅಪಾಯಗಳು ಬರುವುದು ಸಹಜ. ಅದಕ್ಕಾಗಿ ಒಬ್ಬ ಪರ್ವತಾರೋಹಿ ಯಾವ ರೀತಿ ಮುಂಜಾಗ್ರತಾ ಕ್ರಮ ಹೊಂದಿರಬೇಕು ಎಂಬುದನ್ನು ಸ್ವತಃ ನಾನೇ ಪ್ರಯೋಗಾತ್ಮಕವಾಗಿ ತೊಡಗಿಸಿಕೊಂಡದ್ದು ಅನೇಕ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಯಿತು.

ಅನಂತರ ಅಲ್ಲಿಂದ ಲಡಾಕ್‌, ಲೇ, ಸಿಯಾಚಿನ್‌, ಕಾರ್ಗಿಲ್‌ ಯುದ್ಧಭೂಮಿ, ಜೊಜಿಲಾಮಾರ್ಗ, ಹಿಮಾಚಲ ಪ್ರದೇಶ, ಮನಾಲಿಯಂತಹ ಪ್ರದೇಶಕ್ಕೆ ಹೋಗಿ ಅಲ್ಲಿನ ಅನುಭವವನ್ನು ಪಡೆದೆನು. ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದ ಈ ಸರಕಾರದ ಯೋಜನೆ ನಿಜವಾಗಿಯೂ ಮರೆಯಲಾರದ ನೆನಪು.

ಪ್ರತಿದಿನ ವ್ಯಾಯಾಮ
ಕೊರೆಯುವ ಚಳಿ, ಮಂಜಿನ ಮಳೆ, ಪೂರ್ತಿ ಬದಲಾದ ವಾತಾವರಣವನ್ನು ಹೊಂದಾಣಿಕೆ ಆಗುವುದೇ ಒಂದು ಚಾಲೆಂಜಾಗಿತ್ತು. ಆದರೆ ಪ್ರತಿದಿನ ಮಾಡಿಸುತ್ತಿದ್ದ ವ್ಯಾಯಾಮಗಳು ಪರಿಸ್ಥಿತಿ ನಿಭಾಯಿಸಲು ಸಹಕಾರಿಯಾಗಿದ್ದವು. ಅನೇಕ ಚಟುವಟಿಕೆಗಳನ್ನು ಪೂರೈಸಿ ಅಂತಿಮವಾಗಿ ಹಿಮಾಲಯದ ತುತ್ತ ತುದಿಗೆ ತಲುಪಿದ್ದ ಪಯಣ ವರ್ಣಿಸಲು ಅಸಾಧ್ಯ. ದೈತ್ಯಾಕಾರದ ಕಲ್ಲು ಬಂಡೆಗಳಿಂದ ಕೂಡಿದ ಪರ್ವತಗಳನ್ನು ಏರಬೇಕಾಗಿ ಕೆಳಕ್ಕೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಗಿತ್ತು.

ನಾವು 25 ದಿನಗಳ ಕಾಲ ಸೈನಿಕರ ಮಧ್ಯೆಯೇ ಕಾರ್ಯಚಟುವಟಿಕೆ ಮಾಡಬೇಕಾಗಿತ್ತು. ವಾಸಿಸಲು ಮನೆಯಿಲ್ಲ. ಕಟ್ಟಿದ ಟೆಂಟ್‌ಗಳೇ ನಮ್ಮ ಮನೆ. ಒಂದಿಷ್ಟು ಗುಂಪನ್ನು ಬಿಟ್ಟರೂ ದಾರಿತಪ್ಪುವ ಮುನ್ಸೂಚನೆ, ಎಲ್ಲವೂ ಹೊಸತನ.

– ಸುಮಲತಾ ಬಜಗೋಳಿ, ಆಳ್ವಾಸ್‌ ಕಾಲೇಜು ಮೂಡುಬಿದಿರೆ

ಟಾಪ್ ನ್ಯೂಸ್

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.