ಕೊಂಕಣಿಯ ಕಾಂತಾರ್‌ನಲ್ಲಿ ಜಾಕಿಶ್ರಾಫ್!
Team Udayavani, Dec 6, 2018, 1:09 PM IST
ಇತ್ತೀಚೆಗೆ ಉತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದ ‘ಸೋಫಿಯಾ’ ಕೊಂಕಣಿ ಚಿತ್ರದ ನಿರ್ಮಾಪಕಿ ಜಾನೆಟ್ ನೊರೊನ್ಹಾ ನಿರ್ಮಾಣದ ಎರಡನೇ ಚಿತ್ರ ‘ಕಾಂತಾರ್’ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಕಳೆದ ವಾರ ಚಿತ್ರದ ಆಡಿಯೋ ಮತ್ತು ಟೀಸರ್ ರಿಲೀಸ್ ಆಗಿದೆ. ಬಾಲಿವುಡ್ ನಟ ಜಾಕಿಶ್ರಾಫ್ ಇದೇ ಮೊದಲ ಬಾರಿ ಕೊಂಕಣಿ ಚಿತ್ರಕ್ಕೆ ಬಣ್ಣಹಚ್ಚಿರುವುದು ಚಿತ್ರದ ವಿಶೇಷ. ಗೋವಾ ಕೊಂಕಣಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಕರಾವಳಿಯ ಕೊಂಕಣಿ ಭಾಷೆಗೂ ಡಬ್ ಆಗಲಿದೆ.
ಬಹುಭಾಷಾ ತಾರೆ ಎಸ್ತಾರ್ ನೊರೊನ್ಹಾ ನಾಯಕಿಯಾಗಿದ್ದು, ಟಾಲಿವುಡ್ ರ್ಯಾಪರ್ ನೋಯಲ್ ಸಿಯಾನ್ ನಾಯಕ. ವೆಲ್‌ರೋಸ್ ಪಿರೇರ, ಲೂಯಿಸ್ ಬಚನ್, ಡೊಮಿನಿಕ್, ಡೊಲ್ಲಾ, ಲಿಬಿ, ಮೀನಾ, ಚಿತ್ರಾ ಅಫೋನ್ಸೊ, ಡೊನಾಲ್ಡ್ ಕೊಲಾಸೊ ಬಣ್ಣಹಚ್ಚಿದಾರೆ. ಗೋವಾದಲ್ಲೇ ಶೂಟಿಂಗ್ ನಡೆದಿದ್ದು, ಅಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರ ಸೆಟ್ಟೇರಿದೆ. ಕಾಂತಾರ್ ಎಂದರೆ ಹಾಡು. ಇದೊಂದು ಸಂಗೀತಮಯ ಲವ್ ಸ್ಟೋರಿ ಎನ್ನುತ್ತಾರೆ ನಟಿ ಎಸ್ತಾರ್. ಆದಿತ್ಯ ಬರ್ವೆ ಸಂಗೀತ ಸಂಯೋಜನೆಯಲ್ಲಿ ನಾಲ್ಕು ಹಾಡುಗಳಿವೆ. ಜನವರಿಯಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Bengaluru: ಕೆರೆ ಒತ್ತುವರಿ ಮಾಡಿದ್ದ ಮೂವರಿಗೆ 1ವರ್ಷ ಜೈಲು
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.