ಕೋಸ್ಟಲ್‌ವುಡ್‌ಗೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ , ಸುನಿಲ್ ಶೆಟ್ಟಿ
Team Udayavani, Sep 20, 2018, 1:13 PM IST
‘ನಾನು ತುಳು ಚಿತ್ರದಲ್ಲಿ ಅಭಿನಯಿಸುತ್ತೇನೆ. ಜತೆಗೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ ಅವರೆಲ್ಲ ಈ ಸಿನೆಮಾದಲ್ಲಿ ಕೈ ಜೋಡಿಸಲಿದ್ದಾರೆ. ಯಾರೇ ನಿರ್ಮಾಪಕನಾಗಿದ್ದರೂ, ನನ್ನ ಭಾಷೆಯ ಸಿನೆಮಾದಲ್ಲಿ ನಾನು ಬಣ್ಣ ಹಚ್ಚಲು ರೆಡಿ ಇದ್ದೇನೆ. ಈ ಚಿತ್ರದಿಂದ ಬರುವ ಸಂಪೂರ್ಣ ಹಣವನ್ನು ಬಂಟ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡೋಣ… ಹೀಗೆ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಬಾಲಿವುಡ್ ನಟ, ‘ಆ್ಯಕ್ಷನ್ ಹೀರೋ’ ಸುನೀಲ್ ಶೆಟ್ಟಿ ಹೇಳುತ್ತಿದ್ದಂತೆ ಕೋಸ್ಟಲ್ ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿದೆ.
ಶತಕದ ಸಿನೆಮಾದ ಧಾವಂತದಲ್ಲಿರುವ ಕೋಸ್ಟಲ್ ವುಡ್‌ನಲ್ಲಿ ಸುನಿಲ್ ಶೆಟ್ಟಿ ಮಾತುಗಳು ಸಿನೆಮಾ ರಂಗಕ್ಕೆ ಇನ್ನಷ್ಟು ಟಾನಿಕ್ ಒದಗಿಸಿದಂತಾಗಿದೆ. ಅದರಲ್ಲೂ ಅವರ ಜತೆಗೆ ತುಳುನಾಡಿನ ಬಾಲಿವುಡ್‌ನ ಖ್ಯಾತನಾಮರನ್ನು ಕೂಡ ಕರೆತರುವ ಬಗ್ಗೆ ಶೆಟ್ಟರ ಮಾತು ಕೋಸ್ಟಲ್‌ವುಡ್‌ಗೆ ಆನೆ ಬಲ ದೊರಕಿದಂತಾಗಿದೆ.
ಅಂದಹಾಗೆ ಮೂಲತಃ ಮಂಗಳೂರಿನವರಾದ ಸುನೀಲ್ ಶೆಟ್ಟಿ ಹಿಂದಿಯಲ್ಲಿ ಒಂದೊಮ್ಮೆ ಆ್ಯಕ್ಷನ್ ಹೀರೋ ಎಂದೇ ಗುರುತಿಸಿಕೊಂಡವರು. ಆದರೆ, ತನ್ನದೇ ಭಾಷೆ ತುಳುವಿನಲ್ಲಿ ಅವರು ಇಲ್ಲಿಯವರೆಗೆ ಸಿನೆಮಾ ಮಾಡಿರಲಿಲ್ಲ. ವಿಶೇಷವೆಂದರೆ ಕನ್ನಡದಲ್ಲೂ ಮಾಡಿರಲಿಲ್ಲ. ಆದರೆ, ಈಗ ಸುದೀಪ್ ಜತೆಗೆ ‘ಪೈಲ್ವಾನ್’ ಸಿನೆಮಾದಲ್ಲಿ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ ಅವರನ್ನು ಸುದೀಪ್ ‘ಅಣ್ಣಾ’ ಎಂದೇ ಕರೆಯುತ್ತಿದ್ದಾರೆ. 1992ರಲ್ಲಿ ‘ಬಲ್ವಾನ್’ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ಸುನಿಲ್ ಶೆಟ್ಟಿ ಹೆಚ್ಚಾ ಕಡಿಮೆ 26 ವರ್ಷ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ದಿಲ್ವಾಲೆ, ಅಂತ್, ಬಾರ್ಡರ್, ಧಡ್ಕನ್ ಸಹಿತ ಹಲವು ಸಿನೆಮಾಗಳು ಸುನಿಲ್ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟಿವೆ.
ಇನ್ನು ವಿಶ್ವ ಸುಂದರಿ ಪಟ್ಟ ಪುರಸ್ಕೃತರಾದ ಐಶ್ವರ್ಯಾ ರೈ ಅವರನ್ನು, ಬಾಲಿವುಡ್‌ನ ನಗುವಿನ ರಾಣಿ ಶಿಲ್ಪಾ ಶೆಟ್ಟಿ, ಹಿಂದಿಯಲ್ಲಿ ಯಶಸ್ವಿ ಸಿನೆಮಾ ನಿರ್ದೇಶಿಸಿದ ರೋಹಿತ್ ಶೆಟ್ಟಿ ಅವರನ್ನು ಕೂಡ ತುಳುವಿಗೆ ಕರೆತರುವ ಶೆಟ್ಟರ ಮಾತು ಹೊಸ ನಿರೀಕ್ಷೆ ಹುಟ್ಟಿಸಿದ್ದಂತೂ ಸುಳ್ಳಲ್ಲ.
ಯಾವಾಗ ಈ ಸಿನೆಮಾ ಸೆಟ್ಟೇರಲಿದೆ? ಯಾರೆಲ್ಲ ಈ ಸಿನೆಮಾದಲ್ಲಿ ಇರಲಿದ್ದಾರೆ? ಕಥೆ ಏನು? ಸುನಿಲ್ ಶೆಟ್ಟಿ ಅವರು ಕಥೆ- ಸಿನೆಮಾ ಬಗ್ಗೆ ಈಗಾಗಲೇ ಫೈನಲ್ ಮಾಡಿದ್ದಾರಾ? ಎಲ್ಲಿ ಶೂಟಿಂಗ್ ಆಗಲಿದೆ? ಎಂಬುದಕ್ಕೆಲ್ಲ ಸದ್ಯ ಉತ್ತರ ದೊರಕಿಲ್ಲ. ಇದಿಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಕೋಸ್ಟಲ್‌ವುಡ್ ಎಂಟ್ರಿ ಬಗೆಗಿನ ವಿಷಯವಾದರೆ, ಬಾಲಿವುಡ್ ನಲ್ಲಿ ತುಳು ಭಾಷೆಯ ಬಗ್ಗೆ ಸಾಕಷ್ಟು ಬಾರಿ ಬಳಕೆ ಮಾಡಲಾಗಿದೆ ಎಂಬುದು ಕೂಡ ವಿಶೇಷ.
‘ಆಕೊರ್ಚನ್ನ… ಎಂಕ್ಲೆಗ್ ದಾಲ ಗೊತ್ತಿಜ್ಜಿ. ಎಂಕ್ಲೆಗ್ ದುಡ್ಡು ಕೊಪೆìರ್, ಅಯಿಕ್ ಬೇಲೆ ಮಲ್ಪುವ…’ ಹೀಗೊಂದು ತುಳು ಡೈಲಾಗ್ ಇರುವ ಸಿನೆಮಾವಿದೆ. ವಿಶೇಷ ಅಂದರೆ ಇದು ತುಳು ಚಿತ್ರವಲ್ಲ. ಬದಲಾಗಿ ‘ಸಿಂಗಂ’ ಹಿಂದಿ ಸಿನೆಮಾ. ಬಾಲಿವುಡ್ ಸಿನೆಮಾಗಳಲ್ಲಿ ತುಳು ಭಾಷೆಯ ಬಳಕೆ ನಡೆಯುತ್ತಲೇ ಇದೆ. ಬಾಲಿವುಡ್‌ನ ಹಲವು ಸಿನೆಮಾದಲ್ಲಿ ತುಳು ಭಾಷೆಯನ್ನು ಕಲಾವಿದರು ಉಪಯೋಗಿಸಿದ್ದಾರೆ ಬಾಲಿವುಡ್‌ನಲ್ಲಿ ಸಖತ್ ಸುದ್ದಿ ಮಾಡಿದ ‘ಸಿಂಗಂ’ ಚಿತ್ರದಲ್ಲಿರುವ ಈ ಡೈಲಾಗ್ ತುಳುನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದೆ.
ಬಾಲಿವುಡ್‌ನಲ್ಲಿ ಸದ್ದು ಮಾಡಿದ ಇನ್ನೊಂದು ಚಿತ್ರ ‘ಆನ್’ನಲ್ಲಿ ಕೂಡ ತುಳು ಭಾಷೆಯ ಪ್ರಯೋಗ ನಡೆದಿದೆ. ಮುಂಬಯಿ ಭೂಗತ ಜಗತ್ತಿನ ಕುರಿತಂತೆ ಕಥೆಯಾಧಾರಿತ ಸಿನೆಮಾವಿದು. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಶತ್ರುಘ್ನ ಸಿನ್ಹಾ ಈ ಸಿನೆಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು. ಇದರಲ್ಲಿ ಸುನಿಲ್ ಶೆಟ್ಟಿ ‘ಅಪ್ಪು ನಾಯಕ್’ ಎಂಬ ಪಾತ್ರಧಾರಿ. ಸಿನೆಮಾದ ಬಹುತೇಕ ಭಾಗದಲ್ಲಿ ಶೆಟ್ಟಿ ಅವರು ತುಳುವಿನಲ್ಲೇ ಮಾತನಾಡುತ್ತಾರೆ. ಕೋಪಗೊಂಡಾಗ ತುಳು ಭಾಷೆಯ ಬೈಗುಳ, ಹೆಂಡತಿಯ ಜತೆಗೆ ಮಾತನಾಡುವಾಗ ‘ಎನ್ನ ಪರ್ಸ್ ಓಲುಂಡು?’ ಕೇಳುವ ದೃಶ್ಯ, ಮಗುವಿನ ಜತೆಗೆ ದೂರವಾಣಿಯಲ್ಲಿ ಮಾತನಾಡುವಾಗ ‘ಪೇರ್ ಪರ್.. ಪೇರ್ ಪರಮ್ಮ’ ಎಂಬ ಸಂಭಾಷಣೆಗಳು ಗಮನ ಸೆಳೆಯುತ್ತವೆ.
ಮಧುರ್ ಭಂಡಾರ್ಕರ್ ನಿರ್ದೇಶನದ ‘ಚಾಂದಿನಿ ಬಾರ್’ ಸಿನೆಮಾದಲ್ಲೂ ತುಳು ಭಾಷೆಯ ಸೊಗಡಿದೆ. ಬಾರ್ ಗರ್ಲ್ಸ್ ಕಥೆಯಾಧಾರಿತ ಸಿನೆಮಾವಾಗಿರುವ ಇದರಲ್ಲಿ ಟಬು ಹಾಗೂ ಅತುಲ್ ಕುಲಕರ್ಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಲೇಡೀಸ್ ಬಾರ್ ಮಾಲಕ ಇದರಲ್ಲಿ ‘ಶೇಖರಣ್ಣ ಪನ್ಲ’ ಎಂದು ಹೇಳುತ್ತ ತುಳು ಸಂಭಾಷಣೆ ಮಾಡಿದ್ದಾರೆ. ‘ಆಲ್ ದಿ ಬೆಸ್ಟ್’ ಹಿಂದಿ ಸಿನೆಮಾದಲ್ಲಿ ಜಾನಿ ಲಿವರ್ ಬಳಸುವ ತುಳು ಉಲ್ಲೇಖನೀಯ. ಇದು ಒಂದೆರಡು ಸಿನೆಮಾಗಳ ವಿವರವಾಗಿದ್ದು, ಇನ್ನೂ ಹಲವು ಹಿಂದಿ ಸಿನೆಮಾಗಳಲ್ಲಿ ತುಳು ಸಂಭಾಷಣೆಗಳು ಬಳಕೆಯಾಗಿವೆ. ಹಿಂದಿ ಸಿನೆಮಾಗಳು ಬಹುತೇಕ ಮುಂಬಯಿ ಭೂಗತ ಜಗತ್ತಿನ ಕಥೆಯಾಧಾರಿತವಾಗಿರುವುದರಿಂದ ಇಲ್ಲಿ ಕರಾವಳಿಯ ನಂಟು ಸಹಜವಾಗಿ ಇರುತ್ತದೆ. ಹೀಗಾಗಿ ಕರಾವಳಿ ಮೂಲದ ತುಳು ಭಾಷೆಯ ಸೊಗಡು ಸಹಜವಾಗಿ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಉಳಿದಂತೆ ತುಳು ಸಿನೆಮಾದಲ್ಲಿ ಬರುವ ವಿಲನ್‌ಗಳಿಗೆ ‘ಶೆಟ್ಟಿ’ ಎಂದು ಉಲ್ಲೇಖೀಸಿದ ಹಲವು ಉದಾಹರಣೆಗಳಿವೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.