ಜೊತೆ ಜೊತೆಯಲಿ ಪೃಥ್ವಿ ಅಂಬರ್!
Team Udayavani, Jan 23, 2020, 4:13 AM IST
ಕೋಸ್ಟಲ್‌ವುಡ್‌ನ ಅತಿ ಬೇಡಿಕೆಯ ನಟ ಪೃಥ್ವಿ ಅಂಬರ್ ಸಿನೆಮಾದ ಜತೆಗೆ ಧಾರವಾಹಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ ಖ್ಯಾತ ಧಾರಾವಾಹಿ “ಜೊತೆ ಜೊತೆಯಲಿ’ಯಲ್ಲಿ ಪೃಥ್ವಿ ಅಂಬರ್ ಅವರು ನಟಿಸುತ್ತಿದ್ದಾರೆ. ಅಲ್ಲಿ ಅವರು ಆರ್ಯವರ್ಧನ್‌ಗೆ ಕಾನೂನು ಸಲಹೆಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೇವಲ 2 ತಿಂಗಳ ಅವಧಿಗೆ ಈ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ಬಳಿಕ ಅವರು ಮತ್ತೆ ಸಿನೆಮಾಕ್ಕೆ ವಾಪಸ್ ಬರಲಿದ್ದಾರೆ.
ಇದೊಂದು ಹೊಸ ಅನುಭವ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಇಡೀ ಕರ್ನಾಟಕಕ್ಕೆ ನನ್ನನ್ನು ಪರಿಚಯಿಸಿಕೊಳ್ಳಲು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವುದು ಅನುಕೂಲ. ಎರಡು ತಿಂಗಳು ಮಾತ್ರ ಇಲ್ಲಿದ್ದು, ಮತ್ತೆ ಸಿನೆಮಾ ಶೂಟಿಂಗ್ ಇದೆ ಎನ್ನುತ್ತಾರೆ ಪೃಥ್ವಿ.
ಪೃಥ್ವಿ ಮೊದಲ ಬಾರಿಗೆ 2014ರಲ್ಲಿ “ಬರ್ಕೆ’ ಎಂಬ ತುಳು ಸಿನೆಮಾಕ್ಕಾಗಿ ಬಣ್ಣ ಹಚ್ಚಿದರು. ಮುಂದೆ ಪಿಲಿಬೈಲ್ ಯಮುನಕ್ಕ, ಪಮ್ಮಣ್ಣೆ ದಿ ಗ್ರೇಟ್, ಗೋಲ್‌ಮಾಲ್ ಎಂಬ ತುಳು ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಇವರು ನಟಿಸಿದ 2 ಎಕ್ರೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತುಳು ಸಿನೆಮಾಗಳು ಮಾತ್ರವಲ್ಲದೇ ಕನ್ನಡ ಚಲನಚಿತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಗಿರೀಶ್ ಮೂಲಿಮನಿ ನಿರ್ದೇಶಿಸಿದ ರಾಜರು, ಸಂದೀಪ್ ಮಹಾಂತೇಶ್ ಡಿ.ಕೆ. ಬೋಸ್ ಎಂಬ ಕನ್ನಡ ಸಿನೆಮಾಗಳಲ್ಲೂ ನಟಿಸಿದ್ದಾರೆ. ಅಂದಹಾಗೆ ಅವರು ಕಿರುತೆರೆಯಲ್ಲಿ ಅಭಿನಯಿಸಿದ್ದು ಇದೇ ಮೊದಲೇನಲ್ಲ. ಸಾಗರ ಸಂಗಮ, ರಾಧಾ ಕಲ್ಯಾಣ, ಲವ್‌ಲವಿಕೆ ಎಂಬ ಧಾರಾವಾಹಿಗಳಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದ್ದಾರೆ. ಕೆ.ಎಸ್. ಅಶೋಕ್ ನಿರ್ದೇಶಿಸುತ್ತಿರುವ ದಿಯಾ ಎಂಬ ಕನ್ನಡ ಸಿನೆಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇಂಗ್ಲಿಷ್ ಹಾಗೂ ಲಾಸ್ಟ್ ಬೆಸ್ಟ್ ಎಂಬ ಎರಡು ತುಳು ಸಿನೆಮಾಗಳು ಇವರ ಮುಂದಿವೆ. ಅಲ್ಲದೆ ಮಂಜುನಾಥ ನಿರ್ದೇಶನದ “ತುಳುನಾಡª ಮಟ್ಟೆಲ್ಡ್’ ಸಿನೆಮಾದಲ್ಲೂ ನಾಯಕ ನಟನಾಗಿ ಅಭಿನಯಿಸಿದ್ದಾರೆ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.