ಅನಂತ್‌ನಾಗ್ ಹೇಳಿದ “ಇಂಗ್ಲೀಷ್’ ಪಾಠ
Team Udayavani, Aug 22, 2019, 5:00 AM IST
ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ಪ್ರೀತಿಯಿಂದ ದೂರವಿರಬೇಕಾದ ಪರಿಸ್ಥಿತಿಯನ್ನು ಎದುರಿಸುವ ಯುವಕನೊಬ್ಬನ ಸುತ್ತ ಹೆಣೆದ ಕಥೆಯನ್ನು ಹೊಂದಿರುವ ಸಿನೆಮಾವೇ ಇಂಗ್ಲೀಷ್. ಮಾಲ್ನಲ್ಲಿ ವೇಷ ಹಾಕಿ ಕುಣಿಯುವ ಯುವಕನೋರ್ವನಿಗೆ ಯುವತಿಯಲ್ಲಿ ಪ್ರೀತಿ ಮೂಡುತ್ತದೆ. ಆದರೆ ಆಕೆ ಇಂಗ್ಲಿಷ್ ಕಲಿತವಳು, ಈತನಿಗೆ ಇಂಗ್ಲಿಷ್ ಗೊತ್ತಿರುವುದಿಲ್ಲ. ಆತನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂದು ಅವಳು ಇವನಿಂದ ದೂರವಾಗಲು ಪ್ರಯತ್ನಿಸುತ್ತಾಳೆ. ಇದರಿಂದ ಬೇಸರಗೊಳ್ಳುವ ಆತ, ತನ್ನ ಗೆಳೆಯರ ಸಹಾಯ ಪಡೆದು ಹೇಗಾದರೂ ಮಾಡಿ ಇಂಗ್ಲಿಷ್ ಕಲಿಯಬೇಕು ಎಂದು ಪಣ ತೊಡುತ್ತಾನೆ. ಅದಕ್ಕಾಗಿ ತೀವ್ರ ಶ್ರಮಪಡುತ್ತಾನೆ. ಇದರಿಂದ ಆಕೆಗೆ ಯುವಕನ ಮೇಲೆ ಪ್ರೀತಿ ಮೂಡುತ್ತದೆ. ಆದರೆ ಆಕೆಯ ಮನೆಯವರು ಆತನನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಬಳಿಕ ಮತ್ತಷ್ಟು ಸಾಧನೆ ಮಾಡಿ ಅವರ ಮನವೊಲಿಸುವಲ್ಲೂ ಆತ ಯಶಸ್ವಿಯಾಗುತ್ತಾನೆ. ಇವೆಲ್ಲವುಗಳ ಹಿಂದಿರುವುದು ಇಂಗ್ಲಿಷ್!
ಸೂರಜ್ ಶೆಟ್ಟಿ ನಿರ್ದೇಶನ, ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣದ ‘ಇಂಗ್ಲಿಷ್’ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಇದರಲ್ಲಿ ಖ್ಯಾತ ನಟ ಅನಂತನಾಗ್ ಅವರು ನಟಿಸಿರುವುದು ಚಿತ್ರದ ಬಹುದೊಡ್ಡ ವಿಶೇಷ.
ಪೃಥ್ವಿ ಅಂಬಾರ್, ನವ್ಯಾ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿ ರಾಮಕುಂಜ ಮುಂತಾದವರು ತಾರಾಗಣದಲ್ಲಿರುವ ಈ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಜ್ ಶೆಟ್ಟಿ ಅವರದ್ದು. ಶಶಿರಾಜ್ ಕಾವೂರು ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವಿದ್ದು, ಛಾಯಾಚಿತ್ರಗ್ರಹಣದಲ್ಲಿ ಕೃಷ್ಣ ಸಾರಥಿ, ಮನು ಶೇರಿಗಾರ ಸಂಕಲನವಿದೆ. ಸಂಗೀತದಲ್ಲಿ ಮಣಿಕಾಂತ್ ಕೊಡುಗೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.