ಮತ್ತೆ ಕೇಳಿಸಲಿದೆ ಮೋಕೆದ ಸಿಂಗಾರಿ..!
Team Udayavani, Jul 26, 2018, 12:26 PM IST
‘ಮೋಕೆದ ಸಿಂಗಾರಿ, ಉಂತುದೆ ವಯ್ನಾರಿ’ ಎಂಬ ಹಾಡು ತುಳು ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡ ಎವರ್‌ಗ್ರೀನ್ ಸಾಂಗ್. ವಿಶೇಷವೆಂದರೆ ಇದೇ ಹಾಡನ್ನು ಹೆಚ್ಚಾ ಕಡಿಮೆ ಮೂರು ದಶಕಗಳ ಬಳಿಕ ಕೊಂಚ ಬದಲಾವಣೆ ಮಾಡಿಕೊಂಡು ಮತ್ತೂಮ್ಮೆ ಬಿಗ್‌ಸ್ಕ್ರೀನ್‌ನಲ್ಲಿ ಕಾಣಬಹುದು. ‘ಪಮ್ಮಣ್ಣೆ ದಿ ಗ್ರೇಟ್’ ಸಿನೆಮಾದಲ್ಲಿ ಈ ಹಾಡನ್ನು ಬಳಸಲಾಗಿದೆ. ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಈ ಸಿನೆಮಾ ಆ.24ಕ್ಕೆ ತೆರೆಕಾಣಲಿದೆ.
ಅಂದಹಾಗೆ, ‘ಪಗೆತ್ತ ಪುಗೆ’ ಸಿನೆಮಾದಲ್ಲಿ ಈ ಮೋಕೆದ ಸಿಂಗಾರಿ ಹಾಡಿದೆ. ಅದು ಎಂದೆಂದಿಗೂ ಮರೆಯಲಾರದು ಹಾಡು ಎಂದೇ ಜನಜನಿತ. ಹಿರಿಯ ಸಾಹಿತಿ ಸೀತಾರಾಮ್ ಕುಲಾಲ್ ಈ ಹಾಡು ಬರೆದಿದ್ದಾರೆ. ಸದ್ಯ ಪಮ್ಮಣ್ಣನ ಚಿತ್ರದಲ್ಲಿ ಇದೇ ಹಾಡನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ಬಳಸಲಾಗಿದೆ. ಅರವಿಂದ ಬೋಳಾರ್ ಮುಖ್ಯ ಭೂಮಿಕೆಯಲ್ಲಿ ಈ ಸಿನೆಮಾದಲ್ಲಿದ್ದಾರೆ. ಕೃಷ್ಣ ನಾೖಕ್ ಕಾರ್ಕಳ ನಿರ್ಮಾಣದ ಈ ಸಿನೆಮಾದಲ್ಲಿ ಪೃಥ್ವಿ ಅಂಬರ್, ಶಿಲ್ಪಾ ಸುವರ್ಣ ಬಣ್ಣಹಚ್ಚಿದ್ದಾರೆ. ಇತ್ತೀಚೆಗಷ್ಟೇ ಇದರ ಆಡಿಯೋ ರಿಲೀಸ್ ಆಗಿದ್ದು, ಹಾಡುಗಳು ಸೂಪರ್ ಎಂಬ ಅಭಿಪ್ರಾಯ ಕೇಳಿಬಂದಿದೆ. ಸಿನೆಮಾದ ಟ್ರೇಲರ್ ಕೂಡ ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.