ಕೋಸ್ಟಲ್‌ ಗರಡಿಯಲ್ಲಿ ಅಸತೋಮಾ ಸದ್ಗಮಯ !


Team Udayavani, Jul 5, 2018, 12:10 PM IST

5-july-7.jpg

ತುಳು ಸಿನೆಮಾ ಇಂಡಸ್ಟ್ರಿ ಬೆಳೆಯುತ್ತಿದ್ದಂತೆ ಇಲ್ಲಿನ ಬೆಳವಣಿಗೆ ಸ್ಯಾಂಡಲ್‌ವುಡ್‌ನಾಚೆಗೂ ಸುದ್ದಿ ಮಾಡುತ್ತಿದೆ. ಹೀಗಾಗಿ ಕರಾವಳಿಯ ತಟದಲ್ಲಿನ ಪ್ರತಿಭೆಗಳಿಗೆ ಹಾಗೂ ಇಲ್ಲಿನ ಕಥೆಗೆ ಹೆಚ್ಚು ಪ್ರಾಶಸ್ತ್ಯ  ನೀಡುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಸ್ಯಾಂಡಲ್‌ ವುಡ್‌ನ‌ ಕಥೆಗಳು ಹುಟ್ಟಿಕೊಳ್ಳುತ್ತಿದೆ. ಜತೆಗೆ, ತುಳು ಮೂಲದಲ್ಲಿರುವವರು ಕನ್ನಡದಾಚೆಗೆ ಮನಸ್ಸು ಮಾಡಲು ಆರಂಭಿಸಿದ್ದಾರೆ. ಇಲ್ಲಿಂದಲೇ ಸಿದ್ಧಗೊಳಿಸಿದ ಕೆಲವು ಕನ್ನಡ ಸಿನೆಮಾಗಳು ಸ್ಯಾಂಡಲ್‌ವುಡ್‌ನ‌ಲ್ಲಿ ಹೆಸರು ಪಡೆದಿರುವ ಇತಿಹಾಸ ಇರುವುದರಿಂದ ಈ ಭಾಗದಲ್ಲಿ ಸಾಕಷ್ಟು ವರ್ಕೌಟ್  ಆದಂತೆ ಕಂಡುಬರುತ್ತಿದೆ.

ಮೂಡಬಿದಿರೆಯ ಅಶ್ವಿ‌ನ್‌ ಜೆ. ಪಿರೇರಾ ನಿರ್ಮಾಣದ, ರಾಜೇಶ್‌ ವೇಣೂರು ನಿರ್ದೇಶನದ ಕನ್ನಡ ಸಿನೆಮಾವೊಂದು ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಸೌಂಡ್‌ ಮಾಡುತ್ತಿದೆ. ‘ಅಸತೋಮಾ ಸದ್ಗಮಯ’ ಎಂಬ ಟೈಟಲ್‌ ಕೂಡ ಈ ಸಿನೆಮಾಕ್ಕೆ ವಿಭಿನ್ನವಾಗಿದ್ದು, ಒಂದೆರಡು ದಿನದ ಹಿಂದೆ ಬಿಡುಗಡೆಯಾದ ಸಿನೆಮಾದ ಟೀಸರ್‌ ಕೂಡ ಕ್ರೇಜ್‌ ಹುಟ್ಟಿಸಿದೆ. ವಿಶೇಷವೆಂದರೆ ಮಂಗಳೂರು ಹಾಗೂ ಸುತ್ತಮುತ್ತಲಿನ ತಂಡ ಮಾಡಿದ ಸಿನೆಮಾವಿದು. ಸಿನೆಮಾದ ಕೆಲವು ಭಾಗವನ್ನು ಈ ಭಾಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಮೆಲಿಸ್ಸಾ ಡಿ’ಸೋಜಾ ಸಹನಿರ್ಮಾಪಕರಾಗಿದ್ದಾರೆ. ಜು. 6ರಂದು ಈ ಸಿನೆಮಾ ರಾಜ್ಯಾದ್ಯಂತ ತೆರೆಕಾಣಲಿದೆ.

ಸಸ್ಪೆನ್ಸ್‌, ಥ್ರಿಲ್ಲಿಂಗ್‌, ಹ್ಯೂಮರ್‌ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬಿತ್ತರಿಸುವ ಮೂಲಕ ಸಿನೆಮಾ ವಿಭಿನ್ನವಾಗಿ ಮೂಡಿಬಂದಿದೆ. ಕಿಶೋರ್‌ ಕುಮಾರ್‌ ಛಾಯಾಗ್ರಹಣ ಮಾಡಿರುವ ಈ ಸಿನೆಮಾಕ್ಕೆ ಕದ್ರಿ ಮಣಿಕಾಂತ್‌ ಹಿನ್ನೆಲೆ ಸಂಗೀತ ನೀಡಿದ್ದು, ಸಾಹಿತ್ಯ ಸಂಗೀತವನ್ನು ವಹಾಬ್‌ ಸಲೀಂ ಒದಗಿಸಿದ್ದಾರೆ. ಕುಡ್ಲದ ಪ್ರಮುಖರು ಮಾಡುತ್ತಿರುವ ಇನ್ನೊಂದು ಸಿನೆಮಾ ಕೂಡ ಈಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ‘ಜೀವನ ಯಜ್ಞ’ ಎಂಬ ಟೈಟಲ್‌ ಫಿಕ್ಸ್‌ ಮಾಡಿದ ಈ ಸಿನೆಮಾವನ್ನು ಶಿವು ಸರಳಬೆಟ್ಟು ನಿರ್ದೇಶಿಸುತ್ತಿದ್ದಾರೆ. ಮನೋಜ್‌ ಪುತ್ತೂರು, ಶೈನ್‌ ಶೆಟ್ಟಿ, ಅನೂಪ್‌ಸಾಗರ್‌, ಮಠ ಕೊಪ್ಪಳ್‌ ಮುಖ್ಯ ತಾರಾಗಣದಲ್ಲಿ ರೆಡಿಯಾಗುತ್ತಿರುವ ಈ ಸಿನೆಮಾದಲ್ಲಿ ಸೌಜನ್ಯಾ ಹೆಗ್ಡೆ, ಅನ್ವಿತಾ ಸಾಗರ್‌, ಆದ್ಯಾ ಆರಾಧನ್‌, ಮೆರ್ವಿನ್‌ ಶಿರ್ವ ಜತೆಯಾಗಿದ್ದಾರೆ. ಇದರಲ್ಲಿ ಬಹುತೇಕರು ಕರಾವಳಿ ಭಾಗದವರು ಎಂಬುದು ಉಲ್ಲೇಖನೀಯ.

ಮಂಗಳೂರಿನ ಬಹುತೇಕ ಭಾಗದಲ್ಲಿ ಈ ಸಿನೆಮಾದ ಶೂಟಿಂಗ್‌ ಕೂಡ ನಡೆಸಲಾಗಿದೆ. ಅಂದಹಾಗೆ, ಕರಾವಳಿ ಹುಡುಗ ರಕ್ಷಿತ್‌ ಶೆಟ್ಟಿಯ ಪಟಾ ಪೋಸ್ಟರ್‌ ನಿಕ್‌ಲಾ ಹೀರೋ ‘ಉಳಿದವರು ಕಂಡಂತೆ’ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ಮೊದಲಾಗಿ ಹೊಸ ಮನ್ವಂತರವನ್ನೇ ಬರೆಯುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಕೆಲವು ಕರಾವಳಿ ಸಿನೆಮಾಗಳು ಸ್ಯಾಂಡಲ್‌ವುಡ್‌ನ‌ಲ್ಲಿ ದೊಡ್ಡ ಮಟ್ಟಿಗಿನ ಸೌಂಡ್‌ ಮಾಡಿದ್ದವು. ಅನಂತರ ಕರಾವಳಿ ಭಾಗದಲ್ಲಿ ಶೂಟಿಂಗ್‌ ಆಗಿ ಇಲ್ಲಿನದ್ದೇ ಕಥಾನಕ ಹಾಗೂ ಇಲ್ಲಿನವರು ತಯಾರಿಸಿದ ‘ರಂಗಿತರಂಗ’ ಸ್ಯಾಂಡಲ್‌ ವುಡ್‌ ಸಹಿತ ಎಲ್ಲೆಡೆಯಲ್ಲೂ ಸದ್ದು ಮಾಡಿತ್ತು. ಬಳಿಕ ರಿಶಬ್‌ ಹಾಗೂ ರಕ್ಷಿತ್‌ ಶೆಟ್ಟಿ ಮೂಲಕ ಬಂದ ‘ಕಿರಿಕ್‌ ಪಾರ್ಟಿ’ ಊಹೆಗೂ ಸಿಲುಕದ ಹಾಗೆ ಹಿಟ್‌ ಆಯಿತು.

ಅದೇ ರೀತಿ ಇತ್ತೀಚೆಗೆ ಬಂದ ರಾಜ್‌ ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ ಕೂಡ ಸ್ಯಾಂಡಲ್‌ವುಡ್‌ನ‌ಲ್ಲಿ ಸಾಕಷ್ಟು ಫೇಮಸ್‌ ಆಯಿತು. ನಿಶ್ಯಬ್ದ- 2 ಇತ್ತೀಚೆಗೆ ರಿಲೀಸ್‌ ಆಗಿ ಸಾಕಷ್ಟು ಸುದ್ದಿಯಲ್ಲಿತ್ತು. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನೆಮಾ ಈಗಾಗಲೇ ಎಲ್ಲೆಡೆ ಹೊಸ ಹವಾ ಸೃಷ್ಟಿಸಿದೆ. ಜತೆಗೆ ಕೊನೆಯ ಹಂತದ ಶೂಟಿಂಗ್‌ ಮುಗಿಸಿದ ‘ಲುಂಗಿ’ ಹಾಗೂ ‘ಇದು ಎಂಥಾ ಲೋಕವಯ್ನಾ’ ಸಿನೆಮಾ ಕೂಡ ಹೊಸ ನಿರೀಕ್ಷೆ ಮೂಡಿಸಿದೆ. ಇದರ ಜತೆಗೆ ‘ವಿರುಪಾ’ ಸಿದ್ಧಗೊಳ್ಳುತ್ತಿದೆ. 

ಟಾಪ್ ನ್ಯೂಸ್

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.