ಬ್ಯಾಟರಿ ಚಾಲಿತ ಇ- ಬಸ್‌ ಮಂಗಳೂರಿಗೂ ಬರಲಿ


Team Udayavani, Sep 30, 2018, 1:53 PM IST

30-sepctember-12.gif

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಸ್ವಂತ ವಾಹನ ಚಾಲನೆ ಮಾತ್ರವಲ್ಲ ಸಾರ್ವಜನಿಕ ವಾಹನ ಸೇವೆಯೂ ದುಬಾರಿಯಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ತಾವು ದುಡಿದ ಹಣವೆಲ್ಲ ಪೆಟ್ರೋಲ್‌, ಡೀಸೆಲ್‌ ಗೆ ವ್ಯಯಿಸಬೇಕಲ್ಲ ಎಂದು ಯೋಚಿಸಿ ಸಾರ್ವಜನಿಕ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ದೇಶಾದ್ಯಂತ ಇಂದು ಸಾರ್ವಜನಿಕ ಬಸ್‌ ಸಂಚಾರ ವ್ಯಾಪಕವಾಗಿ ಬೆಳೆದಿದೆ. ಬೆಂಗಳೂರು, ಮಂಗಳೂರು ಹಾಗೂ ಮೈಸೂರು, ಹುಬ್ಬಳ್ಳಿಯಂಥ ಮಹಾನಗರಗಳಲ್ಲಿ ದಿನದಿಂದ ದಿನಕ್ಕೆ ಸಾರ್ವಜನಿಕ ಸಾರಿಗೆ ಹೆಚ್ಚು ಬಳಕೆಯಾಗುತ್ತಿದೆ. ದಿನಕ್ಕೆ ಸಾವಿರಕ್ಕೂ ಅಧಿಕ ಇಂಧನ ಚಾಲಿತ ಬಸ್‌ಗಳು ನಗರದಲ್ಲಿ ಓಡಾಡುತ್ತವೆ. ಇಂಧನ ಚಾಲಿತ ವಾಹನಗಳು ಉಗುಳುವ ಹೊಗೆಯಿಂದಾಗಿ ನಗರಗಳಲ್ಲಿ ವಾಯು ಮಾಲಿನ್ಯಕ್ಕೂ ದಾರಿಯಾಗುತ್ತಿದೆ. ಇಂಧನ ಚಾಲಿತ ವಾಹನಗಳೂ ಹೊರಹಾಕುವ ಹೊಗೆ ಹಾಗೂ ಶಬ್ದದಿಂದಾಗಿ ಬಹುತೇಕ ನಗರಗಳ ಸೌಂದರ್ಯ ಹಾಗೂ ಶಾಂತಿಗೂ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಹಾಗೂ ಪರ್ಯಾಯ ಯೋಚನೆಗಳು ಬಂದಾಗ ಸಿಕ್ಕಿದ್ದು ಪರಿಸರ ಸ್ನೇಹಿ, ಸಂಚಾರ ಸ್ನೇಹಿ ಇ-ಬಸ್‌ ಸೌಲಭ್ಯಗಳು. 

ಏನಿದು ಇ-ಬಸ್‌ ?
ಪರಿಸರ ಸ್ನೇಹಿಯಾದ ಇ- ಬಸ್‌ ಇದು ಡೀಸೆಲ್‌, ಪೆಟ್ರೋಲ್‌ ಇಂಧನ ಮುಕ್ತ ತಂತ್ರಜ್ಞಾನಾಧರಿತ ಎಲೆಕ್ಟ್ರಾನಿಕ್‌ ಚಾಲಿತ ಬಸ್‌ ಸಂಚಾರ. ಈ ಬಸ್‌ ಗಳಿಗೆ ಯಾವುದೇ ಇಂಧನ ಹಾಕಿ ಓಡಿಸುವ ಆವಶ್ಯಕತೆ ಇಲ್ಲ. ಇ-ಬಸ್‌ ಗಳಿಗೆ ಎಲೆಕ್ಟ್ರಾನಿಕ್‌ ಬ್ಯಾಟರಿಗಳನ್ನು ಅಳವಡಿಸಲಾಗಿರುತ್ತದೆ. ಈ ಬ್ಯಾಟರಿಗಳನ್ನು ಚಾರ್ಚ್‌ ಮಾಡಿದರೆ ಸಾಕು, ಬಸ್‌ ಸಂಚಾರಕ್ಕೆ ಸಿದ್ಧವಾಗಿರುತ್ತದೆ. ಈ ಮಾದರಿಯೇ ಇ-ಬಸ್‌. ಇದರಿಂದಾಗಿ ಡಿಸೇಲ್‌, ಪೆಟ್ರೋಲ್‌ ದರಗಳು ಎಷ್ಟೇ ಗಗನಕ್ಕೇರಿದರೂ, ಬಸ್‌ ಪ್ರಯಾಣಿಕರಿಗೆ ಮಾತ್ರವಲ್ಲ ಬಸ್‌ ಚಾಲಕ, ಮಾಲಕರಿಗೆ ಇದರ ದರದ ಬಿಸಿ ತಟ್ಟುವುದಿಲ್ಲ. ಇದೊಂದು ಪರಿಸರ ಸ್ನೇಹಿ ಮಾದರಿಯಾಗಿದ್ದು, ಇಂಧನ ಚಾಲಿತ ವಾಹನಗಳು ಹೊರ ಹಾಕುವ ಹೊಗೆಯಂತೆ, ಇ- ಬಸ್‌ಗಳು ಹೊಗೆ ಬೀಡುವುದಿಲ್ಲ. ಪರಿಸರವನ್ನು ಕೂಡ ನಾವು ಸಂರಕ್ಷಣೆ ಮಾಡಬಹುದು. 

ಚೀನ ಮಾದರಿ ನಡೆ
ಇ-ಬಸ್‌ ತಂತ್ರಜ್ಞಾನಾಧಾರಿತ ಸಂಚಾರವನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದರಲ್ಲಿ ಚೀನ, ಜಪಾನ್‌ ಹಾಗೂ ಸಿಂಗಾಪುರ್‌ ಮುಂಚೂಣಿಯಲ್ಲಿವೆ. ಚೀನ ದೇಶದ ಶೇನ್‌ಝೆನ್‌ ಎಂಬ ನಗರದಲ್ಲಿ ಇಡೀ ನಗರದ ತುಂಬೆಲ್ಲ ಇ- ಬಸ್‌ಗಳೇ ಓಡಾಡುತ್ತವೆ. ಈ ನಗರದಲ್ಲಿ 16,359 ಇ-ಬಸ್‌ಗಳು ಇವೆ. ಇದು ಜಗತ್ತಿಗೆ ಮಾದರಿಯಾಗಿದೆ.

ಇತ್ತೀಚೆಗೆಷ್ಟೇ ರಾಜ್ಯ ಸರಕಾರವೂ ಇ-ಬಸ್‌ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲು, ಚಿಂತನೆ ನಡೆಸುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಇ-ಬಸ್‌ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಆದರೆ ಇದು ರಾಜಾದ್ಯಂತ ವಿಸ್ತರಣೆಯಾಗಿಲ್ಲ. ಹೀಗಾಗಿ ಸ್ಮಾರ್ಟ್‌ ಸಿಟಿ ನಗರಿಯಾಗಿ ಆಯ್ಕೆಗೊಂಡಿರುವ ಮಂಗಳೂರು ಮಹಾನಗರದಲ್ಲಿ ಸಂಚಾರ ವ್ಯವಸ್ಥೆ ಕೂಡ ವ್ಯಾಪಕವಾಗಿ ಬೆಳೆಯುತ್ತಿದೆ. ದಿನವಿಡೀ ಸಾವಿರಕ್ಕೂ ಅಧಿಕ ಬಸ್‌ ಗಳು ರಸ್ತೆಗಿಳಿಯುತ್ತವೆ. ಇದರಿಂದಾಗಿ ನಗರದಲ್ಲಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಇದರ ತಡೆಗೆ ಈಗಲೇ ತಂತ್ರಜ್ಞಾನಾಧಾ ರಿತ ಇ-ಬಸ್‌ ಗಳ ಸಂಚಾರವನ್ನೂ ನಗರದಲ್ಲಿ ಅಳವಡಿಸಿದರೆ ಇದೊಂದು ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯಾಗಲು ಸಾಧ್ಯವಿದೆ. ಜತೆಗೆ ಪರಿಸರ ಸ್ನೇಹಿಯಾಗಿ ಮಾದರಿಯಾಗಬಹುದು. ಇದಕ್ಕೆ ಆಡಳಿತ ವ್ಯವಸ್ಥೆ ಪ್ರಯತ್ನ ಮಾಡಬೇಕಷ್ಟೇ.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.