ಶೂಟಿಂಗ್ ಮುಗಿಸಿ ಎದ್ದು ನಿಂತ ಬೆಲ್ಚಪ್ಪ !
Team Udayavani, Mar 7, 2019, 7:45 AM IST
ರಜನೀಶ್ ದೇವಾಡಿಗ ಅವರ ‘ಬೆಲ್ಚಪ್ಪ’ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರದ ತಯಾರಿ ಕುರಿತ ಅಂತಿಮ ಸಿದ್ಧತೆಯಲ್ಲಿರುವ ಚಿತ್ರತಂಡ ಆದಷ್ಟು ಬೇಗೆ ತೆರೆಯ ಮೇಲೆ ಬರುವ ಕುತೂಹಲದಲ್ಲಿದೆ. ಅಂದಹಾಗೆ, ಇದೊಂದು ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ. ರಜನೀಶ್ ದೇವಾಡಿಗ ಮತ್ತು ಯಶಸ್ವಿ ದೇವಾಡಿಗ ಅವರು ಪ್ರಧಾನ ಭೂಮಿಕೆಯಲ್ಲಿ ಈ ಸಿನೆಮಾದಲ್ಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ಚಿತ್ರದಲ್ಲಿ ಅರವಿಂದ ಬೋಳಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಕಾಮಿಡಿಗೇನು ಇಲ್ಲಿ ಕೊರತೆ ಇಲ್ಲ ಎಂದೇ ಸ್ಪಷ್ಟವಾದಂತಾಗಿದೆ. ತುಳುವಿನಲ್ಲಿ ‘ಬೆಲ್ಚಪ್ಪ’ ಅಂದರೆ ಬೆದರು ರೂಪ ಎಂದು ಕೂಡ ಹೇಳುತ್ತಾರೆ.
ಗದ್ದೆ- ತೋಟ ಇರುವವರಿಗೆ ಅಥವಾ ತರಕಾರಿ ಮಾಡುವವರಿಗೆ ಬೆಲ್ಚಪ್ಪನ ಬಗ್ಗೆ ಪರಿಚಯ ಇದೆ. ಪ್ರಾಣಿಗಳು ತಮ್ಮ ಕೃಷಿಯನ್ನು ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂಬ ಕಾರಣದಿಂದ ಬೆಲ್ಚಪ್ಪನನ್ನು ಇರಿಸಲಾಗುತ್ತದೆ. ಹಾಗೆಂದು ‘ಬೆಲ್ಚಪ್ಪ’ ಪ್ರಾಣಿಗಳ ವಿರುದ್ಧ ಹೋರಾಡಲು ಆಗುವುದಿಲ್ಲ. ಅಂದರೆ ಕೇವಲ ಹೆದರಿಕೆಗಾಗಿ ಮಾತ್ರ ಬಳಕೆಯಾಗುವ ವಸ್ತು ಎಂಬುದು ಸಾಮಾನ್ಯ ಅರ್ಥ. ಇದೇ ಸಿನೆಮಾದ ಕಥೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈಗಾಗಲೇ ‘ಕೋರಿ ರೊಟ್ಟಿ’ ಸಿನೆಮಾದ ಮೂಲಕ ಗಮನ ಸೆಳೆದಿರುವ ರಜನೀಶ್ ದೇವಾಡಿಗ ಅವರಿಗೆ ಇದು ಎರಡನೇ ಅಗ್ನಿ ಪರೀಕ್ಷೆಯೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.