Emotions: ಭಾವನೆಗಳ ಬಸ್ ನಿಲ್ದಾಣ
Team Udayavani, Dec 18, 2024, 5:35 PM IST
ಕನಸುಗಳ ಬೆನ್ನತ್ತಿ ಕಣ್ಣಂಚಲಿ ಹುಟ್ಟೂರ ಬಿಟ್ಟು ಹೋಗುವ ಕಂಬನಿ ನಡುವೆ ಜೀವನ ಕಟ್ಟಿಕೊಳ್ಳುವ ಹಂಬಲ ಮನಸ್ಸಿಗೆ ಕೊಂಚ ಶಕ್ತಿ ನೀಡಿರುತ್ತದೆ. ಇದೆಲ್ಲವೂ ಕಾಣುವುದು ಬಸ್ ನಿಲ್ದಾಣದಲ್ಲಿ. ವಿಆರ್‌ಎಲ್ ಬರೀ ಬಸ್ ಮಾತ್ರವಾಗಿರದೇ ಅನೇಕ ಭಾವನೆಗಳ ತಾಣವೂ ಆಗಿದೆ.
ತವರು ಮನೆಯ ಬಿಟ್ಟು ಗಂಡನ ಮನೆ ಸೇರಿದ ಮಗಳು ಪತಿಯ ಕೈ ಹಿಡಿದು ಆತನ ವೃತ್ತಿ ಪ್ರದೇಶ ಬೆಂಗಳೂರಿಗೆ ಹೊರಡುವಾಗ, ದೊಡ್ಡ ನಗರದಲ್ಲಿ ಹೇಗೆ ಜೀವನ ಕಳೆಯುತ್ತಾಳ್ಳೋ ಎಂದು ಪಾಲಕರ ಕಣ್ಣಲ್ಲಿ ಆತಂಕ ಕಾಣತ್ತಿರುತ್ತದೆ. ಹೊಸ ಜೋಡಿಗೆ ಭವಿಷ್ಯದ ಖುಷಿಯೊಂದಿಗೆ ಮನೆಯವರನ್ನು ಬಿಟ್ಟಿರುವ ಭಯವು ಇರುತ್ತದೆ.
ಶಿಕ್ಷಣ ಮುಗಿಸಿ ದೊಡ್ಡ ಪಟ್ಟಣ ಸಿಲಿಕಾನ್ ಸಿಟಿಗೆ ಬರುವ ಯುವಕ ಯುವತಿಗೆ ಉತ್ತಮ ಕೆಲಸ, ಸಂಬಳ, ಸಹದ್ಯೋಗಿಗಳು, ಜೀವನದ ನವೀನ ಆಶಾ ಕಿರಣದೊಂದಿಗೆ ಖುಷಿಯಿಂದ ಬಸ್ ಹತ್ತುವವರು ಇದ್ದಾರೆ. ಭಾವನೆಗಳನ್ನು ಹೊತ್ತ ಮನಸ್ಸಿಗೆ ಸಂತಸ ನೀಡುವ ವಿಆರ್‌ಎಲ್ ಬಿಸಿ ಬಿಸಿ ಇಡ್ಲಿ, ಪಲಾವ್ ಅನ್ನದಲ್ಲಿ ನಾಳೆ ಬೆಳ್ಳಿಗ್ಗೆ ಊರು ತಲುಪುವ ಸಂತಸಕ್ಕೆ ಇಮ್ಮಡಿ ಕೊಡುವುದು ಸಾರಿಗೆ ಸಂಪರ್ಕ.
ಬೆಂಗಳೂರಿನಿಂದ ನಮ್ಮೂರುಗಳಿಗೆ ಹೋಗುವಾಗ ಇರುವ ಖುಷಿ ಮರಳಿ ಬೆಂಗಳೂರಿಗೆ ಬರುವಾಗ ಇರುವುದಿಲ್ಲ ಎಂಬುದು ಪೂರ್ಣತಃ ಸತ್ಯ. ಇಷ್ಟರ ನಡುವೆ ಕರ್ಮಭೂಮಿ ಬೆಂಗಳೂರು ರಾಜ್ಯದ ಹಲವೆಡೆ ಸೇರಿದಂತೆ ದೇಶ ವಿದೇಶಿಗರಿಗೂ ಆಶ್ರಯ ನೀಡುತ್ತಿರುವುದು ಅಕ್ಷರಶಃ ಸತ್ಯ. ಇವರೆಲ್ಲರ ಭಾವನೆಗಳಿಗೆ ಬಣ್ಣ ನೀಡುವುದು ಕರುನಾಡಿನ ಸಾರಿಗೆ ವ್ಯವಸ್ಥೆ. ಶುಭಾ ಹತ್ತಳ್ಳಿ ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.