ಬ್ಯಾರಿ ಭಾಷಾ ಸಿನೆಮಾ ಅಬ್ಬ ಚಿತ್ರೀಕರಣ ಮುಕ್ತಾಯ
Team Udayavani, Nov 1, 2018, 1:26 PM IST
ಕ್ಯಾಪ್‌ಮ್ಯಾನ್ ಮೀಡಿಯ ನಿರ್ಮಾಣದ ಎಂ.ಜಿ. ರಹೀಂ ನಿರ್ದೇಶನದ ‘ಅಬ್ಬ’ ಬ್ಯಾರಿ ಭಾಷೆ ಸಿನೆಮಾ ಶೂಟಿಂಗ್ ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ರಿಲೀಸ್‌ನ ಸಿದ್ಧತೆಯಲ್ಲಿದೆ. ‘ಅಬ್ಬ’ ಸಿನೆಮಾ ಬ್ಯಾರಿ ಭಾಷೆಯಲ್ಲಿ ಬರುವ ಎರಡನೇ ಚಿತ್ರ. ಇದಕ್ಕಿಂತ ಮೊದಲು 2011ರಲ್ಲಿ ಅಲ್ತಾಫ್ಅ ವರ ನಿರ್ಮಾಣದ ‘ಬ್ಯಾರಿ’ ಚಿತ್ರ ಬಂದಿತ್ತು. ಎಂ.ಜಿ. ರಹೀಂ ನಿರ್ಮಾಣದ ‘ಅಬ್ಬ’ ಚಿತ್ರಕ್ಕೆ ಮಹಮ್ಮದ್ ಬಡ್ಡೂರು ಗೀತ ಸಾಹಿತ್ಯವಿದೆ.
ಗಾಯಕರಾಗಿ ರಿಯಾಝ್, ರಜಿಲ, ಇಸ್ಮಾಯಿಲ್, ಸುಹೈಲ್ ಬಡ್ಡೂರು ಸಹಕರಿಸಿದ್ದಾರೆ. ಚಿತ್ರದ ಧ್ವನಿ ಸುರುಳಿ ಬಿಡುಗಡೆಯು ‘ಬ್ಯಾರಿ ಭಾಷಾ ದಿನಾಚರಣೆ’ ಯಂದು ಬಿಡುಗಡೆಯಾಗಿದೆ. ತುಳು, ಕನ್ನಡ, ಬ್ಯಾರಿ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ರೂಪಾ ವರ್ಕಾಡಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ದಿಕ್ಕಿಲ್ಲದ ವೃದ್ಧ ದಂಪತಿಯ ಬದುಕಿನ ವಾಸ್ತವತೆಯೇ ಈ ಚಿತ್ರದ ಕಥೆ. 2017ರ ಡಿಸೆಂಬರ್‌ನಲ್ಲಿ ಆರಂಭಗೊಂಡ ‘ಅಬ್ಬ’ ಚಿತ್ರದ ಚಿತ್ರೀಕರಣ 2018 ಜನವರಿಗೆ ಮುಕ್ತಾಯಗೊಂಡಿದೆ. ಕಾರಣಾಂತರದಿಂದ ಬಿಡುಗಡೆಗೆ ಸ್ವಲ್ಪ ದಿನ ಕಾಯುವಂತಾಗಿದೆ.
ಚಿತ್ರದ ನಿರ್ದೇಶಕ ಎಂ.ಜಿ. ರಹೀಂ ಅವರು ಸುರ್ಮತ್ತೂ ಕಣ್ಣ್ , ಅರಳ್‌ಂ ಡ್ ಮನಸ್ ಎಂಬ ಆಲ್ಬಂಗಳನ್ನು ಹೊರ ತಂದಿದ್ದರು. ‘ಸಾವುಕಾರೊ ಸಾಲೆ’ ಎಂಬ ಬಹು ಪ್ರಸಿದ್ಧ ನಾಟಕ ರಚನೆ ಮಾಡಿದ್ದರು. ಚಿತ್ರದಲ್ಲಿ ಮಠ ಕೊಪ್ಪಳ, ಮಹಮ್ಮದ್ ಬಡ್ಡೂರು, ಸುಭಾಂಗಿ ಶೆಟ್ಟಿ ಮುಂಬಯಿ, ರಹೀಂ ಸಚ್ಚರಿಪೇಟೆ ಮುಂಬಯಿ, ಬಶೀರ್ ಬೈಕಂಪಾಡಿ, ಮಹಮ್ಮದ್ ಅಲಿ, ಹುಸೈನ್ ಕಾಟಿಪಳ್ಳ, ಸತ್ತಾರ್ ಗೂಡಿನಬಳಿ ಮುಂತಾದವರು ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.