ಕಬಡ್ಡಿಗೆ ರೆಡಿಯಾಗಿದೆ ಕೋಸ್ಟಲ್‌ವುಡ್!
Team Udayavani, Aug 30, 2018, 12:05 PM IST
ಕೆಮರಾ, ರೋಲಿಂಗ್, ಆ್ಯಕ್ಷನ್ ಎನ್ನುತ್ತ ಸಿನೆಮಾದಲ್ಲೇ ಬ್ಯುಸಿಯಾಗಿದ್ದ ತುಳು ಸಿನೆಮಾ ಕಲಾವಿದರು ರಿಲ್ಯಾಕ್ಸ್ ಮೂಡ್‌ನಲ್ಲಿ ಒಂದಿಷ್ಟು ಕೂಲ್ ಆಗಲು ಕಬಡ್ಡಿ ಆಡಲು ರೆಡಿಯಾಗಿದ್ದಾರೆ. ತುಳು ಕಲಾವಿದರನ್ನು ಜತೆಯಾಗಿಸಿಕೊಂಡು ಮಂಗಳೂರಿನಲ್ಲಿಯೇ ಕಬಡ್ಡಿ ಆಡುವ ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ ತುಳು ಚಲನಚಿತ್ರ ಕಲಾವಿದರಿಗಾಗಿ ಕ್ರಿಕೆಟ್ ಪಂದ್ಯ ನಡೆದಿತ್ತು. ಕೆಲವು ಟೀಮ್ ಮಾಡಿ ನೆಹರೂ ಮೈದಾನದಲ್ಲಿ ಕ್ರಿಕೆಟ್ ಆಯೋಜಿಸಲಾಗಿತ್ತು. ಜತೆಗೆ ಕೆಸರಿನಲ್ಲಿಯೂ ಕೆಲವು ಕ್ರೀಡಾಕೂಟಗಳು ನಡೆದಿತ್ತು. ಆದರೆ, ಈ ಬಾರಿ ಕಬಡ್ಡಿ ಪಂದ್ಯಾಟಕ್ಕೆ ಕೋಸ್ಟಲ್‌ವುಡ್‌ನಲ್ಲಿ ಸಿದ್ಧತೆ ನಡೆಸಲಾಗಿದೆ. ರಾಜೇಶ್ ಬ್ರಹ್ಮಾವರ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳ ಸಹಯೋಗ ದೊಂದಿಗೆ ಕಬಡ್ಡಿ ಆಯೋಜಿಸಲಾಗಿದೆ.
ಹೀರೋ/ ಹೀರೋಯಿನ್ ಎಂಬಂತೆ ಎರಡು ಪ್ರತ್ಯೇಕ ವಿಭಾಗದಲ್ಲಿ ತಂಡಗಳ ಆಯ್ಕೆ ಈಗಾಗಲೇ ನಡೆದಿದೆ. ಕೋಸ್ಟಲ್‌ವುಡ್‌ನ ಖ್ಯಾತ ಕಲಾವಿದರಾದ ಅರ್ಜುನ್ ಕಾಪಿಕಾಡ್, ಸೌರಭ್ ಭಂಡಾರಿ, ಉದಯ್ ಪೂಜಾರಿ, ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ಸಂದೀಪ್ ಭಕ್ತ, ಅನೂಪ್ ಸಾಗರ್, ಪ್ರತೀಕ್ ಶೆಟ್ಟಿ, ವೀರೇಂದ್ರ ಶೆಟ್ಟಿ ನೇತೃತ್ವದಲ್ಲಿ ತಂಡಗಳು ಸಿದ್ಧವಾಗಿದೆ. ಜತೆಗೆ ಶ್ರೇಯಾ ಅಂಚನ್, ಕರಿಷ್ಮಾ ಅಮೀನ್, ಪೂಜಾ ಶೆಟ್ಟಿ, ರೇಶ್ಮಾ ಶೆಟ್ಟಿ, ಲಲಿತಾಶ್ರೀ ಹಾಗೂ ಅನ್ವಿತಾ ಸಾಗರ್ ನೇತೃತ್ವದಲ್ಲಿ ಹೀರೋಯಿನ್ ಟೀಮ್ ಸಿದ್ಧಗೊಂಡಿದೆ. ಹೆಚ್ಚಾ ಕಡಿಮೆ ಅಕ್ಟೋಬರ್ 6 ಹಾಗೂ 7ರಂದು ಮಂಗಳೂರು ನೆಹರೂ ಮೈದಾನ ಅಥವಾ ಇತರ ಭಾಗದಲ್ಲಿ ಈ ಸ್ಪರ್ಧೆ ಆಯೋಜನೆಗೆ ಉದ್ದೇಶಿಸಲಾಗಿದೆ.
ಮಂಗಳೂರಿನ ಓಶಿಯನ್ ಪರ್ಲ್ ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಮಂಗಳೂರು ಹಾಗೂ ಬೆಂಗಳೂರಿನ ಉದ್ಯಮಿಗಳು ತಂಡಗಳನ್ನು ಖರೀದಿ ನಡೆಸಿದ್ದಾರೆ. ಆ ಬಳಿಕ ಕಲಾವಿದರು ಅರ್ಥಾತ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಒಂದೊಂದು ತಂಡದಲ್ಲಿ ಕಲಾವಿದರ ಜತೆಗೆ, ನಾಲ್ಕು ಜನ ಕಬಡ್ಡಿ ಆಟಗಾರರನ್ನೇ ಬಳಸಲಾಗುತ್ತದೆ. ಅದರಲ್ಲೂ ಅವರು ಕಾಲೇಜು ಹುಡುಗರಾಗಿರುತ್ತಾರೆ. ಇದಕ್ಕಾಗಿ ಕರಾವಳಿಯ 13 ಕಾಲೇಜಿನ ಕಬಡ್ಡಿ ಆಟಗಾರರನ್ನು ಕರೆಸಲಾಗಿದೆ.
ತುಳುವಿನಲ್ಲಿ ಸೆಲೆಬ್ರಿಟಿ ಕಬಡ್ಡಿ ಹೊಸ ಕಾನ್ಸೆಪ್ಟ್. ಚಲನಚಿತ್ರ ಕಲಾವಿದರು ಹಾಗೂ ತಂತ್ರಜ್ಞರಿಗೆ ದುಡಿಮೆಯ ಜತೆಗೆ ಒಂದಷ್ಟು ಮನರಂಜನೆ ಸಿಗಬೇಕು ಎನ್ನುವ ಉದ್ದೇಶದಿಂದ ಕಬಡ್ಡಿ ಆಯೋಜಿಸಲಾಗಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಆಯಾಯ ಕಲಾವಿದರಿಗೆ ಬೇರೆ ಬೇರೆ ರೀತಿಯ ಆಟೋಟ ಸ್ಪರ್ಧೆಗಳನ್ನು ಅಥವಾ ಇತರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂತಹ ಪ್ರಕ್ರಿಯೆ ಕೋಸ್ಟಲ್ ವುಡ್‌ನಲ್ಲೂ ಜಾರಿಯಾಗಬೇಕು ಎಂಬ ನೆಲೆಯಿಂದ ಈಗ ಈ ಬಾರಿ ಕಬಡ್ಡಿ ಆಯೋಜಿಸಲಾಗಿದೆ. ಕೋಸ್ಟಲ್ ವುಡ್ ಕಲಾವಿದರನ್ನು ಇದರಲ್ಲಿ ಜೋಡಿಸುವ ಮೂಲಕ ಹೊಸತನ ಮೂಡುವಂತೆ ಮಾಡುವಲ್ಲಿ ಇದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ರಾಜೇಶ್ ಬ್ರಹ್ಮಾವರ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.