ಇನ್ನೊಂದು ಸಿನೆಮಾ ಲೆಕ್ಕಾಚಾರದಲ್ಲಿ ಕಾಪಿಕಾಡ್‌

Team Udayavani, Apr 25, 2019, 6:00 AM IST

2404mlr3a-Devdas-Kapikad-

ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್‌ ಕಾಪಿಕಾಡ್‌. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್‌ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ಸದ್ಯ “ಜಬರ್ದಸ್ತ್ ಶಂಕರ’ ಸಿನೆಮಾದ ಶೂಟಿಂಗ್‌ ಮುಗಿಸಿರುವ ಕಾಪಿಕಾಡ್‌ ಈಗ ಇನ್ನೊಂದು ಸಿನೆಮಾ ಮಾಡುವ ಬಗ್ಗೆ ಲೆಕ್ಕ ಹಾಕಿದ್ದಾರೆ.

ಕೋಸ್ಟಲ್‌ವುಡ್‌ಗೆ ಭರವಸೆಯ ಸಿನೆಮಾ ನೀಡಿರುವ ಕಾಪಿಕಾಡ್‌ ಈಗ ಇನ್ನೊಂದು ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನಿಂಗ್‌ ಶುರು ಮಾಡಿದ್ದಾರೆ. ಅಂದಹಾಗೆ, ಸಿನೆಮಾ ಕನ್ನಡವಾ? ತುಳುವಾ? ಎಂದು ಇನ್ನೂ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೂ, ಹೊಸ ಸಿನೆಮಾದ ಬಗ್ಗೆ ಸಿದ್ಧತೆ ನಡೆಸುತ್ತಿರುವ ಅವರು ಕೆಲವೇ ತಿಂಗಳಿನಲ್ಲಿ ಹೊಸ ಸಿನೆಮಾ ಮಾಡುವ ತಯಾರಿಯಲ್ಲಿದ್ದಾರೆ.

ಒಂದು ಮೂಲದ ಪ್ರಕಾರ ಕರಾವಳಿಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸುವ ಜತೆಗೆ ತುಳುನಾಡಿನ ವಿಶೇಷತೆಯಲ್ಲಿ ಒಂದಾಗಿರುವ ಕಲಾ ಪ್ರಕಾರದ ಆಧಾರಿತವಾಗಿ ಸಿನೆಮಾ ಮಾಡಲಿದ್ದಾರೆ ಎಂಬುದು ಮಾಹಿತಿ. ಆದರೆ, ಯಾವ ಕಲಾ ಪ್ರಕಾರ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ಒಂದಕ್ಕಿಂತ ಒಂದು ವಿಭಿನ್ನ ಮ್ಯಾನರಿಸಂನ ಕಥೆಯ ಸಿನೆಮಾ ನೀಡಿದ ಕಾಪಿಕಾಡ್‌ ಅವರ ಮುಂದಿನ ಸಿನೆಮಾ ಯಾವುದು ಎಂಬುದು ಸದ್ಯದ ಕುತೂಹಲವಾಗಿತ್ತು.

ಜಬರ್ದಸ್ತ್ ಸಿನೆಮಾವನ್ನು ಜಬರ್ದಸ್ತಾಗಿ ಶೂಟಿಂಗ್‌ ಮುಗಿಸಿದ ಬಳಿಕ ಅವರು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಹಜವಾಗಿ ಕೋಸ್ಟಲ್‌ವುಡ್‌ ಅಂಗಳದಲ್ಲಿ ಕೇಳಿಬಂದಿತ್ತು. ಇದಕ್ಕೆ ಉತ್ತರವಾಗಿ ಈಗ ಹೊಸ ಸಿನೆಮಾದ ಮಾತು ಕಾಪಿಕಾಡ್‌ ವಲಯದಿಂದ ಕೇಳಿಬರುತ್ತಿದೆ.

ಅಂತೂ ಕಾಪಿಕಾಡ್‌ ಸದ್ಯ ಫುಲ್‌ ಬ್ಯುಸಿ ಆಗಿದ್ದಾರೆ. ಜಬರ್ದಸ್ತ್ ಶಂಕರ ರಿಲೀಸ್‌ನ ಹೊಸ್ತಿಲ್ಲಿರುವಾಗಲೇ ಹೊಸ ಸಿನೆಮಾ ಮಾಡಲು ಕಾಪಿಕಾಡ್‌ ಹೆಜ್ಜೆ ಇರಿಸಿದ್ದು, ಈ ಸಿನೆಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎಂಬಿತ್ಯಾದಿ ಸಂಗತಿಗಳು ಸದ್ಯಕ್ಕಿಲ್ಲ.

ಬರ್ಸ, ಚಂಡಿ ಕೋರಿ, ಅರೆ ಮರ್ಲೆರ್‌, ಏರಾ ಉಲ್ಲೆರ್‌ಗೆ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ ಕಾಪಿಕಾಡ್‌ ಇನ್ನೂ ಹಲವು ಸಿನೆಮಾದ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದವರು. ತುಳುವಿನ ಹಲವು ಸಿನೆಮಾದಲ್ಲಿ ಬಣ್ಣಹಚ್ಚಿ, ನಗುವಿನ ಜತೆಗೆ ಮೋಡಿಮಾಡಿದವರು. ಜತೆಗೆ, ರಮೇಶ್‌ ಅರವಿಂದ್‌ ಜತೆಗೆ ವೆಂಕಟ ಇನ್‌ ಸಂಕಟ, ಯಶ್‌ ಜತೆಗೆ ತೂಫಾನ್‌ ಹಾಗೂ ಕಾರ್ತಿಕ್‌ ಎಂಬ ಸಿನೆಮಾದಲ್ಲಿ ಬಣ್ಣಹಚ್ಚಿದ ದೇವದಾಸ್‌ ಕಾಪಿಕಾಡ್‌ ಅವರಿಗೆ ಹೆಚ್ಚಾ ಕಡಿಮೆ 38ರಷ್ಟು ಕನ್ನಡ ಚಿತ್ರಗಳ ಆಫರ್‌ ಬಂದಿತ್ತು. ಆದರೆ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕರಾವಳಿ ಭಾಗದಲ್ಲಿಯೇ ಸಮಯ ಬೇಕಾಗಿರು ವುದರಿಂದ ಸ್ಯಾಂಡಲ್‌ವುಡ್‌ನ‌ ಆಫರ್‌ಗಳನ್ನು ಕಾಪಿಕಾಡ್‌ ನಯವಾಗಿ ನಿರಾಕರಿಸಿ ದ್ದರು. ವಿಶೇಷ ವೆಂದರೆ
ತಮಿಳು, ಮಲಯಾಳಂ ನಲ್ಲೂ ಇಂತಹುದೇ ಆಫರ್‌ ಬಂದಿದ್ದು, ಕಾಪಿಕಾಡ್‌ಗೆ ಸಮಯ ಸಾಕಾಗದೆ, ಅತ್ತ ಗಮನಹರಿಸಿಲ್ಲ.ಅಂದಹಾಗೆ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ “ಜಬರ್‌ದಸ್ತ್ ಶಂಕರ’ ಸಿನೆಮಾ ಇನ್ನೇನು ಕೆಲವೇ ದಿನದಲ್ಲಿ ತೆರೆಕಾಣಲಿದೆ.

ಇರುವೈಲ್‌, ಉಲಾಯಿಬೆಟ್ಟು, ಎಡಪದವು, ಬೆಂಜನಪದವು, ಕೊಡಾ¾ಣ್‌, ಮೆಲ್ಕಾರ್‌, ಪಣೋಲಿಬೈಲ್‌ ಬಳಿಯ ಕೇಶವನಗರ ಮುಂತಾದೆಡೆ ಜಬರ್‌ದಸ್ತ್ ಶಂಕರ ಸಿನೆಮಾಕ್ಕೆ ಚಿತ್ರೀಕರಣ ನಡೆದಿದೆ. ಸಿನೆಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು ಮಾಸ್‌ ಮಾದ ಸಾಹಸದ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

-  ದಿನೇಶ್‌ ಇರಾ

ಟಾಪ್ ನ್ಯೂಸ್

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.