ತುಳುವಿನಲ್ಲಿ ಇಂಗ್ಲೀಷ್!
Team Udayavani, Feb 13, 2020, 5:18 AM IST
ತುಳು ಸಿನೆಮಾಗಳ ಪಾಲಿಗೆ ಕೆಲವೇ ದಿನಗಳಲ್ಲಿ ತೆರೆಕಾಣಲಿರುವ “ಇಂಗ್ಲೀಷ್’ ಹೊಸ ನಿರೀಕ್ಷೆ ಮೂಡಿಸಿದೆ. ತುಳು ಭಾಷೆಯಲ್ಲಿ ಇಂಗ್ಲೀಷ್ ಎಂಬ ಟೈಟಲ್ ಅನ್ನು ಹಾಕಿಕೊಂಡ ಕಾರಣದಿಂದಲೇ ಸಿನೆಮಾ ಬಗ್ಗೆ ಹೆಚ್ಚು ನಿರೀಕ್ಷೆ. ಸೂರಜ್ ಶೆಟ್ಟಿ ಅವರ ನಿರ್ದೇಶನದ ಇಂಗ್ಲಿಷ್ ಸಿನೆಮಾ ಮುಂದಿನ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದಲ್ಲಿ ಸಿನೆಮಾ ಅದ್ದೂರಿಯಾಗಿ ಸಿದ್ದವಾಗಿದೆ.
ಭಾರೀ ಪ್ರಯತ್ನಪಟ್ಟು ಇಂಗ್ಲಿಷ್ ಕಲಿಯುವುದೇ ಈ ಸಿನೆಮಾದ ಪ್ರಮುಖ ವಿಷಯ. ಪರಿಶ್ರಮದಿಂದ ಏನನ್ನೂ ಮಾಡಬಹುದು ಎಂಬ ಸಂದೇಶವನ್ನೂ ಹೊಂದಿರುವ ಈ ಸಿನೆಮಾದಲ್ಲಿ ಆ ಯುವಕನು ಇಂಗ್ಲಿಷ್ ಕಲಿಯಲು ಪಡುವ ಪಾಡು, ಆಕೆಯ ಮನ ಗೆಲ್ಲುವುದು ಮತ್ತು ಆಕೆಯ ಮನೆಯವರನ್ನೂ ಮದುವೆಗೆ ಒಪ್ಪಿಸಲು ಸಫಲವಾಗುವವರೆಗೆ ಸಾಗುವ ಕಥೆ ಅತ್ಯಂತ ಕುತೂಹಲದಿಂದ ಕೂಡಿದೆ. ಮಾಲ್‌ನಲ್ಲಿ ವೇಷ ಹಾಕಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ ಈತ ಏರುವ ಎತ್ತರ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.
ಕನ್ನಡದ ಹಿರಿಯ ಮತ್ತು ಖ್ಯಾತ ನಟ ಅನಂತನಾಗ್ ಅವರು ನಟಿಸಿರುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್, ನವ್ಯಾ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ರವಿ ರಾಮಕುಂಜ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.