‘ಇಂಗ್ಲೀಷ್’ ಪಾಠ ಹೇಳುವ ಅನಂತ್‌ನಾಗ್!
Team Udayavani, Jan 31, 2019, 7:18 AM IST
ಅಕ್ಮೆ ಮೂವೀಸ್ ಇಂಟರ್‌ನ್ಯಾಶನಲ್ ಲಾಂಛನದಲ್ಲಿ ತಯಾರಾಗುತ್ತಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣದ ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ಇಂಗ್ಲಿಷ್’ ತುಳು ಸಿನೆಮಾ ಮುಹೂರ್ತ ಆಗುತ್ತಿದ್ದಂತೆ ಒಂದೊಂದೇ ವಿಶೇಷತೆಗಳ ಮೂಲಕ ಸುದ್ದಿಗೆ ಬಂದಿದೆ. ಸ್ಯಾಂಡಲ್‌ವುಡ್ ಲೋಕದಲ್ಲಿ ಪ್ರಚಲಿತದಲ್ಲಿರುವ ಅನಂತ್‌ನಾಗ್ ಇದೇ ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹರೀಶ್ ಶೇರಿಗಾರ್ ನಿರ್ಮಾಣದ ‘ಮಾರ್ಚ್ 22’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನೆಮಾದಲ್ಲಿ ಮುಖ್ಯ ರೋಲ್‌ನಲ್ಲಿಯೇ ಕಾಣಿಸಿಕೊಂಡ ಅನಂತ್‌ನಾಗ್ ಅವರು ಶೇರಿಗಾರ್ ಅವರ ಕೋರಿಕೆಯ ಮೇರೆಗೆ ಅವರದ್ದೇ ತುಳು ಸಿನೆಮಾದಲ್ಲಿಯೂ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಕೆಲವೇ ದಿನದ ಹಿಂದೆ ಮಂಗಳೂರಿನಲ್ಲಿ ಮುಹೂರ್ತ ಕಂಡಿರುವ ಈ ಸಿನೆಮಾದ ಶೂಟಿಂಗ್ ಸದ್ಯ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಅಂದಹಾಗೆ, ‘ಇಂಗ್ಲೀಷ್’ನ ಕಥೆ ಏನು ಗೊತ್ತಾ? ಹೀರೋ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹೀರೋಯಿನ್ ತನ್ನ ಗೆಳತಿಯ ಜತೆ ಬರುತ್ತಿರುತ್ತಾಳೆ. ಹೀರೋಗೆ ಹೀರೋಯಿನ್ ಅನ್ನು ಕಂಡು ಇಷ್ಟವಾಗುತ್ತದೆ. ಒಂದು ದಿನ ಹೀರೋಹಿನ್ ಬಳಿ ತನ್ನ ಪ್ರೀತಿ ವಿಷಯ ತಿಳಿಸುತ್ತಾನೆ. ಹೀರೋಯಿನ್ ಆತನಿಗೆ ಇಂಗ್ಲೀಷ್ ಬರುವುದಿಲ್ಲವೆಂದೂ ತಾನು ಮದುವೆ ಆದರೆ ಇಂಗ್ಲೀಷ್ ಗೊತ್ತಿರುವವನನ್ನು ಮಾತ್ರ ಆಗುವುದೆಂದೂ ನಾಯಕನನ್ನು ನಿರಾಕರಿಸುತ್ತಾಳೆ. ಅಂದಿನಿಂದ ಹೀರೋ ತನ್ನ ಫ್ರೆಂಡ್ಸ್ ಜತೆ ಸೇರಿ ‘ಇಂಗ್ಲೀಷ್’ ಕಲಿಯಲು ಶುರು ಮಾಡುತ್ತಾನೆ. ಅಲ್ಲಿಂದ ಕಥೆ ಮುಂದುವರಿಯುತ್ತದೆ. ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮಕುಂಜ ಮುಂತಾದವರಿದ್ದಾರೆ. ಕೃಷ್ಣ ಸಾರಥಿ ಛಾಯಾಗ್ರಹಣ, ಮನು ಶೇಡ್‌ಗಾರ್ ಸಂಕಲನ ಹಾಗೂ ಸಂಗೀತ ಮಣಿಕಾಂತ್ ಕದ್ರಿ ನೀಡಲಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.