Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Team Udayavani, May 2, 2024, 12:23 PM IST

fashion-world

ಸೀರೆ ಎನ್ನುವುದು ಹೆಚ್ಚಿನ ಮಹಿಳೆಯರ ಭಾವನಾತ್ಮಕ ಉಡುಪು. ಇದು ಸಾಂಪ್ರದಾಯಿಕ ಮತ್ತು ಮಾಡರ್ನ್ ಎರಡಕ್ಕೂ ಸೈ ಎನ್ನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಇಂದಿಗೂ ಸೀರೆ ಎಲ್ಲರ ನೆಚ್ಚಿನ ಉಡುಪಾಗಿದೆ.

ಉಡುವ ರೀತಿ, ಸೀರೆಯ ಮಾದರಿ, ಬ್ಲೌಸ್‌ನ ಡಿಸೈನ್‌ಗಳ ಆಧಾರದಲ್ಲಿ  ಸೀರೆಯನ್ನು ಸಾಂಪ್ರದಾಯಿಕ ಮತ್ತು ಮಾಡರ್ನ್ ಆಗಿ ಬಳಸಬಹುದು. ಹಬ್ಬ, ಉತ್ಸವಗಳಿಗೆ ಸಾಂಪ್ರದಾಯಿಕ ಸೀರೆಯನ್ನು ಬಳಸಿದರೆ, ಪಾರ್ಟಿ, ಫ್ಯಾಷನ್‌ ಕಾರ್ಯಕ್ರಮಗಳಿಗೆ ಪಾರ್ಟಿವೇರ್‌ ಸೀರೆಗಳೇ ಇವೆ. ಹೊಸ ಹೊಸ ಡಿಸೈನ್‌ಗಳ ಸೀರೆ ಇತ್ತೀಚೆಗೆ ಬರುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.  ರೇಷ್ಮೆ ಸೀರೆಗಳು, ಕಾಂಚೀವರಂ ಸೀರೆಗಳೊಂದಿಗೆ ಈಗ ಹೊಸ ಮಾದರಿಯ ಸೀರೆಗಳು ಮಾರುಕಟ್ಟೆಗೆ ಬರುತ್ತಿವೆ.  ಫ್ಲೋರಲ್‌ ಎಂಬ್ರಾಯ್ಡರಿ ಸೀರೆ, ಟಿಶ್ಯೂ ಸೀರೆ, ಪೇಸ್ಟಲ್‌ ಶಿಮ್ಮರ್‌ ಸೀರೆ ಮೊದಲಾದವುಗಳು ಫ್ಯಾಷನ್‌ ಲೋಕದಲ್ಲಿ ಮಿಂಚುತ್ತಿವೆ. ಸಿನೆಮಾ ನಟಿಯರು, ಮಾಡಲ್‌ಗ‌ಳು, ಸೆಲೆಬ್ರೆಟಿಗಳು ಈಗ ಹೊಸ ಮಾದರಿಯ ಸೀರೆಗಳತ್ತ ಆಕರ್ಷಿತರಾಗಿದ್ದಾರೆ.

ಬಣ್ಣದ ಆಯ್ಕೆ ಹೊಂದುವಂತಿರಲಿ

ಈಗ ಸೀರೆಗಳ ಬಣ್ಣಗಳೂ ಟ್ರೆಂಡಿಂಗ್‌ನಲ್ಲಿದ್ದು, ಹೆಚ್ಚು ಭಿನ್ನವಾಗಿರುವಂತಹ, ರಾಯಲ್‌ ಲುಕ್‌ ನೀಡುವಂತಹ ಬಣ್ಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಯಾವುದೇ ಮಾದರಿಯ ಸೀರೆಯಾದರೂ, ಎಷ್ಟೇ ಹಣ ಕೊಟ್ಟು ಖರೀದಿಸಿದರೂ ಸುಂದರವಾಗಿ ಕಾಣಿಸುವುದು ಆ ಸೀರೆಯ ಬಣ್ಣ ಉಟ್ಟವರ ಬಣ್ಣಕ್ಕೆ ಹೊಂದಿಕೆಯಾದರೆ ಮಾತ್ರ.

ಸೀರೆಗೆ ಹೊಂದುವಂತಹ ಡಿಸೈನ್‌ ಇರಲಿ

ಸೀರೆಯು ಸಾಂಪ್ರದಾಯಿಕವಾಗಿದ್ದರೆ ಅದೇ ಮಾದರಿಯಲ್ಲಿ ಅದರ ಬ್ಲೌಸ್‌ ಹೊಲಿಸಿದರೆ ಸುಂದರವಾಗಿ ಕಾಣಿಸುತ್ತದೆ.  ನೆಟ್ಟೆಡ್‌ ಸೀರೆಗಳು, ಫ್ಯಾನ್ಸಿ ಸೀರೆಗಳು, ಸ್ಟೋನ್‌ ಸೀರೆಗಳಿಗೆ ಮಾಡರ್ನ್ ಮಾದರಿಯ ಬ್ಲೌಸ್‌ಗಳು ಹೆಚ್ಚು ಹೊಂದುತ್ತವೆ. ಆದ್ದರಿಂದ ಸೀರೆಯ ಮಾದರಿಗೆ ಅನುಗುಣವಾಗಿ ಬ್ಲೌಸ್‌ ಹೊಲಿಸಿದರೆ ಸೀರೆಯ ಅಂದ ಮತ್ತು ಅದನ್ನು ಉಟ್ಟವರ ಅಂದ ಹೆಚ್ಚುತ್ತದೆ.

ಸೀರೆ ಉಡುವುದೇ ಒಂದು ಕಲೆ

ಸೀರೆ ಎಷ್ಟೇ ಅಂದವಾಗಿದ್ದರೂ, ಬೆಲೆಯದ್ದಾಗಿದ್ದರೂ ಅದು ಸುಂದರವಾಗಿ ಕಾಣಿಸುವುದು ಅದನ್ನು ಉಡುವ ರೀತಿಯಿಂದ. ಸೀರೆಯನ್ನು ಉಡುವುದೇ ಒಂದು ಕಲೆ. ಸೀರೆಯನ್ನು ಉಡುವ ರೀತಿಯಿಂದ ಅದರ ಸೌಂದರ್ಯದಲ್ಲಿ ವ್ಯತ್ಯಾಸವುಂಟಾಗಬಹುದು.

ಸೀರೆಗೆ ಹೊಂದುವ ಆಭರಣವಿರಲಿ

ಸೀರೆಯ ಮಾದರಿಗೆ ಅನುಗುಣವಾಗಿ ಆಭರಣಗಳನ್ನು ಧರಿಸಿಕೊಳ್ಳುವುದು ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಬಹುದು. ಗೋಲ್ಡನ್‌ ಬಾರ್ಡರ್‌ ಸೀರೆಯಾಗಿದ್ದರೆ ಬಂಗಾರದ ಆಭರಣಗಳನ್ನು, ಸಿಲ್ವರ್‌ ಬಾರ್ಡರ್‌ ಆಗಿದ್ದರೆ ಸಿಲ್ವರ್‌ ಆಭರಣಗಳನ್ನು ಮತ್ತು ಕಾಪರ್‌, ಆ್ಯಂಟಿಕ್‌ ಆಭರಣಗಳನ್ನು ಆಯಾ ಸೀರೆಗೆ ಅನುಗುಣವಾಗಿ ಬಳಸಿಕೊಳ್ಳಬಹುದು. ಇದರಿಂದ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳಲು ಸಾಧ್ಯ.

ಹೇರ್‌ಸ್ಟೈಲ್‌ಗ‌ೂ ಇರಲಿ ಆದ್ಯತೆ

ಕೂದಲನ್ನು ಹೇಗೆ ಕಟ್ಟುತ್ತಾರೆ ಎನ್ನುವುದೂ ಕೂಡ ಮಹತ್ವವಾದದ್ದು. ಮಾಡರ್ನ್ ಮಾದರಿಯಲ್ಲಿ ಸೀರೆಯುಟ್ಟು ಜಡೆ ಹಾಕಿದರೆ ಅದು ಫ್ಯಾಷನ್‌ಗೆ ತದ್ವಿರುದ್ಧದಂತಿರುತ್ತದೆ. ಆದ್ದರಿಂದ ಯಾವ ಮಾದರಿಯ ಸೀರೆ ಉಟ್ಟುಕೊಳ್ಳುತ್ತೇವೋ ಅದಕ್ಕೆ ಪೂರಕವಾದ ರೀತಿಯಲ್ಲಿ ಕೂದಲನ್ನು ಕಟ್ಟಿಕೊಳ್ಳುವುದು ಅಗತ್ಯ. ಸಾಂಪ್ರದಾಯಿಕವಾಗಿ ಸೀರೆ ಉಟ್ಟಿದ್ದರೆ ಜಡೆ ಹಾಕಿಕೊಳ್ಳಬಹುದು. ಅದೇ ರೀತಿ ಮಾಡರ್ನ್ ಮಾದರಿಯಲ್ಲಿ ಸೀರೆಯುಟ್ಟಿದ್ದರೆ ಫ್ರೀಹೇರ್‌ ಅಥವಾ ಬೇರೆ ಮಾದರಿಯಲ್ಲಿ ಹೇರ್‌ಸ್ಟೈಲ್‌ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ನಾವು ಯಾವ ಮಾದರಿಯ ಸೀರೆ ಹಾಕಿಕೊಂಡಿದ್ದೇವೆ ಅದಕ್ಕೆ ಹೊಂದಿಕೊಂಡಿದ್ದರೆ ಪರಿಪೂರ್ಣವಾಗಿ ಕಾಣಿಸಿಕೊಳ್ಳಬಹುದು.

ಸೀರೆ ಉಟ್ಟರೆ ಹೆಚ್ಚಾಗಿ ಹೈಹೀಲ್ಡ್‌ ಚಪ್ಪಲಿಯು ಹೆಚ್ಚು ಹೊಂದಿಕೊಳ್ಳುತ್ತದೆ. ಆದರೆ ಹೆಚ್ಚು ಉದ್ದ ಇರುವವರು ಫ್ಲ್ಯಾಟ್‌ ಚಪ್ಪಲಿಯನ್ನೂ ಬಳಸಬಹುದು. ಶೂ, ಕಾಲನ್ನು ಪೂರ್ತಿಯಾಗಿ ಮುಚ್ಚುವ ಮಾದರಿಯ ಚಪ್ಪಲಿಯನ್ನು ಬಳಸದಿರುವುದು ಉತ್ತಮ. ಇದರೊಂದಿಗೆ ಮೇಕಪ್‌, ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡಿ ಬಳಸಿದರೆ ಹೆಚ್ಚು  ಸುಂದರವಾಗಿ ಕಾಣಿಸಿಕೊಳ್ಳಬಹುದು.

ರಂಜಿನಿ ಎಂ.

ಟಾಪ್ ನ್ಯೂಸ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.