ಪಡೀಲ್‌ನಿಂದ ಗಾಂಧೀನಗರಕ್ಕೆ! 


Team Udayavani, Jul 19, 2018, 2:18 PM IST

19-july-9.jpg

ತುಳು ಸಿನೆಮಾರಂಗದ ಎವರ್‌ ಗ್ರೀನ್‌ ‘ಕುಸೇಲ್ದರಸೆ’ ನವೀನ್‌ ಡಿ. ಪಡೀಲ್‌ ಸದ್ಯ ತುಳು ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಬೆನ್ನಿಗೆ ಇನ್ನೊಂದರಂತೆ ಅವರ ಅಭಿನಯದ ತುಳು ಸಿನೆಮಾಗಳು ತೆರೆ ಕಾಣುವ ತವಕದಲ್ಲಿವೆ. ಇದರ ಜತೆಗೆ ಸ್ಯಾಂಡಲ್‌ ವುಡ್‌ನಿಂದಲೂ ನವೀನ್‌ ಡಿ. ಪಡೀಲ್‌ ಗೆ  ಫರ್‌ಗಳ ಸುರಿಮಳೆಯೇ ಬರುತ್ತಿದೆ.

ಈಗಾಗಲೇ ಹೆಚ್ಚಾ ಕಡಿಮೆ 10ರಿಂದ 12ರಷ್ಟು ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಂಡಿರುವ ಪಡೀಲ್‌ ಮತ್ತೆ ಸ್ಯಾಂಡಲ್‌ವುಡ್‌ನ‌ಲ್ಲಿಯೇ ಬ್ಯುಸಿ ಇದ್ದಾರೆ. ಇದರ ಮಧ್ಯೆಯೇ ಕೋಸ್ಟಲ್‌ವುಡ್‌ನ‌ ಹಲವು ಸಿನೆಮಾದಲ್ಲಿ ಪಡೀಲ್‌ ಬಣ್ಣ ಹಚ್ಚುತ್ತಿದ್ದಾರೆ. ಜತೆಗೆ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಕೂಡ ಫೇಮಸ್‌ ಆಗಿದ್ದಾರೆ. ಅಂದಹಾಗೇ ಪಡೀಲ್‌ ಅಭಿನಯದ ‘ದಗಲ್ಬಾಜಿಲು’, ಮೈ ನೇಮ್‌ ಈಸ್‌ ಅಣ್ಣಪ್ಪ ಸಹಿತ ಹಲವು ಸಿನೆಮಾಗಳು ತೆರೆಕಾಣುವ ತವಕದಲ್ಲಿವೆ.

ಇನ್ನು ಕನ್ನಡ ಸಿನೆಮಾ ಬಗ್ಗೆ ಮಾತನಾಡುವುದಾದರೆ, ‘ಜಾಗ್ವಾರ್‌’ ಖ್ಯಾತಿಯ ನಟ ನಿಖೀಲ್‌ ಗೌಡ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನೆಮಾದಲ್ಲೂ ನವೀನ್‌ ಡಿ. ಪಡೀಲ್‌ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ ಅದ್ದೂರಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನೆಮಾದಲ್ಲಿ ಪಡೀಲ್‌ ಅವರು ನಿಖೀಲ್‌ ಗೌಡ ಅವರ ಜತೆಗೆ ಈಗಾಗಲೇ ಶೂಟಿಂಗ್‌ ಕೂಡ ನಡೆಸಿದ್ದಾರೆ. ಹರ್ಷ ಅವರ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನೆಮಾ ಸ್ಯಾಂಡಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಕೂಡ ಮೂಡಿಸಿದೆ.

ವಿನಯ್‌ ರಾಜ್‌ಕುಮಾರ್‌ ಮುಖ್ಯ ಭೂಮಿಕೆಯ ‘ಅನಂತು ವರ್ಸಸ್‌ ನುಸ್ರತ್‌’ ಸಿನೆಮಾದಲ್ಲಿ ನವೀನ್‌ ಡಿ. ಪಡೀಲ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಪ್ರಸಿದ್ಧವಾಗಿರುವ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಖಳನಾಯಕ ರವಿಶಂಕರ್‌ ಈ ಸಿನೆಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಕೀಲರ ಪಾತ್ರದಲ್ಲಿ ನವೀನ್‌ ಡಿ. ಪಡೀಲ್‌ ಮಿಂಚಿದ್ದಾರೆ.

ಇನ್ನು ಹೊಸಬರನ್ನೇ ಇಟ್ಟುಕೊಂಡು ರೆಡಿ ಮಾಡಿರುವ ರಿಷಬ್‌ ಶೆಟ್ಟಿ ಮುಖ್ಯ ಭೂಮಿಕೆಯ ‘ಬೆಲ್‌ ಬಾಟಮ್‌’ ಸಿನೆಮಾದಲ್ಲೂ ನವೀನ್‌ ಡಿ. ಪಡೀಲ್‌ ಮಿಂಚಿದ್ದಾರೆ. ನಿರ್ದೇಶಕ ಜಯತೀರ್ಥ ಆ್ಯಕ್ಷನ್‌ ಕಟ್‌ ಹೇಳಿದ ಈ ಸಿನೆಮಾದಲ್ಲಿ ಪಡೀಲ್‌ ಅಟ್ರ್ಯಾಕ್ಟಿವ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತುಳುನಾಡಿನ ಹಲವು ಕಲಾವಿದರು ಕೂಡ ಇದ್ದಾರೆ ಎಂಬುದು ವಿಶೇಷ.

ಪಡೀಲ್‌ ಸದ್ಯ ಇಷ್ಟು ಸಿನೆಮಾದಲ್ಲಿ ಬ್ಯುಸಿಯಾಗಿದ್ದರೆ, ಚಿಕ್ಕಣ್ಣ, ಸಾಧುಕೋಕಿಲ ಕಾಂಬಿನೇಷನ್‌ನ ಇನ್ನೊಂದು ಸಿನೆಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ಕೂಡ ನಡೆಸುತ್ತಿದ್ದಾರೆ. ತುಳು ಚಿತ್ರರಂಗ ಕಂಡ ‘ಕುಸೇಲ್ದರಸೆ’ ನವೀನ್‌ ಡಿ. ಪಡೀಲ್‌, 2016ನೇ ಸಾಲಿನ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತುಳು ರಂಗಭೂಮಿಯ ಮೂಲಕವಾಗಿ ಕರಾವಳಿಯಲ್ಲಿ ಮನೆ ಮಾತಾದ ಪಡೀಲ್‌, ಪ್ರಸಕ್ತ ತುಳು/ ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ಕಾರ್ಯಕ್ರಮದ ಮೂಲಕ ಪ್ರಸಿದ್ದಿ ಪಡೆದಿದ್ದಾರೆ.

ನಗು ಉಕ್ಕಿಸುವ ಕಲಾವಿದನಾಗಿ ಸಾವಿರಾರು ಅಭಿಮಾನಿಗಳ ಕಣ್ಮನಗಳಲ್ಲಿ ಕಂಗೊಳಿಸಿದ ಪಡೀಲ್‌ ಕರಾವಳಿಯ ಅತ್ಯದ್ಭುತ ಪೂಷಕ ನಟ ಕೂಡ ಹೌದು. ತುಳು ರಂಗಭೂಮಿಯಲ್ಲಿ ಸಾಧನೆಯ ಮೈಲಿಗಲ್ಲು ಬರೆದ ಹಲವು ತುಳು ನಾಟಕಗಳಲ್ಲಿ ಯಶಸ್ವಿ ಪೋಷಕ ನಟನ ಪಾತ್ರದ ಮೂಲಕ ಪಡೀಲ್‌ ಸಾಧನೆ ತೋರಿದ್ದಾರೆ. 

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.