ಭವ್ಯ ಅರಮನೆಯಲ್ಲಿ ಕುಳಿತ ಸಾಂಗ್ಲಿಯ ಗಣೇಶ
Team Udayavani, May 30, 2019, 6:00 AM IST
ಮಹಾರಾಷ್ಟ್ರದ ಸಾಂಗ್ಲಿಗೆ ಹೋಗಿದ್ದ ವೇಳೆ ಅಲ್ಲಿನ ಹೃದಯವೆಂದೇ ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ದೇಗುಲ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡುವ ಅವಕಾಶ ಸಿಕ್ಕಿತ್ತು. ಭವ್ಯ,ನಯನ ಮನೋಹರವಾಗಿರುವ ಈ ದೇವಸ್ಥಾನ ನೋಡಲು ಪುರಾತನ ಶೈಲಿಯಲ್ಲಿದ್ದರೂ, ಆಧುನಿಕತೆಯ ಟಚ್ ಕೂಡ ಸಿಕ್ಕಿದಂತಿದೆ. ಮಾಸದ ಬಣ್ಣ ಹಾಗೂ ನಿರ್ವಹಣೆ ವೇಳೆ ಎಲ್ಲೂ ಲೋಪ ಬಾರದಂತೆ ನೋಡಿ ಕೊಂಡಿ ರುವುದರಿಂದ ಇತ್ತೀಚೆಗೆ ನಿರ್ಮಾಣಗೊಂಡ ದೇಗುಲದಂತೆ ಕಂಗೊಳಿಸುತ್ತಿದೆ. ಅಲ್ಲದೆ ದೇಗುಲ ವಿಡೀ ಭವ್ಯ ಅರಮನೆಯಂತೆ ಭಾಸವಾಗುತ್ತದೆ.
ಹಿಂದಿನ ದಿನದ ತೀರ್ಮಾನದಂತೆ ಮುಂಜಾನೆ ಬೇಗ ಎದ್ದು ಫ್ರೆಶ್ ಆಗಿ ತಿಂಡಿ ಮುಗಿಸಿ 8 ಗಂಟೆ ಸುಮಾರಿಗೆ ಸಾಂಗ್ಲಿಯ ಜಗದ್ವಿಖ್ಯಾತ ದೇಗುಲ ಗಣಪತಿ ಮಂದಿರಕ್ಕೆ ಭೇಟಿ ನೀಡಲು ಹೊರಟೆವು. ಮನೆಯಿಂದ ಸುಮಾರು 2 ಕಿ.ಮೀ. ದೂರದ ಲ್ಲಿರುವ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲೇ ಹೊರಟೆವು. ಈ ಮೂಲಕ ಮಹಾರಾಷ್ಟ್ರದ ಪ್ರಮುಖ ನಗರವೆಂದೇ ಪರಿಗಣಿಸಲ್ಪಟ್ಟಿರುವ ಸಾಂಗ್ಲಿಯಗಲ್ಲಿಗಲ್ಲಿಯದರು ಶನವೂ ಆಯಿತು.
ಸದಾ ಜನ ಜಂಗುಳಿಯಿಂದ ತುಂಬಿದ್ದ ರಸ್ತೆಯಲ್ಲಿ ಯಾವ ಮುಲಾಜೂ ಇಲ್ಲದೆ ಸಾಗುವ ವಾಹನಗಳಿದ್ದರೂ ಪಾದಚಾರಿಗಳಿಗಾಗಿ ತತ್ ಕ್ಷಣ ಬ್ರೇಕ್ ಹಾಕುವಂಥ ಸನ್ನಿವೇಶ. ರಸ್ತೆ ಯಲ್ಲಿ ಸಾಕಷ್ಟು ಮಂದಿ ನಡೆದುಕೊಂಡು ಹೋಗುತ್ತಿದ್ದರೂ ಅವರ ನಡುವೆ ವಾಹನಗಳು ತೂರಿಕೊಂಡು ಹೋಗುವ ದೃಶ್ಯ ಭಯಭೀತರನ್ನಾಗಿದರೂ ಅಲ್ಲಿ ಪಾದ ಚಾರಿಗಳಿಗೆ ವಾಹನಗಳು ಸೈಡ್ ಕೊಡು ತ್ತವೆ ಎಂದು ಕೇಳಿ ಅಚ್ಚ ರಿಯೂ ಆಯಿತು. ಜತೆಗೆ ನಗರದ ರಸ್ತೆಗಳು, ಧೂಳು, ಜನ ಜಂಗುಳಿ, ವಾಹನಗಳು ಓಡಾಡುವ ಕರ್ಕಶ ಧ್ವನಿ, ಅಲ್ಲಲ್ಲಿ ತುಂಬಿ ಕೊಂಡಿರುವ ತ್ಯಾಜ್ಯ ನೋಡಿ ಇದಕ್ಕಿಂತ ನಮ್ಮ ಹಳ್ಳಿ ಯಲ್ಲಿ ಹೋಗಿ ನೆಲೆಸುವುದೇ ವಾಸಿ ಎನ್ನುವ ಭಾವನೆ ಮನದ ಲ್ಲೊಮ್ಮೆ ಓಡಿಯಾಗಿತ್ತು. ಇಷ್ಟೆಲ್ಲ ಯೋಚನೆಗಳ ಮಧ್ಯೆಯೂ ನಗರದ ಸೌಂದರ್ಯ,ಗಲ್ಲಿ ಗಳಲ್ಲಿ ಸಾಗಿರುವ ರಸ್ತೆಗಳು ಖುಷಿ ಕೊಟ್ಟಿತ್ತು. ಅಪರಿಚಿತ ಊರಿನ ಮಹಾನಗರದ ಪ್ರತಿ ವಸ್ತು ವಿಷಯವನ್ನು ಮನದಲ್ಲಿ ತುಂಬಿಕೊಂಡು ಸುಮಾರು ಅರ್ಧ ಮುಕ್ಕಾಲು ಗಂಟೆಯ ಹಾದಿಯನ್ನು ಕ್ರಮಿಸಿದ್ದೇ ತಿಳಿಯಲಿಲ್ಲ. ದೇವಸ್ಥಾನದ ಪ್ರವೇಶದ್ವಾರ ತಲುಪಿದಾಗ ಗಂಟೆ 8.45 ತೋರಿಸುತ್ತಿತ್ತು.
ಪುರಾತನ ಕೋಟೆ ಮಾದರಿಯಲ್ಲಿದ್ದ ಪ್ರವೇಶದ್ವಾರವನ್ನು ದಾಟಿ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಬದಿಗಳಲ್ಲಿ ಹೂವು, ಹಣ್ಣು ವ್ಯಾಪಾರಿಗಳು ನಮ್ಮನ್ನು ಕರೆಯುತ್ತಿದ್ದರು.
ಈ ದೇವಾಲಯವನ್ನು ಕಟ್ಟಲು ಸುಮಾರು 30 ವರ್ಷಗಳೇ ತಗಲಿತ್ತು. 1811- 1844ರ ಅವಧಿಯಲ್ಲಿ ಭವ್ಯವಾದ ಈ ದೇಗುಲವನ್ನು ಸಾಂಗ್ಲಿಯ ರಾಜಾ ಸಾಹೇಬ್ ಅಪ್ಪಾ ಸಾಹೇಬ್ ಪಟವರ್ಧನ್ ಸ್ಥಾಪಿಸಿದ್ದನು. ಸುಮಾರು 2 ಎಕರೆ ಯಷ್ಟು ವಿಸ್ತಾರ ಆವರಣವನ್ನು ಹೊಂದಿರುವ ಇಲ್ಲಿನ ಗಣಪತಿ ದೇವರ ವಿಗ್ರಹ ನೋಡಲು ಆಕರ್ಷಕವಾಗಿದೆ. ದೇವಸ್ಥಾನದ ಆವರಣದಲ್ಲಿ ನವ ಗ್ರಹ ವಿಗ್ರಹಗಳು, ಆನೆಯ ಬೃಹತ್ ವಿಗ್ರಹ, ಸಾಂಗ್ಲಿ ಸಂಸ್ಥಾ ನದ ಮೊದಲ ಸಂಸ್ಥಾಪಕ ವಿಜಯಸಿಂಹ ರಾಜೇ ಪಟವರ್ಧನ್‌ನ ಪ್ರತಿಮೆ, ರಾಜ ಮಹಾರಾಜರ ಕಾಲ ದಲ್ಲಿ ಬಳಕೆಯಲ್ಲಿದ್ದ ಫಿರಂಗಿ ಆಕರ್ಷಕವಾಗಿವೆ. ಒಟ್ಟಿನಲ್ಲಿ ದೇವಸ್ಥಾನದ ಆವರಣದಲ್ಲಿ ಸಾಂಗ್ಲಿಯ ಇತಿಹಾಸವನ್ನು ಸಾರುವ ಸಾಕಷ್ಟು ಮಾಹಿತಿಗಳು ಲಭ್ಯವಿದೆ.
ಬಳಿ ಹೋಗಿ ದೇವರಿಗೆ ಹಾಕಲು ಹೂವಿನ ಮಾಲೆ ತೆಗೆದು ಕೊಂಡು ದೇವರ ದರ್ಶನಕ್ಕೆ ಹೋದೆವು. ಜನ ಜಂಗುಳಿ ಇದ್ದ ರೂ ದೇವಸ್ಥಾನದ ಒಳಗೆ, ಹೊರಗೆ ಹೆಚ್ಚಿನ ಸ್ಥಳಾವಕಾಶವಿದ್ದುದರಿಂದ ಆರಾಮವಾಗಿಯೇ ದೇವರ ದರ್ಶನ ಪಡೆದವು.
ದೇವಸ್ಥಾನದಿಂದ ಸುಮಾರು 10.30ರ ವೇಳೆಗೆ ಹೊರ ಬಂದ ನಾವು ಹತ್ತಿರದಲ್ಲೇ ಇದ್ದ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ದೆವು.ಇಲ್ಲಿ ದೇವರಿಗೆ ಹತ್ತಿರದಲ್ಲೇ ನಮ ಸ್ಕರಿಸಿ,ಎಳ್ಳೆಣ್ಣೆ ಎರಯಲು ಅವಕಾಶ ಸಿಕ್ಕಿದ್ದು ಮನಸ್ಸಿಗೆ ಖುಷಿ ಕೊಟ್ಟಿತ್ತು. ಅನಂತರ ಸಾಂಗ್ಲಿಯ ಪೇಟೆಯಲ್ಲಿ ಸ್ವಲ್ಪ ಸುತ್ತಾಡಿ,ಶಾಪಿಂಗ್ ಮಾಡಿ, ಅಲ್ಲಿನ ವಿಶೇಷ ತಿನಿಸುಗಳಾದ ವಡಾ ಪಾವ್, ಲಸ್ಸಿಯನ್ನು ಸವಿದು ಮನೆಗೆ ಮರಳುವಾಗ ಮಧ್ಯಾಹ್ನ ವಾಗಿತ್ತು.
ರೂಟ್ ಮ್ಯಾಪ್
· ಮಂಗಳೂರಿನಿಂದ ಸಾಂಗ್ಲಿಗೆ 570 ಕಿ.ಮೀ. ದೂರ ಬಸ್,ರೈಲು ಸೌಲಭ್ಯವಿದೆ.
· ಸಾಂಗ್ಲಿ ಪೇಟೆಯಿಂದ ಗಣಪತಿ ದೇವಸ್ಥಾನಕ್ಕೆ ಸುಮಾರು 2 ಕಿ.ಮೀ. ದೂರವಿದೆ.
· ಪೇಟೆಯ ಸಮೀಪವೇ ದೇವಸ್ಥಾನವಿರುವುದರಿಂದ ಊಟ, ವಸತಿ ಸಮಸ್ಯೆಯಿಲ್ಲ.
· ದೇವಸ್ಥಾನದಲ್ಲಿ ಸಮಯಪಾಲನೆ ಇದ್ದು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಮತ್ತು ಅಪರಾಹ್ನ 2 ರಿಂದ 8.30ರವ ರೆಗೆ ತೆರೆದಿರುತ್ತದೆ.
-ವಿದ್ಯಾ ಕೆ.ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.