ಭಾರತೀಯ ಕ್ರಿಕೆಟನ್ನು ಮೇಲೆತ್ತಿದ ಗಂಗೂಲಿ


Team Udayavani, Oct 31, 2019, 4:06 AM IST

e-15

ದೇಶ ಕಂಡ ಅಪ್ರತಿಮ ಕ್ರಿಕೆಟಿಗ, ನಾಯಕ ಸೌರವ್‌ ಗಂಗೂಲಿ. ಒಂದು ಕಾಲದಲ್ಲಿ ಫಿಕ್ಸಿಂಗ್‌ನಂತಹ ಬಿರುಗಾಳಿ ಭಾರತಕ್ಕೆ ಅಪ್ಪಳಿಸಿದ್ದಾಗ ಕೆಚ್ಚೆದೆಯಿಂದ ಗಂಗೂಲಿ ತಂಡವನ್ನು ಮುನ್ನಡೆಸಿದ್ದರು. ಸದ್ಯ ಬಿಸಿಸಿಐ ಸಂಕಷ್ಟದಲ್ಲಿದ್ದು, ಮೇಲೆತ್ತುವ ಹೊಣೆಗಾರಿಕೆ ಗಂಗೂಲಿ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಗಂಗೂಲಿ ಕುರಿತ ಕೆಲವು ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ.

ಫಿಕ್ಸಿಂಗ್‌ ಬಿರುಗಾಳಿಗೆ ಸಿಕ್ಕಿ ಭಾರತ ಕ್ರಿಕೆಟ್‌ ಭವಿಷ್ಯ ತೂಗುಯ್ನಾಲೆಯಲ್ಲಿದ್ದಾಗ ಗಂಗೂಲಿ ತಂಡದ ನಾಯಕತ್ವ ವಹಿಸಿ ಹೊಸತನ ಕೊಟ್ಟ ಯಶಸ್ವಿ ನಾಯಕ. ತನ್ನಂತೆ ಇತರರೂ ಬೆಳೆಯಬೇಕು ಎನ್ನುವುದು ಗಂಗೂಲಿಯ ಬಂಗಾರದ ಗುಣ. ವೀರೇಂದ್ರ ಸೆಹವಾಗ್‌, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಜಹೀರ್‌ ಖಾನ್‌ರಂತಹ ಖ್ಯಾತ ಆಟಗಾರರನ್ನು ಗಂಗೂಲಿ ಬೆಳೆಸಿದ್ದರು. ಸಮಕಾಲೀನ ಆಟಗಾರರಾಗಿದ್ದ ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌ರಂತಹ ಅಪ್ರತಿಮರಿಗೆ ಕಷ್ಟದ ಸಮಯದಲ್ಲಿ ಅವಕಾಶಗಳನ್ನು ನೀಡುವ ಮೂಲಕ ದೊಡ್ಡತನ ಮೆರೆದಿದ್ದರು. ನಾಯಕರಾಗಿದ್ದಷ್ಟು ಕಾಲ ಭಾರತ ತಂಡದ ಏಳಿಗೆಗೆ ಶ್ರಮಿಸಿದ ಓರ್ವ ನಿಸ್ವಾರ್ಥಿ ಈ ಗಂಗೂಲಿ.

2000ರಲ್ಲಿ ಫಿಕ್ಸಿಂಗ್‌ ಭಾರತ ಕ್ರಿಕೆಟಿಗೆ ಮೊದಲ ಸಲ ಅಪ್ಪಳಿಸಿ ಭಾರೀ ಸದ್ದು ಮಾಡಿತ್ತು. ಮೊಹಮ್ಮದ್‌ ಅಜರುದ್ದೀನ್‌, ನಯನ್‌ ಮೊಂಗಿಯ, ಅಜಯ್‌ ಜಡೇಜ ತನಿಖೆ ಸುಳಿಗೆ ಸಿಲುಕಿದ್ದರು. ಈ ವೇಳೆ ನಾಯಕರಾಗಿದ್ದ ಸಚಿನ್‌ ತೆಂಡುಲ್ಕರ್‌ ಗಾಯದ ಕಾರಣದಿಂದ ಹಿಂದೆ ಸರಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ತಂಡದ ನಾಯಕತ್ವ ಗಂಗೂಲಿ ನಾಯಕತ್ವ ಹೆಗಲೇರಿತ್ತು. 2002ರ ನಾಟ್‌ವೆಸ್ಟ್‌ ಸರಣಿಯಲ್ಲಿ ಭಾರತದ ರೋಚಕ ಗೆಲುವಿನ ಅನಂತರ ಅಂಗಿ ಕಳಚಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಅಬ್ಬರದ ಅಲೆ ಸೃಷ್ಟಿಸಿದ್ದರು.

ಚಾಪೆಲ್‌ ಜತೆ ಕಿತ್ತಾಟ, ಏರಿಳಿತ!
ಒಂದು ಕಾಲದಲ್ಲಿ ಸೌರವ್‌ ಗಂಗೂಲಿಯ ಬ್ಯಾಟಿಂಗ್‌ ನೋಡಲೆಂದೇ ಅದೆಷ್ಟೋ ಅಭಿಮಾನಿಗಳು ಟೀವಿ ಮುಂದೆ ಕುಳಿತಿರುತ್ತಿದ್ದರು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಜತೆಗೆ ಸೌರವ್‌ ಗಂಗೂಲಿ ಕ್ರೀಸ್‌ಗೆ ಇಳಿದರೆಂದರೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಎಂದೇ ಅರ್ಥ. ಅದರಲ್ಲೂ ಗಂಗೂಲಿ ಕ್ರೀಸ್‌ ಬಿಟ್ಟು ಮುಂದೆ ಬಂದು ಸ್ಪಿನ್‌ ಎಸೆತಕ್ಕೆ ಸಿಕ್ಸರ್‌ ಬಾರಿಸುವ ಸ್ಟೈಲ್‌ ಕಣ್ಣಿಗೆ ಹಬ್ಬ.

2003ರಲ್ಲಿ ಭಾರತ ತಂಡವನ್ನು ಏಕದಿನ
ವಿಶ್ವಕಪ್‌ ಫೈನಲ್‌ ತನಕ ಕೊಂಡೊಯ್ದದ್ದು ಗಂಗೂಲಿ ನಾಯಕತ್ವದ ಸಾಮರ್ಥ್ಯಕ್ಕೊಂದು ಉತ್ತಮ ನಿದರ್ಶನ. ಮರು ವರ್ಷವೇ ಕಳಪೆ ಪ್ರದರ್ಶನದಿಂದ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು. 2006ರಲ್ಲಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಗಂಗೂಲಿ ಸ್ಥಾನ ಪಡೆದರು. ಆಗ ತಂಡದ ಮುಖ್ಯ ಕೋಚ್‌ ಗ್ರೆಗ್‌ ಚಾಪೆಲ್‌ ಜತೆ ಜಗಳ ಮಾಡಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೆಲ್ಲದರ ನಡುವೆಯೂ ಗಂಗೂಲಿ 2007ರ ಏಕದಿನ ವಿಶ್ವಕಪ್‌ ಕೂಟದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು ಎನ್ನುವುದು ವಿಶೇಷ.

ಪ್ರತಿಭಾವಂತರಿಗೆ ನ್ಯಾಯ
ಪ್ರತಿಭಾವಂತ ಕ್ರಿಕೆಟಿಗರಿಗೆ ಗಂಗೂಲಿ ಯಾವತ್ತೂ ಅನ್ಯಾಯ ಮಾಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ರಾಹುಲ್‌ ದ್ರಾವಿಡ್‌. ಹೌದು, ಕರ್ನಾಟಕದ ದಿಗ್ಗಜ ಬ್ಯಾಟ್ಸ್‌ಮನ್‌ ಒಂದು ಹಂತದಲ್ಲಿ ಫಾರ್ಮ್ ಕಳೆದುಕೊಂಡು ಮನೆ ಸೇರುವ ಆತಂಕದಲ್ಲಿದ್ದರು. ಇಂತಹ ಹಂತದಲ್ಲಿ ಗಂಗೂಲಿ ರಾಜಕೀಯ ಮಾಡಲಿಲ್ಲ. ಬದಲಿಗೆ ದ್ರಾವಿಡ್‌ ಕೈಗೆ ವಿಕೆಟ್‌ ಕೀಪರ್‌ ಗ್ಲೌಸ್‌ ನೀಡಿ ಅವರ ಭವಿಷ್ಯವನ್ನು ಕಾಪಾಡಿದ್ದರು. ಅದೇ ರೀತಿ ವೀರೇಂದ್ರ ಸೆಹವಾಗ್‌ ಓಪನರ್‌ ಆಗಿ ಭಡ್ತಿ ಪಡೆದದ್ದು ಕೂಡ ಗಂಗೂಲಿ ದೂರದೃಷ್ಟಿಗೊಂದು ನಿದರ್ಶನವಾಗಿತ್ತು. ಅಂದಿನ ಯುವ ಆಟಗಾರರಾದ ಯುವರಾಜ್‌, ಧೋನಿ, ಜಹೀರ್‌ ಮೇಲೆ ದಾದಾ ಅಪಾರ ವಿಶ್ವಾಸವಿರಿಸಿದ್ದರು.

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.