ಗೋಲ್‌ಮಾಲ್‌ನಲ್ಲಿ ಉಡುಪಿಯ ಮರ್ಡರ್ ಮಿಸ್ಟ್ರಿ ?
Team Udayavani, Mar 7, 2019, 7:15 AM IST
ಉಡುಪಿಯಲ್ಲಿ ಕೆಲವೇ ತಿಂಗಳ ಹಿಂದೆ ನಡೆದ ಒಂದು ಮರ್ಡರ್ ಕೇಸ್ ಕರಾವಳಿ ಮಾತ್ರವಲ್ಲದೆ, ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಸುದ್ದಿ- ಚರ್ಚೆಗೆ ಕಾರಣವಾಗಿತ್ತು. ಉಡುಪಿಯ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಸಂಗತಿ ಎಲ್ಲೆಡೆ ಸಂಚಲನಕ್ಕೆ ಕಾರಣವಾಗಿತ್ತು. ಒಂದು ಹತ್ಯೆಯ ಹಿಂದಿನ ಕಥಾನಕ ಬಹಳಷ್ಟು ರೋಚಕ ಹಾಗೂ ಆಶ್ಚರ್ಯ ಮೂಡಿಸುವಂತಾಗಿತ್ತು. ಹೀಗೂ ಇರುತ್ತಾರಾ? ಎಂದು ಜನ ಮಾತನಾಡುವಂತಾಗಿತ್ತು.
ಇದೇ ಕಥಾನಕ ಕೋಸ್ಟಲ್ ವುಡ್‌ನಲ್ಲಿ ಸಿನೆಮಾ ರೂಪ ಪಡೆದಿದೆಯೇ? ಈ ಕಥೆಗೆ ಸಿನೆಮಾ ರೂಪ ನೀಡಲಾಗಿದೆಯೇ? ಕೆಲವೇ ದಿನಗಳಲ್ಲಿ ತೆರೆಮೇಲೆ ಬರುವ ಬಿಗ್ ಬಜೆಟ್ ಸಿನೆಮಾ ಇದೇ ಕಥೆಯಾಧಾರಿತವಾಗಿ ಇರಲಿದೆಯೇ? ಎಂಬೆಲ್ಲ ಪ್ರಶ್ನೆ ಈಗ ಕೋಸ್ಟಲ್ ವುಡ್‌ನಲ್ಲಿ ಕೇಳಿಬರುತ್ತಿದೆ. ಆದರೆ, ಈ ಯಾವುದೇ ಪ್ರಶ್ನೆಗಳಿಗೆ ಚಿತ್ರತಂಡ ಮಾತ್ರ ಸದ್ಯಕ್ಕೆ ಉತ್ತರ ನೀಡಿಲ್ಲ. ‘ಸಿನೆಮಾ ನೋಡಿ- ಆ ಮೇಲೆ ಮಾತನಾಡಿ’ ಎಂದಷ್ಟೇ ಹೇಳುತ್ತಿದ್ದಾರೆ.
ಅಂದಹಾಗೆ, ಇದು ‘ಗೋಲ್‌ಮಾಲ್’ ಸಿನೆಮಾ ಸಂಗತಿ. ತುಳು ಚಿತ್ರರಂಗದ ಅದ್ದೂರಿ ಸಿನೆಮಾ ಎಂದೇ ಹೇಳಲಾಗುತ್ತಿರುವ ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದಲ್ಲಿ ತಯಾರಾದ ಸಿನೆಮಾ. ಈ ಸಿನೆಮಾದ ಟೀಸರ್‌ನಲ್ಲಿ ಮಾತು ಕಡಿಮೆ. ಆದರೆ ಇರುವ ಒಂದೆರಡು ಮಾತು ಮತ್ತು ದೃಶ್ಯಗಳು ಉಡುಪಿ ಮೂಲದ ಮರ್ಡರ್ ಕಥೆಗೆ ಲಿಂಕ್ ಪಡೆದಿವೆ ಎಂಬುದು ಈಗಿನ ಕುತೂಹಲಕ್ಕೆ ಕಾರಣ. ಈ ಟೀಸರ್‌ನಲ್ಲಿ ಬರುವ ಒಂದು ಸಂಭಾಷಣೆ ಹೀಗಿದೆ. ‘ಸರ್, ಉಂದು ಆನಿ ರಾತ್ರಿ ನಡತಿನ ಕಥೆ’ ಎಂದು. ಹಾಗಾದರೆ ಆ ರಾತ್ರಿ ನಡೆದಿದ್ದು ಏನು? ಎಂಬುದು ಪ್ರಶ್ನೆ. ಕೊನೆಯಲ್ಲಿ ಬರುವ ಒಂದು ಸಂಭಾಷಣೆ ‘ಒಂಜಿ ಸಾಕ್ಷಿಲಾ ಒರಿಯೆರೆ ಬಲ್ಲಿ’ ಎಂಬ ಮಹಿಳೆಯ ಮಾತು ! ಹಾಗಾದರೆ ಇಲ್ಲಿ ಏನೋ ಇದೆ ಎಂಬುದು ಸ್ಪಷ್ಟವಾಗುತ್ತಿದೆ.
ಹೀಗೆ ಇಂತಹ ಟೀಸರ್ ಮೂಲಕ ಸುದ್ದಿಯಾಗುತ್ತಿರುವ ಈ ಸಿನೆಮಾವು ಭಾರೀ ಕುತೂಹಲ ಕೆರಳಿಸಿದೆ. ಉಡುಪಿಯಲ್ಲಿ ಬಹಳಷ್ಟು ಸಂಚಲನ ಮೂಡಿಸಿದ ಮರ್ಡರ್ ಕಥಾನಕವನ್ನು ಹೋಲುವ ರೀತಿಯಲ್ಲಿದೆ ಎಂಬುದು ಸದ್ಯದ ಸಂಗತಿ. ಹಾಗೆಂದು ನಿಜಕ್ಕೂ ಈ ಸಿನೆಮಾದ ಕಥೆ ಏನು ಎಂಬುದನ್ನು ಸಿನೆಮಾ ಬಿಡುಗಡೆಯ ಬಳಿಕವಷ್ಟೇ ತಿಳಿಯಬೇಕಿದೆ.
ತುಳುವಿನಲ್ಲಿ ನಿರ್ಮಾಣಗೊಂಡ ಭಾರೀ ಬಜೆಟ್‌ನ ಸಿನೆಮಾ ಇದಾಗಿದ್ದು, ಕನ್ನಡದ ಖ್ಯಾತ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಸುನೀಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮುಂತಾದ ಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ.
‘ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬರ್ ಸಿನೆಮಾದಲ್ಲಿ ನಾಯಕ ನಟನಾಗಿದ್ದು, ಶ್ರೇಯಾ ಅಂಚನ್ ನಾಯಕಿ. ಸುನಾದ್ ಗೌತಮ್ ಸಂಗೀತದ ಜತೆಗೆ ಛಾಯಾಗ್ರಹಣದಲ್ಲಿ ದುಡಿದಿದ್ದಾರೆ. ಶಂಕರ್ ನಾರಾಯಣ್ ಪೆರ್ಡೂರು ಸಂಕಲನ ಮಾಡಿದ್ದಾರೆ. ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್ ಜೋಗಿ ದುಡಿದಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.