ಇಲ್ಲೊಕ್ಕೆಲ್ ಗೌಜಿಗ್ ದಿನಗಣನೆ
Team Udayavani, Aug 15, 2019, 5:53 AM IST
‘ಇಲ್ಲೊಕ್ಕೆಲ್’ ಕೋಸ್ಟಲ್ವುಡ್‌ನಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ಇದೂ ಕೂಡ ಹಲವು ದಿನಗಳ ಹಿಂದೆಯೇ ಶೂಟಿಂಗ್ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ. ಕುಡ್ಲದ ಕಲಾವಿದರಿಂದಲೇ ಮೂಡಿ ಬಂದಿರುವ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಅದ್ವಿತಿ ಶೆಟ್ಟಿ, ‘ಅಪ್ಪೆ ಟೀಚರ್’ ಖ್ಯಾತಿಯ ನಿರೀಕ್ಷಾ ಶೆಟ್ಟಿ, ಭವ್ಯಾ ಗೌಡ, ವಿಸ್ಮಯ ವಿನಾಯಕ್, ವಿ.ಜೆ ವಿನೀತ್, ‘ಪಿಲಿಬೈಲು ಯಮುನಕ್ಕ’ ಖ್ಯಾತಿಯ ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು ಮುಂತಾದ ಅನೇಕ ಖ್ಯಾತ ಕಲಾವಿದರು ಈ ಸಿನೆಮಾದಲ್ಲಿದ್ದಾರೆ. ಖ್ಯಾತ ಹಾಸ್ಯ ಕಲಾವಿದ ಕುರಿಬಾಂಡ್ ರಂಗ ಅವರು ವಿಶಿಷ್ಟ ಪಾತ್ರದಲ್ಲಿ ನಟಿಸಿರುವುದು ಈ ಸಿನೆಮಾಕ್ಕೆ ಒಂದು ಹೊಸ ಲುಕ್ ನೀಡಿದೆ. ವಾಸುದೇವ ಎಸ್. ಚಿತ್ರಾಪು ಮತ್ತು ಡಿ.ಎಂ. ಶೆಟ್ಟಿ ಅವರ ನಿರ್ಮಾಣದ ಈ ಸಿನೆಮಾವನ್ನು ಡಾ| ಸುರೇಶ್ ಎಸ್. ಕೋಟ್ಯಾನ್ ಚಿತ್ರಾಪು ನಿರ್ದೇಶಿಸಿದ್ದಾರೆ. ತುಳು ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿಶೇಷ ಆದ್ಯತೆ ಮತ್ತು ಮನ್ನಣೆ ನೀಡುತ್ತಿರುವ ಈ ಸಿನೆಮಾದ ‘ಮುರ್ಕುದು ಪೋಪುಂಡುಯೇ ಮಾತಾ’ ಹಾಡು ಭರ್ಜರಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಈ ಹಾಡಿನಲ್ಲಿ ಅಳಿಯುತ್ತಿರುವ ತುಳುನಾಡಿನ ಸಂಸ್ಕೃತಿಯ ಬಗ್ಗೆ ಕಾಳಜಿ, ಮಾಹಿತಿ ಇದೆ. ಇಲ್ಲೊಕ್ಕೆಲ್ ಸಿನೆಮಾದ ಎಲ್ಲ ಹಾಡುಗಳು ಕೂಡ ಹೊಸದೊಂದು ಟ್ರೆಂಡ್ ಹುಟ್ಟು ಹಾಕುತ್ತಿದೆ.
ಡಾ| ಸುರೇಶ್ ಚಿತ್ರಾಪು ಅವರ ಸಾಹಿತ್ಯಕ್ಕೆ ರಾಜ್ ಷಾ ಅವರ ಅದ್ಭುತ ಸಂಗೀತ ಮತ್ತು ಮೈಮ್ ರಾಮ್‌ದಾಸ್, ಡಾ| ಸುರೇಶ್ ಚಿತ್ರಾಪು, ರಾಜ್ ಷಾ ಹಾಗೂ ವೇಲು ಅವರ ಕಂಠದಲ್ಲಿ ಮೂಡಿಬಂದ ‘ಮುರ್ಕುದು ಪೋಪುಂಡುಯೇ ಮಾತಾ’ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದುಕೊಂಡಿದೆ. ಈ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್, ಟೇಪ್ ಮತ್ತು ಪೆರ್ಕಶ್‌ನಲ್ಲಿ ಡಿ. ವಿಕ್ಕಿ ಮತ್ತು ನವೀನ್ ರಾವ್, ಮ್ಯಾಂಡೊಲಿನ್‌ನಲ್ಲಿ ಸೀನು, ಕೀಬೋರ್ಡ್‌ನಲ್ಲಿ ರಾಜ್ ಷಾ ಕೈಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.