ಕೋಸ್ಟಲ್‌ನಲ್ಲಿ “ಪ್ರವೇಶ’ದ್ದೇ ಕುತೂಹಲ
Team Udayavani, Jul 25, 2019, 5:00 AM IST
ಒಂದು ಹಳ್ಳಿ. ಅಲ್ಲೊಂದು ಶಾಂತಿ ಸಾಮರಸ್ಯದ ಜೀವನ. ಜಾತಿ-ಮತ ಧರ್ಮದ ಪರಿವೆಯೇ ಇಲ್ಲದೆ ಬದುಕುವ ಜನರು. ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರೇ ಜಾತಿ-ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ. ಯಾಕೆ ಹೀಗೆ. ಎಂದು ಯೋಚಿಸುವ ಸಮಯದಲ್ಲಿ ಊರಿನ ಚಿತ್ರಣವೇ ಅದಲು-ಬದಲು. ಯಾಕೆಂದರೆ; ಅನ್ಯೋನ್ಯ ಬದುಕಿಗೆ ಅಲ್ಲಿ ಕೊಳ್ಳಿ ಏಟು ಬಿದ್ದಾಗಿರುತ್ತದೆ!
ಇದು ‘ಪ್ರವೇಶ’ ಸಿನೆಮಾದ ವನ್‌ಲೈನ್ ಸ್ಟೋರಿ. ಈಗಾಗಲೇ ಶೂಟಿಂಗ್ ಮುಗಿಸಿದ ಈ ಸಿನೆಮಾ ಈಗಾಗಲೇ ಕೊನೆಯ ಹಂತದ ಎಡಿಟಿಂಗ್‌ನಲ್ಲಿದೆ. ಹೆಚ್ಚಾ ಕಡಿಮೆ ಒಂದೆರಡು ತಿಂಗಳಿನಲ್ಲಿ ಸಿನೆಮಾ ರಿಲೀಸ್ ಮಾಡಬೇಕು ಎಂದು ಚಿತ್ರ ತಂಡ ಒಮ್ಮೆ ಲೆಕ್ಕ ಹಾಕಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ರಿಲೀಸ್ ಟೈಮ್ ಇನ್ನಷ್ಟು ಕಾಲ ಮುಂದೂಡಿಕೆಯಾಗಲಿದೆ. ಈಗಾಗಲೇ ತುಳುವಿನಲ್ಲಿ ಒಂದೊಂದು ಸಿನೆಮಾದವರು ಆಗಸ್ಟ್, ಸೆಪ್ಟಂಬರ್ ಎಂದು ಹೇಳು ತ್ತಿರುವ ಕಾರಣ ದಿಂದ ಅದೇ ಕಾಲದಲ್ಲಿ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಸಿನೆಮಾ ರಿಲೀಸ್ ಮಾಡಿದರೆ ಯಾರಿಗೂ ಲಾಭವಿಲ್ಲ. ಹೀಗಾಗಿ ಎಲ್ಲರನ್ನು ಮೊದಲು ಕಳುಹಿಸಿ ಆ ಬಳಿಕ ಅಂದರೆ ಡಿಸೆಂಬರ್ ವೇಳೆಗೆ ರಿಲೀಸ್‌ಮಾಡುವ ಬಗ್ಗೆ ನಿರ್ದೇಶಕರು ಲೆಕ್ಕಹಾಕಿದ್ದಾರೆ.
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಚೇತನ್ ಮುಂಡಾಡಿಯವರು ಮಾಡಿದ ಸಿನೆಮಾ ಇದಾಗಿರುವುದರಿಂದ ‘ಪ್ರವೇಶ’ದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದೆ. ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಹದವಾಗಿ ಮಿಕ್ಸ್ ಮಾಡಿ ರೆಡಿ ಮಾಡಿದ ಸಿನೆಮಾ. ಸಿನೆಮಾಗೆ ಚೇತನ್ ಅವರೇ ಕಥೆ ಬರೆದಿದ್ದು, ಅದನ್ನು ಖ್ಯಾತ ಸಿನಿ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ವಿ.ಮನೋಹರ್ ಅವರ ಸಂಗೀತವಿದೆ. ನಾಯಕನಾಗಿ ಪೃಥ್ವೀ ಅಂಬರ್ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸುತ್ತಿದ್ದಾರೆ. ಖ್ಯಾತ ರಂಗಭೂಮಿ ನಟ ಮತ್ತು ಪಡ್ಡಾಯಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಚಂದ್ರಹಾಸ್ ಉಳ್ಳಾಲ ಅವರು ಒಂದು ಭಿನ್ನ ಮತ್ತು ವಿಶೇಷ ಪಾತ್ರದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.