ಮುಂದಿನ ತಿಂಗಳು “ಜಬರ್ದಸ್ತ್ ಶಂಕರ’ನ ಎಂಟ್ರಿ
Team Udayavani, Sep 19, 2019, 5:00 AM IST
ಕೋಸ್ಟಲ್‌ವುಡ್‌ನಲ್ಲಿ ಗಿರಿಗಿಟ್ ಮೂಡಿಸಿದ ಹವಾ ತುಳುನಾಡಿನ ಚಿತ್ರಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ತುಳುನಾಡಿನ ಮನೆಮಂದಿಯೆಲ್ಲ ಸಿನೆಮಾ ನೋಡುವಂತೆ ಮಾಡಿದ ಗಿರಿಗಿಟ್ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿಯೇ ಕೋಸ್ಟಲ್‌ವುಡ್‌ನ ಎವರ್‌ಗ್ರೀನ್ ದೇವದಾಸ್ ಕಾಪಿಕಾಡ್ ನಿರ್ದೇಶನದ “ಜಬರ್ದಸ್ತ್ ಶಂಕರ’ ಸಿನೆಮಾ ರಿಲೀಸ್‌ಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಚಿತ್ರತಂಡದ ಪ್ರಕಾರ ಮುಂದಿನ ತಿಂಗಳು ಶಂಕರನ ಎಂಟ್ರಿ ಆಗುವುದು ಪಕ್ಕಾ.
ಈಗಾಗಲೇ ಸಿನೆಮಾದ ಎಲ್ಲ ಹಂತಗಳನ್ನು ಮುಗಿಸಿರುವ ಚಿತ್ರತಂಡ ಹಾಡಿನ ಕೊನೆಯ ದೃಶ್ಯಗಳ ಶೂಟಿಂಗ್‌ಗೆ ಪ್ಲ್ಯಾನ್ ಹಾಕಿಕೊಂಡಿದೆ. ಹೆಚ್ಚಾ ಕಡಿಮೆ ಒಂದೆರಡು ದಿನದೊಳಗೆ ಹಾಡಿನ ಚಿತ್ರೀಕರಣ ಪೂರ್ಣಗೊಳ್ಳಲಿದೆ. ವಿಶೇಷವೆಂದರೆ ತುಳು ಸಿನೆಮಾದಲ್ಲಿಯೇ ವಿಭಿನ್ನ ರೀತಿಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ.
ಕೋಸ್ಟಲ್‌ವುಡ್‌ನಲ್ಲಿ ಡೈನಾಮಿಕ್ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್ ಕಾಪಿಕಾಡ್ ಜಬರ್ದಸ್ತ್ ಶಂಕರನಾಗಿ ವಿಭಿನ್ನ ಲುಕ್‌ನಲ್ಲಿ ಸಿನಿ ಪ್ರಿಯರ ಮುಂದೆ ಎಂಟ್ರಿಯಾಗಲಿದ್ದಾರೆ. ತುಳು ಮತ್ತು ಕನ್ನಡದ ಸುಮಾರು 15ರಷ್ಟು ಸಿನೆಮಾಗಳಲ್ಲಿ ನಟಿಸಿರುವ ಅರ್ಜುನ್‌ಗೆ ಈ ಸಿನೆಮಾ ವಿಭಿನ್ನ ಹಾಗೂ ಬಹುನಿರೀಕ್ಷಿತ.
ತೆಲಿಕೆದ ಬೊಳ್ಳಿ, ರಂಗ್, ಚಾಲಿಪೋಲಿಲು, ಒರಿಯನ್ ತೂಂಡ ಒರಿಯಗಾಪುಜಿ, ಮಧುರ ಸ್ವಪ್ನ (ಕನ್ನಡ), ದಂಡ್, ಚಂಡಿಕೋರಿ, ಬರ್ಸ, ಯೋಗರಾಜ್ ಭಟ್ ಅವರ ಮುಗುಳು ನಗೆ (ಕನ್ನಡ), ಅರೆ ಮರ್ಲೆರ್, ಏರಾ ಉಲ್ಲೆರ್‌ಗೆ, ಕರ್ಣೆ ಮುಂತಾದ ಸಿನೆಮಾಗಳ ಮೂಲಕ ಅರ್ಜುನ್ ಈಗಾಗಲೇ ಮನೆಮಾತಾಗಿದ್ದಾರೆ. ಕನ್ನಡದಲ್ಲಿ ತೆರೆಕಾಣಲಿರುವ “ಮಾಲ್ಗುಡಿ ಕಾ ಡೇಸ್’, ತುಳುವಿನ “ರಾಹುಕಾಲ ಗುಳಿಗ ಕಾಲ’ ಚಿತ್ರದಲ್ಲಿಯೂ ನಟಿಸಿದ್ದಾರೆ.
ಜಬರ್ದಸ್ತ್ ಶಂಕರನ ಬಗ್ಗೆ ಅರ್ಜುನ್ ಹೇಳುವ ಪ್ರಕಾರ “ಇದೊಂದು ವಿಭಿನ್ನ ಕಥೆಯ ಸಿನೆಮಾ. ಹೊಸ ಪರಿಕಲ್ಪನೆಯಲ್ಲಿ ಮೇಕಿಂಗ್ ಮಾಡಲಾಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಎಲ್ಲವೂ ದೇವದಾಸ್ ಕಾಪಿ ಕಾಡ್ ಅವ ರದ್ದು. ನಾನು ನಟ ಹಾಗೂ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಸುಜೀತ್ ನಾಯಕ್ ಅವರ ಸಂಕಲನ, ಮಣಿಕಾಂತ್ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದೆ. ಜಲನಿಧಿ ಫಿಲ್ಮ್ನಡಿ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ.
ಸಿದ್ದು ಹಾಗೂ ಉದಯ ಬಲ್ಲಾಳ್ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ ಮಾದ ಅವರ ಸಾಹಸ ಹಾಗೂ ಸ್ಟಾರ್ ಗಿರಿ, ವಿನಾಯಕ್ ಪಿಳ್ಳೆ ನೃತ್ಯ ನಿರ್ದೇಶನವಿದೆ ಎನ್ನುತ್ತಾರೆ.
ನಿರ್ಮಾಪಕ ರಾಜೇಶ್ ಕುಡ್ಲ ಅವರು ಮಾತನಾಡಿ, ಸಿನೆಮಾದ ತಾರಾಗಣದಲ್ಲಿ ಅರ್ಜುನ್ ಕಾಪಿಕಾಡ್, ನೀತಾ ಅಶೋಕ್, ರಾಶಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಸಾಯಿಕೃಷ್ಣ ಕುಡ್ಲ, ಗೋಪಿನಾಥ್ ಭಟ್, ಚೇತನ್ ರೈ, ಸಿನೀಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರು, ಅರುಣ್ ಬಿ.ಸಿ.ರೋಡ್, ಮಿಮಿಕ್ರಿ ಶರಣ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಚಂದ್ರಹಾಸ್ ಮಾಣಿ, ಹರೀಶ್ ಆಲದಪದವು, ಗಾಳಿಪಟ ಹರೀಶ್ ಮುಂತಾದವರು ಸಿನೆಮಾದಲ್ಲಿದ್ದಾರೆ. ವಿಭಿನ್ನ ಮ್ಯಾನರಿಸಂನಲ್ಲಿ ಸಿನೆಮಾ ರೆಡಿ ಮಾಡಲಾಗಿದೆ. ಕಥೆ ಹಾಗೂ ಕಾಮಿಡಿ ಎರಡನ್ನೂ ಜತೆಯಾಗಿ ಇದರಲ್ಲಿ ಹೆಣೆಯಲಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಇದೊಂದು ವಿನೂತನ ಪ್ರಯೋಗ ಎಂದೆನಿಸಲಿದೆ’ ಎನ್ನುತ್ತಾರೆ.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.