ಮಾನಸ ಸರೋವರ ಸಿದ್ಧತೆ ಆರಂಭಿಸಿ


Team Udayavani, Jan 30, 2020, 5:41 AM IST

kailash

ಕೈಲಾಸ ಯಾತ್ರೆ ಎನ್ನುವುದು ಒಂದು ಪ್ರವಾಸ ಎನ್ನುವುದಕ್ಕಿಂತ ಅವಿಸ್ಮರಣೀಯ ಅನುಭವ. ಅಧ್ಯಾತ್ಮದ ಸುಖವನ್ನು ಅನುಭವಿಸುತ್ತಲೇ ಸುಂದರ ಹಿಮಾಲಯವನ್ನು ಕಣ್ತುಂಬಿಕೊಳ್ಳುತ್ತಾ ಶಂಕರನ ತವರನ್ನು ನೋಡಿ ಬರುವ ಸಂಭ್ರಮವೇ ದೊಡ್ಡದು. ಈ ಕುರಿತ ಮಾಹಿತಿ ಕೊಟ್ಟಿದ್ದಾರೆ ಸುಶ್ಮಿತಾ ಜೈನ್‌.

ಕೈಲಾಸ ಪರ್ವತ. ಮಾನಸ ಸರೋವರ !
ಅದು ಶಿವನ ಆವಾಸಸ್ಥಾನ ಎಂಬುದು ಕೋಟ್ಯಂತರ ಜನರ ನಂಬಿಕೆ. ಅದರ ತಟದಲ್ಲಿರುವ ಮಾನಸ ಸರೋವರದಲ್ಲಿ ಇಂದಿಗೂ ದೇವಾನುದೇವತೆಗಳು ವಾಸವಿದ್ದಾರೆ ಎಂಬ ನಂಬಿಕೆಯೂ ಆಸ್ತಿಕ ರದ್ದು. ಕೈಲಾಸ ಪರ್ವತ ಹಿಂದೂಗಳಿಗಷ್ಟೇ ಅಲ್ಲದೆ ಬೌದ್ಧ, ಜೈನ ಮತ್ತಿತರರಿಗೂ ಪವಿತ್ರ ಕ್ಷೇತ್ರ. ಸಿಂಧೂ, ಬ್ರಹ್ಮಪುತ್ರಾ, ಸಟ್ಲೆàಜ್‌, ಗಂಗಾ ಸೇರಿದಂತೆ ಹಲವು ನದಿಗಳ ಉಗಮಸ್ಥಾನವಿದು. ಭವ್ಯ ಹಿಮಾಲಯ, ಶುಭ್ರ ವಾತಾವರಣ, ಶುಭ್ರ ನೀರು..ಇಂಥ ತಾಣದ ಭೇಟಿ ಬರೀ ಪ್ರವಾಸವಲ್ಲ; ಬದುಕಿನ ಒಂದು ಅವಿಸ್ಮರಣೀಯ ಅನುಭವ.

22,028 ಅಡಿ ಎತ್ತರದಲ್ಲಿದೆ
ಮೊದಲು ತಿಳಿಯಬೇಕಾದ ಸಂಗತಿಯೆಂದರೆ, ಕೈಲಾಸ ಪರ್ವತ ಸಮುದ್ರ ಮಟ್ಟದಿಂದ 22,028 ಅಡಿ ಎತ್ತರದಲ್ಲಿದೆ. ಏಷ್ಯಾದ ಮೂರು ಎತ್ತರದ ಪರ್ವತ ಶ್ರೇಣಿಗಳಾದ ಹಿಮಾಲಯ, ಕಾರಾಕೋರಂ ಮತ್ತು ನಾಗಪರ್ವತಗಳ ಮಧ್ಯೆ ಕೈಲಾಸ ಹಿಮಾವೃತವಾಗಿ ಶಂಖಾಕಾರದಲ್ಲಿದೆ. ಇದನ್ನು “ಸುಮೇರು’ ಎಂದೂ ಕರೆಯುತ್ತಾರೆ. ಟಿಬೇಟಿಯನ್ನರು ಈ ಪರ್ವತವನ್ನು “ಘಾಂಗೆ ರಿಂ ಪೋಚೆ’ (ಹಿಮ ವೈಢೂರ್ಯ) ಎನ್ನುತ್ತಾರೆ. ನಿಜವಾದ ಅರ್ಥದಲ್ಲಿ ನಯನ ಮನೋಹರವಾದ, ವರ್ಣನೆಗೆ ನಿಲುಕದ ಈ ಕೈಲಾಸ-ಮಾನಸ ಸರೋವರಗಳು ಪ್ರಕೃತಿ ಪ್ರಿಯರನ್ನು ಮತ್ತು ಸಾಹಸಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ಅಷ್ಟೇ ಏಕೆ? ಈ ಸಾಹಸಿಗಳ, ಪ್ರವಾಸ ಪ್ರಿಯರ ಹಾಗೂ ಆಸ್ತಿಕರ ಬದುಕಿನ ಒಂದು ಪರಮೋಚ್ಚ ಆಸೆಗಳಲ್ಲಿ ಕೈಲಾಸ ಪರ್ವತವನ್ನು ಪರಿಕ್ರಮ ಮಾಡುವುದೂ ಸೇರಿದೆ.

ಕೈಲಾಸಕ್ಕೆ ದಾರಿ
ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಪ್ರತಿ ವರ್ಷ ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿ ಪ್ರವಾಸವನ್ನು ಏರ್ಪಡಿಸುತ್ತದೆ. ಎರಡು ಮಾರ್ಗಗಳಲ್ಲಿ ಪ್ರವಾಸವನ್ನು ಕರೆದೊಯ್ಯಲಾಗುತ್ತದೆ. ಕಳೆದ ವರ್ಷದ ಲೆಕ್ಕ ಹೇಳುವುದಾದರೆ, ಒಟ್ಟು 28 ತಂಡಗಳನ್ನು ಜೂನ್‌ 8ರಿಂದ ಸೆಪ್ಟಂಬರ್‌ 8 ರ ಅವಧಿಯಲ್ಲಿ ಕರೆದೊಯ್ಯಲಾಗಿತ್ತು. ಒಂದೊಂದು ತಂಡದಲ್ಲಿ ಸುಮಾರು 50ರಿಂದ 60 ಮಂದಿಗೆ ನಿಗದಿಪಡಿಸಿತ್ತು.

ಎರಡು ಮಾರ್ಗಗಳು ಇದ್ದು, ಮೊದಲನೇ ಮಾರ್ಗ ಉತ್ತರಾಖಂಡ ರಾಜ್ಯದ ಲಿಪುಲೇಕ್‌ ಪಾಸ್‌ ಮೂಲಕ ಹೋಗುವಂಥದ್ದು. ಈ ಮಾರ್ಗದಲ್ಲಿ ನಾರಾಯಣ ಆಶ್ರಮ, ಪಾತಾಳ್‌ ಭುವನೇಶ್ವರ ಎಲ್ಲವೂ ಸಿಗುತ್ತವೆ. ಓಂ ಪರ್ವತವೂ ಇದೇ ಹಾದಿಯಲ್ಲಿ ಸಿಗುವಂಥದ್ದು. ಈ ಹಾದಿಯಲ್ಲಿ ಸ್ವಲ್ಪ ಚಾರಣವೂ ಇದ್ದು, ಕಳೆದ ವರ್ಷ ನಿಗದಿಯಾಗಿದ್ದ ಪ್ರವಾಸ ಶುಲ್ಕ ಒಬ್ಬರಿಗೆ 1.80 ಲಕ್ಷ ರೂ. ಒಟ್ಟು 24 ದಿನಗಳ ಪ್ರವಾಸವಾಗಿತ್ತು.

ಮತ್ತೂಂದು ಮಾರ್ಗ ಸಿಕ್ಕಿಂನ ನಾಥೂಲಾ ಪಾಸ್‌ ಮೂಲಕ. ಈ ಮಾರ್ಗದಲ್ಲಿ ರಸ್ತೆ ಚೆನ್ನಾಗಿರುವುದರಿಂದ ಚಾರಣಕ್ಕೆ ಅವಕಾಶವಿರುವು ದಿಲ್ಲ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಸೂಕ್ತವೆನಿಸುವ ಮಾರ್ಗ. ಕಳೆದ ವರ್ಷ 21 ದಿನಗಳ ಪ್ರವಾಸಕ್ಕೆ 2.50 ಲಕ್ಷ ರೂ. ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಈ ವರ್ಷ ಇನ್ನೂ ಅರ್ಜಿ ಕರೆದಿಲ್ಲ. ಕಳೆದ ವರ್ಷ ಎಪ್ರಿಲ್‌ ತಿಂಗಳಿನಲ್ಲಿ ಅರ್ಜಿ ಕರೆದು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಮೇ ತಿಂಗಳವರೆಗೆ ಗಡುವು ಇತ್ತು.

ಸೂರ್ಯೋದಯ ಮತ್ತು ಸೂರ್ಯಾಸ್ತ ಸಂದರ್ಭದಲ್ಲಿ ಕೈಲಾಸಪರ್ವತದ ಉತ್ತರ ಮುಖದ ಮೇಲೆ ಬೀಳುವ ಸೂರ್ಯನ ಸಂಜೆಯ ಕಿರಣಗಳು ಇಡೀ ಪರ್ವತಕ್ಕೆ ಸುವರ್ಣ ಬಣ್ಣವನ್ನು ಬಳಿಯುತ್ತವೆ. ಮೋಡ, ಮಂಜು ಸರಿದಂತೆ ವಿವಿಧ ಆಕಾರಗಳಲ್ಲಿ ಗೋಚರವಾಗುತ್ತದೆ. ಸೂರ್ಯನ ಕಿರಣ ಬೀಳುತ್ತಿದ್ದಂತೆ ಕೈಲಾಸ ಪರ್ವತವೆಲ್ಲ ಬೆಳ್ಳಿಯ ನಡುವೆ ಚಿನ್ನದ ಗೆರೆ ಎಳೆದಂತೆ ಕಾಣಲಾರಂಭಿಸುತ್ತದೆ. ಇನ್ನೂ ಸ್ವಲ್ಪ ಸಮಯ ಬಿಟ್ಟು ನೋಡಿದರೆ ತಾಮ್ರ ವರ್ಣದ ಹೊದಿಕೆ ಹೊದೆಸಿದಂತಾಗುತ್ತದೆ. ಆ ನೋಟವಂತೂ ವರ್ಣನಾತೀತ. ಅದರ ಸೊಬಗು ಬರವಣಿಗೆಗೆ ನಿಲುಕದು. ಟಿಬೆಟಿನಲ್ಲಿ ಈ ದೃಶ್ಯವನ್ನು ಕಾಣುವುದೇ ಒಂದು ಅದೃಷ್ಟ ಎಂಬ ನಂಬಿಕೆ ಇದೆ.

ನಿಬಂಧನೆಗಳನ್ನು ಪಾಲಿಸಬೇಕು
ಅರ್ಜಿ ಹಾಕಿದವರನ್ನು ಆ ಬಳಿಕ ವೈದ್ಯಕೀಯ ತಪಾ ಸಣೆಗೆ ಒಳಪಡಿಸಲಾಗುತ್ತದೆ. ಅರ್ಹರಾದವರನ್ನು ವಿವಿಧ ತಂಡಗಳನ್ನಾಗಿ ರೂಪಿಸಲಾಗುತ್ತದೆ. ನಿಗದಿತ ದಿನಾಂಕದಿಂದ ಯಾತ್ರೆ ಆರಂಭವಾಗಿ, ಟಿಬೆಟ್‌ ಗಡಿಯಲ್ಲಿ ಮತ್ತೂಮ್ಮೆ ಎತ್ತರದ ಪ್ರದೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವಿದೆಯೇ ಎಂಬುದನ್ನು ಪರೀಕ್ಷಿಸುತ್ತಾರೆ. (ರಕ್ತದೊತ್ತಡ, ಹೃದಯ, ಶ್ವಾಸ ಕೋಶ ಸಾಮರ್ಥ್ಯ, ಮಾನಸಿಕ ಸ್ಥಿರತೆ ಇತ್ಯಾದಿ) ಅಲ್ಲಿಯೂ ಯಶಸ್ವಿ ಯಾದವರು ಯಾತ್ರೆಯನ್ನು ಮುಂದುವರಿಸಬಹುದು. ಜತೆಗೆ ಯಾತ್ರೆಗೆ ತೆರಳುವ ಮುನ್ನ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವ ಹಿನ್ನೆಲೆ ಮೂರು ಅಥವಾ ನಾಲ್ಕು ದಿನಗಳು ದಿಲ್ಲಿಯಲ್ಲಿ ತಂಗಬೇಕು.

ಅರ್ಜಿ ಸಲ್ಲಿಕೆ ಹೇಗೆ?
ಯಾತ್ರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.ಯಾತ್ರಿಕರ ಪಾಸ್‌ಪೋರ್ಟ್‌ ಯಾತ್ರೆ ಕೈಗೊಳ್ಳುವ ದಿನಾಂಕದಿಂದ ಕೊನೆಯ ದಿನಾಂಕದವರೆಗೆ ಮಾನ್ಯವಾಗಿರಬೇಕು. ಅರ್ಜಿದಾರರು ಪಾಸ್‌ಪೋರ್ಟ್‌ ಗಾತ್ರದ ಛಾಯಾಚಿತ್ರವನ್ನು ಸ್ಕ್ಯಾನ್‌ ಮಾಡಿ ( ಫೋಟೋ ಜೆಪಿಜಿ ಫಾಮ್ಯಾìಟ್‌ನಲ್ಲಿರಬೇಕು ಮತ್ತು 300 ಕೆಬಿ ಗಾತ್ರವನ್ನು ಮೀರಬಾರದು), ವೈಯಕ್ತಿಕ ವಿವರಗಳನ್ನು ಪಿಡಿಎಫ್ ಸ್ವರೂಪದಲ್ಲಿ ಅರ್ಜಿಯೊಂದಿಗೆ ಕಳುಹಿಸಬೇಕು. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ಅನಂತರ ಅರ್ಜಿಯಲ್ಲಿ ನಮೂದಿಸಿದ ಸಂಪರ್ಕ ಸಂಖ್ಯೆಗೆ ಸಂದೇಶ ಮತ್ತು ಇ-ಮೇಲ್‌ ಕಳಿಸುವ ಪದ್ಧತಿ ಇದೆ. ಇವೆಲ್ಲವೂ ಹಿಂದಿನ ವರ್ಷ ಅನುಸರಿಸಿದ ಪದ್ಧತಿಯಾಗಿತ್ತು. ಈ ವರ್ಷ ಇನ್ನಷ್ಟೇ ಅರ್ಜಿ ಆಹ್ವಾನಿಸಬೇಕಿದ್ದು, ಕೆಲವು ನೂತನ ನಿಯಮಗಳೂ ಜಾರಿಗೆ ಬರಬಹುದು.ಯಾತ್ರಿಗಳು ಯಾತ್ರೆಗೆ ಹೊರಡುವಾಗ ಕಡ್ಡಾಯವಾಗಿ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಭಾವಚಿತ್ರಗಳನ್ನು ಕೊಂಡೊಯ್ಯಬೇಕು.

ವಸತಿ ಸೌಲಭ್ಯ ವೆಚ್ಚ ಉಚಿತ
ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವ ಎಲ್ಲರೂ ಕೈಲಾಶ್‌ ಮಾನಸರೋವರ ಯಾತ್ರೆಗೆ ತೆರಳಬಹುದು. ಹಾಗೇ ಯಾತ್ರಾರ್ಥಿಗಳ ಬೋರ್ಡಿಂಗ್‌ ಮತ್ತು ವಸತಿ ಸೌಲಭ್ಯಗಳ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿದೆ.

ಮಾರ್ಗದರ್ಶಿಗಳು
ಕೈಲಾಸ ಪರ್ವತಕ್ಕೆ ಪ್ರಯಾಣ ಬೆಳೆಸುವ ಮುನ್ನ ಹಿಂದಿನ ರಾತ್ರಿ ನಾಡಿ ಮಿಡಿತ ಪರೀಕ್ಷಿಸಲಾಗುತ್ತದೆ. ಜತೆಗೆ ಯಾತ್ರಾರ್ಥಿಗಳಿಗೆ ಶೆರ್ಪಾಗಳು, ವ್ಯವಸ್ಥಾಪಕರು ಚಾರಣದಲ್ಲಿ ಉಂಟಾಗುವ ತೊಂದರೆಗಳು, ಹೇಗೆ ಪರಿಕ್ರಮ ಮಾಡಬೇಕೆಂಬುದನ್ನು ವಿವರಿಸುತ್ತಾರೆ. ಇದು 42 ಕಿ.ಮೀ. ಹಾದಿ. ಪರಿಕ್ರಮ ಆರಂಭವಾಗುವ ಯಮದ್ವಾರದವರೆಗೆ ವಾಹನದಲ್ಲಿ ಕರೆದೊಯ್ಯುತ್ತಾರೆ. ಚಾರಣಕ್ಕೆ ಹೊರಡುವವರು ಮೂರು ಕೆಜಿಗಿಂತ ಕಡಿಮೆ ಲಗೇಜನ್ನು ಹೊಂದಿರಬೇಕು.

ಬೇಕಾಗುವ ಅಗತ್ಯ ವಸ್ತುಗಳು
ಶಕ್ತಿವರ್ಧಕ ಪಾನೀಯ, ಒಣಹಣ್ಣುಗಳು, ಹಲ್ಲುಜ್ಜುವ ಬ್ರಶ್‌, ಪೇÓr… , ಟಾಯ್ಲೆಟ್‌ ಪೇಪರ್‌, ಸಣ್ಣ ಚೌಕ, ರೈನ್‌ಕೋಟ್‌, ಊರುಗೋಲು, ಒಂದು ಹೆಚ್ಚುವರಿ ಕಾಲುಚೀಲ ಮತ್ತು ಕೈಚೀಲ. ತುಂಬುದೋಳಿನ ಅಂಗಿ, ಮೇಲೆ ಟ್ರ್ಯಾಕ್‌ ಸೂಟ್‌.

ಆ ಅನುಭವವೇ ರೋಮಾಂಚಕವಾದುದು. ಪ್ರಕೃತಿಯೊಂದಿಗಿನ ಸಾಂಗತ್ಯವೇ ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ, ಹಲವು ಒಳಿತುಗಳನ್ನು ಹೇಳುತ್ತದೆ, ಹಲವು ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡುತ್ತದೆ.
-ಅರ್ಚನಾ ಹೆಬ್ಟಾರ್‌

ಟಾಪ್ ನ್ಯೂಸ್

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.