ಬೆಟ್ಟದ ಮೇಲೆ ಮೌನದಿ ಕುಳಿತ ಶಿವ 


Team Udayavani, Jul 5, 2018, 2:39 PM IST

5-july-11.jpg

ಇನ್ನೇನು ಡಾಟಾ ಆಫ್ ಮಾಡಿ ಮಲಗಲು ಅಣಿಯಾಗುವ ಹೊತ್ತಿಗೆ ಠಣ್‌ ಎಂದು ಮೊಬೈಲ್‌ ಸದ್ದಾಯಿತು. ವಾಟ್ಸಪ್‌ ಅಂಗಳದಲ್ಲಿ ಒಂದು ಅಪರಿಚಿತ ಗ್ರೂಪ್‌ಗೆ ನನ್ನನ್ನು ಆ್ಯಡ್‌ ಮಾಡಲಾಗಿತ್ತು. ಪದವಿ ಮುಗಿಸಿ ಉದ್ಯೋಗ ಹುಡುಕಾಟದ ತರಾತುರಿಯ ಮಧ್ಯೆ ಕಾಲೇಜು ಸ್ನೇಹಿತರೆಲ್ಲ ಕಾರಿಂಜ, ನರಹರಿ ಪರ್ವತಕ್ಕೆ ಪ್ರವಾಸ ಕೈಗೊಂಡಿದ್ದರು. ಇದಕ್ಕಾಗಿ ಸೃಷ್ಟಿಸಿದ ಗ್ರೂಪ್‌ಗೆ ನನ್ನ ಅನುಮತಿ ಇಲ್ಲದೆಯೇ ಸೇರಿಸಿಬಿಟ್ಟರು. ಬಂಟ್ವಾಳ ತಾಲೂಕಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಬಗ್ಗೆ ನನಗೆ ಚೆನ್ನಾಗಿ ಪರಿಚಯವಿದ್ದುದರಿಂದ ನಾನು ಸೈ ಅಂದೆ. ರವಿವಾರ ಬೆಳಗ್ಗೆ 9.30ಕ್ಕೆ ಬಿ.ಸಿ. ರೋಡ್‌ ತಲುಪಿದ ಮಂಗಳೂರಿನ ಮಿತ್ರರ ಜತೆ ಸೇರಿಕೊಂಡು ಕಾರಿಂಜೇಶ್ವರನ ಸನ್ನಿಧಾನಕ್ಕೆ ಹೊರಟೆವು.

ವ್ಹಾ ! ಕಾರಿಂಜ
ಸಾಗುವ ದಾರಿಯುದ್ದಕ್ಕೂ ಹಸಿರ ಐಸಿರಿಯನ್ನು ಕಣ್ತುಂಬಿಕೊಂಡು ರಿಕ್ಷಾದಲ್ಲಿ ದೇವಾಲಯದ ಕಡೆ ತೆರಳುತ್ತಿದ್ದರೆ ದೇಗುಲ ಹತ್ತಿರವಾಗುತ್ತಿದ್ದಂತೆ ಮನಸ್ಸು ದೇವರ ದರ್ಶನಕ್ಕಾಗಿ ಹಾತೊರೆಯುತ್ತಿತ್ತು. ರಿಕ್ಷಾದಿಂದ ಇಳಿದ ನಾವು ಹೆಬ್ಬಂಡೆಯ ಕೆಳಗಿದ್ದ ಪವಿತ್ರ ಕಲ್ಯಾಣಿಯ ನೀರನ್ನ ಸಂಪ್ರೋಕ್ಷಿಸಿದೆವು. ಅನಂತರ ಒಂದು ಹಂತದ ಫೋಟೋಶೂಟ್‌ ಕೂಡ ನಡೆಯಿತು. ಅಲ್ಲಿಂದ ಮೆಟ್ಟಿಲು ಹತ್ತುವ ಸ್ಪರ್ಧೆ ಏರ್ಪಟ್ಟಿತು. ಕೆಲವರಂತೂ ಹತ್ತು ಹೆಜ್ಜೆಯಲ್ಲಿ ಆಯಾಸಪಟ್ಟರು. ಮತ್ತೆ ಅವರನ್ನು ಎಬ್ಬಿಸಿ ಮೇಲೇರತೊಡಗಿದೆವು.

ಅಷ್ಟೋತ್ತಿಗೆ ನಮ್ಮ ಗುಂಪಿನ ಸದಸ್ಯರೊಬ್ಬರು ಕಿಟಾರನೆ ಚೀರಿದರು. ಕಾರಣ ವಾನರ ಪಡೆಯೊಂದು ನಮ್ಮ ಜತೆ ಮೇಲೇರುತ್ತಿತ್ತು. ಅದನ್ನೂ ಸಹಿಸಿಕೊಂಡು ಏದುಸಿರು ಬಿಡುತ್ತಾ ಪಾರ್ವತಿ ಆಲಯ ತಲುಪಿದೆವು. ಇಲ್ಲಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದೆವು. ಎತ್ತರ ಪ್ರದೇಶದಲ್ಲಿ ದೇವಾಲಯ ಕಟ್ಟಿ, ಮೆಟ್ಟಿಲು ನಿರ್ಮಿಸಿದ ಮಹಾನುಭಾವರಿಗೆ ತಲೆಬಾಗಲೇಬೇಕು ಎಂದೆನಿಸಿತು. ಭಕ್ತಿ ಪರಾಕಾಷ್ಠೆಯ ಅವಧಿಯಲ್ಲಿ ದೇಹ ಶಕ್ತಿಯ ವ್ಯಯ ನಗಣ್ಯ ಎನ್ನುವುದು ಅಲ್ಲಿ ಸಾದೃಶ ರೂಪದಲ್ಲಿ ಗೋಚರಿಸುತ್ತಿತ್ತು, 

ಅಲ್ಲಿಂದ ಮುಂದೆ ಶಿವನ ದರ್ಶನಕ್ಕಾಗಿ ಮೆಟ್ಟಿಲು ಏರತೊಡಗಿದೆವು. ಮಳೆಗೆ ಒದ್ದೆಯಾಗಿದ್ದ ವಸ್ತುಗಳನ್ನು ಜೋಪಾನವಾಗಿ ಹಿಡಿದುಕೊಂಡು ಮೆಟ್ಟಿಲು ಹತ್ತುತ್ತಿದ್ದಾಗ ಎರಡೂ ಬದಿಗಳಲ್ಲಿ ಮರ್ಕಟ ಸೈನ್ಯ ನಮ್ಮನ್ನ ಕಿಚಾಯಿಸುತ್ತಿತ್ತು. ಪ್ರತಿಯಾಗಿ ನಮ್ಮಲ್ಲಿದ್ದ ಕೆಮರಾ ನೋಟದಲ್ಲಿ ಅವುಗಳು ಸೆರೆಯಾದವು. 

ಈಶ್ವರನ ಸನ್ನಿಧಾನಕ್ಕೆ ಬಂದಾಗ ಪೂಜೆಗೆ ಸಿದ್ಧತೆ ನಡೆಯುತ್ತಿತ್ತು. ಪೂಜೆಯ ಅನಂತರ ಸಿಗುವ ನೈವೇದ್ಯಕ್ಕಾಗಿ ಕೋತಿಗಳ ಗುಂಪು ಅದಾಗಲೇ ಧಾಂಗುಡಿ ಇಟ್ಟಾಗಿತ್ತು. ಪೂಜೆ ಮುಗಿಸಿ, ದೇವರ ದರ್ಶನ ಪಡೆದು, ಕೋತಿಗಳ ಊಟದ ಸೊಗಸನ್ನು ಕಣ್ತುಂಬಿಕೊಂಡು ಮೂಕವಿಸ್ಮಿತರಾದೆವು.

ಅಷ್ಟೋತ್ತಿಗಾಗಲೇ ಆಗಸದಾದ್ಯಂತ ಕರಿಮೋಡಗಳು ತುಂಬಿ, ಮಳೆಯ ಸೂಚನೆ ಕೊಟ್ಟಿದ್ದರಿಂದ ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಕೆಳಗಿಳಿದು ಬಂದೆವು. ಆದರೆ ಗಾಳಿ-ಮಳೆಗೆ ಬಿಡಿಸಿದ ಛತ್ರಿಯೂ ನಿಲ್ಲಲಿಲ್ಲ . ಅಲ್ಲೇ ಒಂದು ಕಡೆ ನಿಂತು ಕಟ್ಟಿಕೊಂಡು ಬಂದಿದ್ದ ತಿಂಡಿಗಳನ್ನು ತಿನ್ನತೊಡಗಿದೆವು. ಮನೆಯಿಂದ ತಯಾರಿಸಿ ತಂದಿದ್ದ ಪುಳಿಯೋಗರೆ, ತಂಬಿಟ್ಟು ತಾಳ ಹಾಕುತ್ತಿದ್ದ ಹೊಟ್ಟೆಗೆ ತಂಪೆರೆದವು.

ಕಾರಿಂಜದ ಸೊಗಸು ,ರಮ್ಯ ನೋಟ ಮೆಲುಕು ಹಾಕುತ್ತಾ ನರಹರಿ ಪರ್ವತದ ಕಡೆ ಹೆಜ್ಜೆ ಹಾಕಿದೆವು. ಅದಾಗಲೇ ಹೊಟ್ಟೆತುಂಬಾ ಕುರುಕಲು ತಿಂಡಿ ತಿಂದಿದ್ದರಿಂದ ಹಸಿವು ನೀಗಿತ್ತು. ನಮೋ ನರಹರಿ ಕಾರಿಂಜದ ಸವಿನೆನಪುಗಳನ್ನು ಹೊತ್ತುಕೊಂಡು ನಮ್ಮ ತಂಡ ನರಹರಿ ಪರ್ವತದಲ್ಲಿ ವಾಸವಿರುವ ಸದಾಶಿವ ದರ್ಶನಕ್ಕೆ ಬಂತು. ಕಾರಿಂಜದಂತೆಯೇ ಇಲ್ಲಿಯೂ ಮೆಟ್ಟಿಲುಗಳಿದ್ದರೂ ರಸ್ತೆಯೂ ಸಮಾನಾಂತರದಲ್ಲಿ ನಿರ್ಮಾಣಗೊಂಡಿತ್ತು. ಇಲ್ಲಿಯೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆವು. ಕಣ್ಣರಳಿಸಿ, ಬೆಡಗು ಬಿನ್ನಾಣ ವ್ಯಕ್ತಪಡಿಸುತ್ತಾ ಎಲ್ಲರೂ ಸಮಯದ ಪರಿವಿನ ಅರಿವಿಲ್ಲದಂತಿದ್ದರು.

ಮೆಟ್ಟಿಲೇರುತ್ತಾ ಹೋದಾಗ ದೇವಸ್ಥಾನದ ಶ್ರಮದಾನ ಮಾಡುತ್ತಿದ್ದ ತಂಡ ಎದುರಾಯಿತು. ಅಲ್ಲಿ ಬಂಡೆಕಲ್ಲಿನ ಚೂರುಗಳನ್ನು ಎತ್ತಿಕೊಂಡು ದೇವಾಲಯದ ಪ್ರಾಂಗಣಕ್ಕೆ ಹಾಕುವ ಕೆಲಸ ನಮಗೂ ಸಿಕ್ಕಿತು. ಪುಣ್ಯಕ್ಷೇತ್ರದಲ್ಲಿ ಪುಣ್ಯ ಕೈಂಕರ್ಯ ಕೈಗೊಂಡ ತೃಪ್ತಿಯೂ ನಮ್ಮದಾಗಿತ್ತು.

ಚತುರ್ತೀರ್ಥ ಕೆರೆಗಳು
ನರಹರಿ ಪರ್ವತದ ವೈಶಿಷ್ಟ್ಯ ಅಲ್ಲಿನ ನಾಲ್ಕು ತೀರ್ಥ ಕೆರೆಗಳು. ಶ್ರೀಮನ್ನಾರಾಯಣನು ಕರದಲ್ಲಿ ಹಿಡಿದ ಶಂಖ ,ಚಕ್ರ,ಗದಾ ,ಪದ್ಮ ಆಕಾರದ ಕೆರೆಗಳಲ್ಲಿ ಬಿರುಬೇಸಗೆಯಲ್ಲೂ ನೀರಿನಿಂದ ತುಂಬಿರುವುದು ಇಲ್ಲಿನ ವಿಶೇಷ. ಮಹಾಭಾರತದ ಕಾಲದಲ್ಲಿ ಕೃಷ್ಣ ತನ್ನ ಆಯುದಾಧಿಗಳನ್ನು ಇಲ್ಲಿ ಇಟ್ಟ ಕಾರಣ ಇಂತಹ ರಚನೆಗಳಾದವು ಎಂಬುದು ಐತಿಹ್ಯ. ಅಲ್ಲಿ ಮಹಾಗಣಪತಿ, ಶಿವನ ದರ್ಶನ ಪಡೆದೆವು. ಅಲ್ಲೇ ಹತ್ತಿರದ ಹೆಬ್ಬಂಡೆಯ ಮೇಲೆ ನಿಂತು ಸುತ್ತಲೂ ಆವರಿಸಿದ್ದ ಹಸಿರ ಸಿರಿಯನ್ನು ಕಂಡೆವು. ದಟ್ಟ ಮರಗಳ ನಡುವೆ ಕಾಣಿಸುತ್ತಿದ್ದ ರೈಲು ಹಳಿ ಹಸುರಿನ ಕೂದಲಿಗೆ ಬೈತಲೆಯಂತೆ ಗೋಚರವಾಗುತ್ತಿತ್ತು.

ನಮ್ಮ ಪ್ರವಾಸದ ಅಂತಿಮ ಚರಣದ ಫೋಟೋಶೂಟ್‌ ಅಲ್ಲೇ  ನಡೆಯಿತು. ಅಲ್ಲಿಂದ ಕೆಳಗಿಳಿದು ಬಂದು ಅಂಗಡಿಯೊಂದರಲ್ಲಿ ಸೇವಿಸಿದ ಕಬ್ಬಿನ ಹಾಲಿನ ರುಚಿ ದಣಿದ ದೇಹಕ್ಕೆ ಹಿತವೆನಿಸಿತು. ಅಷ್ಟೋತ್ತಿಗಾಗಲೇ ಸಂಜೆಯಾಗಿದ್ದು ಎಲ್ಲರೂ ಟಾಟಾ ಬೈಬೈ ಹೇಳುವ ತರಾತುರಿಯಲ್ಲಿದ್ದರು. ಸದಾಕಾಲ ಸಿಗದವರು ಬಿಡುವು ಮಾಡಿಕೊಂಡು ಬಂದಿದ್ದು, ಕಾಲೇಜಿನ ದಿನಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿತು.

ರೂಟ್‌ ಮ್ಯಾಪ್‌
· ಬಿ.ಸಿ. ರೋಡ್‌ನಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ವಗ್ಗ ಎಂಬ ಊರಿನಿಂದ ಸ್ಪಲ್ಪ ದೂರದಲ್ಲಿದೆ ಕಾರಿಂಜೇಶ್ವರ.
· ಮಂಗಳೂರಿನಿಂದ 40 ಕಿ.ಮೀ. ದೂರ.
· ನರಹರಿ ಪರ್ವತ ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿದೆ.
· ಕಾರಿಂಜೇಶ್ವರ ದೇವಾಲಯದ ಪಾರ್ವತಿ ದೇವಿಯ ಸನ್ನಿಧಾನದವರೆಗೆ ವಾಹನ ತೆರಳುತ್ತದೆ. ಅಲ್ಲಿಂದ ಮುಂದೆ ಮೆಟ್ಟಿಲುಗಳನ್ನು ಹತ್ತಬೇಕು.
· ನರಹರಿ ದೇವಸ್ಥಾನಕ್ಕೆ ಮೆಟ್ಟಿಲಿನೊಂದಿಗೆ ರಸ್ತೆಯೂ ಇದೆ.
· ಹತ್ತಿರದಲ್ಲಿ ಊಟ, ವಸತಿ ವ್ಯವಸ್ಥೆಯಿಲ್ಲ.

ಸುಭಾಷ್ ಮಂಚಿ,
ಹಳೆ ವಿದ್ಯಾರ್ಥಿ, ವಿವಿ ಕಾಲೇಜು, ಮಂಗಳೂರು.

ಟಾಪ್ ನ್ಯೂಸ್

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.