ದೀಪಾವಳಿಯಲ್ಲಿ ಕರ್ಣಾವತಾರ!
Team Udayavani, Oct 11, 2018, 2:20 PM IST
ಎಲ್ಲೆಡೆ ನವರಾತ್ರಿ ಸಡಗರ ಇರುವಾಗಲೇ ಕೋಸ್ಟಲ್‌ವುಡ್‌ನಲ್ಲಿ ಎರಡು ಸಿನೆಮಾಗಳು ಸಾಕಷ್ಟು ಹಿಟ್ ಬರೆಯುತ್ತಿವೆ. ಏರಾ ಉಲ್ಲೆರ್‌ಗೆ, ಮೈ ನೇಮ್ ಈಸ್ ಅಣ್ಣಪ್ಪೆ ಸಿನೆಮಾ ನವರಾತ್ರಿ ರಜೆಯ ವೇಳೆಗೆ ಇನ್ನಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳಲಿದೆ. ಇದಾಗಿ ಮುಂದಿನ ತಿಂಗಳು ದೀಪಾವಳಿ ಎದುರುಗೊಳ್ಳುವಂತೆ ಕೋಸ್ಟಲ್ ವುಡ್‌ನಲ್ಲಿ ಮತ್ತೂಂದು ಸಂಭ್ರಮ ಶುರುವಾಗಲಿದೆ. ಬಹಳಷ್ಟು ನಿರೀಕ್ಷೆ ಹಾಗೂ ಹವಾ ಸೃಷ್ಟಿಸಿರುವ ‘ಕರ್ಣೆ’ ಸಿನೆಮಾ ಇದೇ ವೇಳೆಗೆ ರಿಲೀಸ್‌ನ ಲೆಕ್ಕಾಚಾರವಿದೆ. ಅಂದಹಾಗೆ ಅರ್ಜುನ್ ಕಾಪಿಕಾಡ್ ಲೀಡ್ ರೋಲ್‌ನಲ್ಲಿರುವ ಈ ಸಿನೆಮಾ ಕುಡ್ಲದಲ್ಲಿ ಸಾಕಷ್ಟು ಸದ್ದು ಮಾಡಿದೆ.
ದಬ್ಟಾಳಿಕೆಯ ವಿರುದ್ಧ ಹೋರಾಟದ ಛಾಪು ಮೂಡಿಸುವ ವಿಭಿನ್ನ ಕಥಾನಕದ ಸಿನೆಮಾವಿದು. ಮಲ್ಪೆಯಲ್ಲಿಯೇ ಈ ಸಿನೆಮಾ ಶೂಟಿಂಗ್ ಕಂಡಿದೆ. ಅದರಲ್ಲೂ ಕಡಲ ಮಧ್ಯೆ ಈ ಸಿನೆಮಾದ ಶೂಟಿಂಗ್ ಆಗಿದೆ. ಬೋಟ್ ನ ಮಧ್ಯೆ ಕುಳಿತ ಅರ್ಜುನ್ ದೃಶ್ಯದ ಸಣ್ಣ ತುಣು ಕೊಂದು ಕೋಸ್ಟಲ್‌ವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿತ್ತು.
ಉಳಿದಂತೆ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ವಿಸ್ಮಯ ವಿನಾಯಕ್, ಸಾಯಿಕೃಷ್ಣ ಸಹಿತ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಕೋಸ್ಟಲ್ ವುಡ್‌ನಲ್ಲಿ ಭರವಸೆ ಸೃಷ್ಟಿಸಿದ ಈ ಸಿನೆಮಾ ಸಿನೆಮಾ ಇಂಡಸ್ಟ್ರಿಗೆ ಇನ್ನಷ್ಟು ಭದ್ರ ಬುನಾದಿಯನ್ನು ನೀಡಲಿ ಎಂಬುದು ಚಿತ್ರಪ್ರೇಮಿಗಳ ಅಭಿಪ್ರಾಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.