ಕೊನೇ ಹಂತದ ಶೂಟಿಂಗ್‌ನಲ್ಲಿ ಕಾರ್ನಿಕದ ಕಲ್ಲುರ್ಟಿ
Team Udayavani, Oct 25, 2018, 12:44 PM IST
ಮೂಲ ಪಾಡ್ದನ ಆಧಾರಿತ ಕಾರ್ನಿಕದ ಕಲ್ಲುರ್ಟಿ ಚಾರಿತ್ರಿಕ ಸಿನೆಮಾದ ಚಿತ್ರೀಕರಣ ಈಗ ಕೊನೆಯ ಹಂತದಲ್ಲಿದೆ. ಕಾರ್ಕಳ ಸಮೀಪ ಬಜಗೋಳಿಯಲ್ಲಿ ಎಲ್ಲ ಶೂಟಿಂಗ್ ನಡೆಯುತ್ತಿದೆ. ಶಂಭು ಬೆಳಗೊಳದಲ್ಲಿ ಮೂರ್ತಿ ಕೆತ್ತುವುದು, ಅದರಲ್ಲಿ ಶಂಭುವಿನ ಮಗ ಲೋಪ ಕಂಡು ಹಿಡಿಯುವುದು, ಇದರಿಂದ ನೊಂದ ತಂದೆ ಪ್ರಾಣ ತ್ಯಜಿಸುವುದು, ಶಿಲ್ಪ ಕೆತ್ತನೆಯ ಉಳಿಕೆ ಕೆಲಸ ಬೀರು ಮಾಡುವುದು, ಮುಂದೆ ಬೀರುವಿಗೆ ಕಾರ್ಕಳದ ಬೈರವರಸರ ಹೇಳಿಕೆ ಮೇರೆಗೆ ಬೀರು ಗೊಮ್ಮಟೇಶ್ವರನ ಶಿಲ್ಪ ಕೆತ್ತುವುದು, ಬೀರು ಯಾವ ಸೀಮೆಯಲ್ಲೂ ಇಂಥ ಕೆಲಸ ಮಾಡಬಾರದೆಂದು ಅರಸರು ಅವನಿಗೆ ನೀಡುವ ಶಿಕ್ಷೆ… ಹೀಗೆ ಸಾಗುವ ಕಥಾ ಸಾರಾಂಶದಲ್ಲಿ ಸಿನೆಮಾ ಸಿದ್ಧವಾಗುತ್ತಿದೆ.
ಚಿತ್ರ ನಿರ್ಮಾಣ ಮತ್ತು ನಿರ್ದೇಶನ ಜವಾಬ್ದಾರಿ ಹೊಂದಿರುವ ಮಹೇಂದ್ರ ಕುಮಾರ್ ಅವರದೇ ಕಥೆ ಚಿತ್ರಕ್ಕಿದೆ. ಗಂಗಾಧರ ಕಿರೋಡಿಯನ್ ಚಿತ್ರಕಥೆ, ಸಂಭಾಷಣೆ, ಕಲೆ, ವಸ್ತ್ರ ವಿನ್ಯಾಸ ಜವಾಬ್ದಾರಿ ಜತೆಗೆ ತಾಂತ್ರಿಕ ನಿರ್ದೇಶಕರು. ಉಮಾಪತಿ ಛಾಯಾಗ್ರಹಣ, ಒಟ್ಟು 6 ಹಾಡುಗಳಿರಲಿದ್ದು, ಹಿತನ್ ಹಾಸನ ಸಂಗೀತ. ನಾಗೇಶ್ ದೇವಾಡಿಗ, ಶಶಿ ಶಿರ್ಲ ಗೀತ ಸಾಹಿತ್ಯ. ಶೈಲೇಂದ್ರ ಡಿ.ಜೆ., ಚಾಂದಿನಿ ಅಂಚನ್, ಮಹೇಂದ್ರ ಕುಮಾರ್, ಶಾಲಿನಿ ಮರಕಡ, ರಘುರಾಮ್ ಶೆಟ್ಟಿ, ಹರಿಣಿ ಕೆಂಜಾರ್, ನಾಗೇಶ್ ಸಾಲ್ಯಾನ್, ಲಾವಣ್ಯಾ ಕದ್ರಿ, ಮೋನಿಕಾ ಕೊಲ್ಯ, ವಿಕಾಸ್, ಮೋಹನ್ ಬೋಳಾರ್, ಅಮೀನ್ ಟೈಲರ್, ಶ್ರೀನಿವಾಸ ದೇವಾಡಿಗ, ಪ್ರಶಾಂತ್ ಜೋಗಿ, ಮನೋಜ್ ಭಂಡಾರಿ, ಕುಮಾರ್ ಪಾಲೆಮಾರ್, ಇಶಿಕಾ, ರೇಖಾ ರಂಜಿತ್ ಕದ್ರಿ, ರಾಜೇಶ್ ಆಚಾರ್ಯ ತಾರಾಗಣದಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.