ಕಟ್ಟದ ಕೋರಿ ಇದು, ಕೋಳಿ ಅಂಕದ ಕಥೆಯಲ್ಲ
Team Udayavani, Dec 6, 2018, 1:01 PM IST
ಕೋಳಿ ಅಂಕ ಕರಾವಳಿಯಲ್ಲಿ ಫೇಮಸ್. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ನೇಮ-
ಉತ್ಸವ-ಕಾರ್ಯಕಲಾಪಗಳಲ್ಲಿ ಕೋಳಿ ಅಂಕಕ್ಕೆ ಜನ ಜಾಸ್ತಿ ಸೇರುತ್ತಾರೆ. ಅದರ ಮೂಲಕ ಸಂಭ್ರಮ ಪಡುವವರು ತುಂಬಾ ಜನ ಇದ್ದಾರೆ. ಜತೆಗೆ ಕಟ್ಟದ ಕೋರಿಯ ಪದಾರ್ಥ ಅಂದರೆ ಊರಲ್ಲಿ ಸ್ವಲ್ಪ ಜನ ಜಾಸ್ತಿ ಬರುತ್ತಾರೆ. ಯಾಕೆಂದರೆ ಆ ಪದಾರ್ಥ ತುಂಬಾನೇ ಟೇಸ್ಟ್ ಅನ್ನುವ ಮಾತಿದೆ. ಹೀಗೆ ಕೋಳಿ ಅಂಕ-ಕಟ್ಟದ ಕೋರಿ ಇದೆಲ್ಲ ತುಳುನಾಡಿನ ಮನಸುಗಳ ಜತೆಗೆ ಬೆಸೆದುಕೊಂಡ ಸಂಗತಿಗಳು. ಇದೆಲ್ಲ ವಿಚಾರ ಇಲ್ಲಿ ಯಾಕೆ ಅನ್ನುತ್ತೀರಾ? ವಿಷಯ ಇರುವುದೇ ಇಲ್ಲಿ. ಇದೇ ಸಂಗತಿಯ ಹೆಸರನ್ನು ಇಟ್ಟುಕೊಂಡು ಕೋಸ್ಟಲ್ ವುಡ್‌ನಲ್ಲೊಂದು ಸಿನೆಮಾ ಮಾಡಲು ಸಿದ್ಧತೆ ನಡೆಯುತ್ತಿದೆ. ಹೆಸರು ‘ಕಟ್ಟದ ಕೋರಿ’!
ಆದರೆ, ಈ ಹೆಸರು ಕೇಳಿ ಕೋಳಿ ಅಂಕದ ಕಥೆ ಅಂದುಕೊಂಡರೆ ನಿಮ್ಮ ಭಾವನೆ ತಪ್ಪಾಗಬಹುದು. ಯಾಕೆಂದರೆ ಪಾತಕಿಗಳ ಲೋಕದಲ್ಲಿ ಕೂಡ ‘ಕಟ್ಟದ ಕೋರಿ’ ಎಂಬ ಪದ ಜಾರಿಯಲ್ಲಿರುವುದರಿಂದ ಈ ಟೈಟಲ್ ಅಲ್ಲಿಗೆ ಮಾತ್ರ ಅನ್ವಯವಾಗುತ್ತದೆ! ಅಂದರೆ ಇದು ಪಾತಕ ಲೋಕದ ಕಥೆ. ಪತ್ರಿಕೆಯೊಂದರಲ್ಲಿ ‘ಫಲ್ಗುಣಿ ನದಿ ತೀರದಲ್ಲಿ’ ಎಂಬ ಅಂಕಣವೊಂದು ಪ್ರಕಟವಾಗುತ್ತಿತ್ತು. ಕರಾವಳಿಯ ಭೂಗತ ಲೋಕದ ಕತೆಗಳೆಲ್ಲ ಇದರಲ್ಲಿ ಬರುತ್ತಿದ್ದವು. ಈ ಬರೆಹಗಳನ್ನೇ ಇಟ್ಟುಕೊಂಡು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಇದೀಗ ಕಥೆಯ ರೂಪ ನೀಡುತ್ತಿದ್ದಾರೆ. ಹೆಚ್ಚಾ ಕಡಿಮೆ ಫೆಬ್ರವರಿ ವೇಳೆಗೆ ಕಟ್ಟದ ಕೋರಿಯ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ‘ಭೋಜರಾಜ್ ಎಂಬಿಬಿಎಸ್’ ಚಿತ್ರದ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಇಸ್ಮಾಯಿಲ್ ಅವರು ಡಿಸೆಂಬರ್ ನಲ್ಲಿ ಈ ಚಿತ್ರದ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.