ಮಲೆನಾಡಿನ ಮಡಿಲಲ್ಲಿ ಕಲ್ಲತ್ತಗಿರಿ ಜಲಪಾತ 


Team Udayavani, Oct 4, 2018, 3:05 PM IST

4-october-13.gif

ಜಿಟಿ ಜಿಟಿ ಮಳೆಯ ನಡುವೆ ಬೆಟ್ಟಗುಡ್ಡಗಳನ್ನು ಹತ್ತುವ ಸಂಭ್ರಮವೇ ರೋಮಾಂಚನವನ್ನುಂಟು ಮಾಡುವಂಥದ್ದು. ಈ ನಡುವೆ ಹರಿಯುವ ಜಲಧಾರೆಯಲ್ಲಿ ಮನತಣಿಸುವಷ್ಟು ಕುಣಿದು ಕುಪ್ಪಳಿಸಿ, ಆಟವಾಡಿದ ನೆನಪುಗಳು ಬದುಕಿನದ್ದಕ್ಕೂ ಸವಿನೆನಪುಗಳಾಗಿಯೇ ಉಳಿದುಬಿಡುತ್ತವೆ. ಸ್ನೇಹಿತರ ಜತೆಯಾಗಿ ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಅಲೆದು ಕಲ್ಲತ್ತಗಿರಿ ಜಲಪಾತವನ್ನು ಕಂಡಾಗ ಮನಸ್ಸು ಧನ್ಯವಾಗಿತ್ತು.

ರಾತ್ರಿ ಇಡೀ ಮಳೆ. ಕೆಮ್ಮಣ್ಣು ಗುಂಡಿಯ ಹಾದಿಯಲ್ಲಿ ಉದ್ದಕ್ಕೂ ಗುಂಡಿಗಳೇ ಸಿಕ್ಕವು. ಕಲ್ಲತ್ತಗಿರಿ ಜಲಪಾತ ನೋಡುವ ಉತ್ಸಾಹ ನೂರ್ಮುಡಿಯಾಗಿದ್ದು ಈ ಮಳೆಯಿಂದಲೇ. ಜಲಪಾತ ನೋಡಲು ಅಣಿಯಾದೆವು. ಅಲ್ಲಿಯೇ ಹತ್ತಿರದ ಹೊಟೇ ಲೊಂದರಲ್ಲಿ ಉಪಹಾರ ಮುಗಿಸಿ ಬಳುಕಿನ ಹಾದಿಯಲ್ಲಿ ಮಲೆನಾಡ ಸೊಬಗನ್ನು ಸವಿಯುತ್ತಾ ಹೊರಟೆವು. ಎಲ್ಲೆಲ್ಲೂ ಹಚ್ಚ ಹಸುರು, ನಡುನಡುವೆ ಸುರಿವ ತುಂತುರು. ಜತೆಜತೆಗೆ ಜೋರು ಮಳೆ. ಹಸಿರು ಗಿರಿಶ್ರೇಣಿಗಳ ಮೇಲೆ ಹಾರಾಡುತ್ತಾ ಹಸಿರು ಗುಡ್ಡಗಳಿಗೆ ಮುತ್ತಿಕ್ಕುವ ಮುದವಾದ ನೋಟ ನಮ್ಮ ಕಣ್ಣುಗಳನ್ನು ತಂಪಾಗಿಸಿತು. ದಾರಿಯ ನಡುವೆ ಸಿಗುವ ಸಣ್ಣ ಸಣ್ಣ ಜಲಪಾತಗಳು ಇನ್ನಷ್ಟು ಹುಚ್ಚೆಬ್ಬಿಸಿದ್ದವು. ಎಲ್ಲರೂ ಫೋಟೋ ಶೂಟ್‌ ನಡೆಸಿದ್ದೇ ನಡೆಸಿದ್ದು.

ಜಲಪಾತದ ಸೊಬಗು
ಅರಣ್ಯ ಇಲಾಖೆಯ ತಪಾಸಣೆ ಮುಗಿಸಿಕೊಂಡು ಜಲಪಾತದ ಹತ್ತಿರಕ್ಕೆ ಬಂದಾಗಲೂ ಮಳೆ ಸುರಿಯುತ್ತಲೇ ಇತ್ತು. ಮಳೆ ಹನಿಗಳ ಜತೆ ಹರಿಯುವ ನೀರಿನಲ್ಲಿ ಮಿಂದು ಅಲ್ಲಿಯೇ ಇದ್ದ ಹೊಟೇಲೊಂದರಲ್ಲಿ ಕುಡಿದ ಮಲೆನಾಡಿನ ಬಿಸಿ ಬಿಸಿ ಕಾಫಿ  ಹೃದಯವನ್ನು ಬೆಚ್ಚಗೆ ಮಾಡಿತು. ಅಲ್ಲಿಂದ ಹೊರಟ ತಲುಪಿದ್ದು ಝೆಡ್‌ ಪಾಯಿಂಟ್‌ಗೆ. 

ಅಲ್ಲೂ ಜಿಟಿಜಿಟಿ ಮಳೆ, ಮೈ ಕೊರೆಯುವ ಚಳಿ. ಸುಂದರ ಪರಿಸರ, ಮಳೆಯಿಂದಾಗಿ ಎಲ್ಲೆಲ್ಲೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಪರ್ವತ ಸಾಲುಗಳ ರುದ್ರರಮಣೀಯ ಪರಿಸರ.

ನೋಡುತ್ತಾ ಅಲ್ಲಿಯೇ ಇದ್ದು ಇಡಬೇಕೆನಿಸುವಷ್ಟು ಆನಂದ. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ಧುಮುಕುತ್ತಿರುವ ನೀರಿನ ಜಲಧಾರೆಯ ದರ್ಶನವಾಯ್ತು. ಅದೇ ಶಾಂತಿ ಜಲಪಾತ. ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಪ್ರಯಾಣ ಮುಂದುವರೆಸಿದೆವು.

ಮುಂದೆ ಸಿಕ್ಕಿದ್ದು, ಎಲ್ಲೆಲ್ಲೂ ಹಸುರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಪ್ರಕೃತಿಯ ಹಸಿರ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟು ಮಾಡುವಂಥ ಜಾಗ. ಸ್ವಲ್ಪ ಸಮಯ ಅಲ್ಲೇ  ಕಾಲ ಕಳೆದು ವಾಪಸ್‌ ಹೊರಟೆವು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಕೆಮ್ಮಣ್ಣು ಗುಂಡಿಗೆ ಸುಮಾರು 213 ಕಿ.ಮೀ. ದೂರ.
 ·ಕೆಮ್ಮಣ್ಣು ಗುಂಡಿಯಿಂದ 4 ಕಿ.ಮೀ. ದೂರದ ಲ್ಲಿದೆ ಫಾಲ್ಸ್‌.
 ·ಕಲ್ಲತ್ತಗಿರಿ ಜಲಪಾತಕ್ಕೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ.
 ·ಕೆಮ್ಮಣ್ಣುಗುಂಡಿಯಲ್ಲಿ ಮೊದಲೇ ಬುಕ್ಕಿಂಗ್‌ ಮಾಡಿದರೆ ವಸತಿ, ಊಟದ       
   ಸಮಸ್ಯೆಯಿಲ್ಲ.
 ·ಹತ್ತಿರದಲ್ಲಿದೆ ರಾಕ್‌ ಗಾರ್ಡನ್‌, ಕೆಮ್ಮಣ್ಣು ಗುಂಡಿ ಕೃಷ್ಣರಾಜೇಂದ್ರ ಪಾರ್ಕ್‌, ಶಾಂತಿ
  ಫಾಲ್ಸ್‌.

ಲಕ್ಷ್ಮೀಕಾಂತ್‌ ಎಲ್‌.ವಿ

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.