ಕೊಂಕಣಿಯ ಸೋಫಿಯಾಗೆ ಒಲಿದ ಮನ್ನಣೆ
Team Udayavani, Nov 1, 2018, 3:15 PM IST
ಜೆನೆಟ್ ನೊರೋನ್ಹಾ ನಿರ್ಮಾಣ, ಹ್ಯಾರಿ ಫರ್ನಾಂಡಿಸ್ ನಿರ್ದೇಶನದ ‘ಸೋಫಿಯಾ’ ಕೊಂಕಣಿ ಚಿತ್ರ ಅತ್ಯುತ್ತಮ ಪ್ರಾದೇಶಕ ಭಾಷಾ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ಎಲ್ಟನ್ ಮಸ್ಕರೇನ್ಹಸ್ ನಾಯಕ. ಬಹುಭಾಷಾ ತಾರೆ ಎಸ್ತರ್ ನೊರೋನ್ಹಾ ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದರು. ಕೊಂಕಣಿ ಸಿನೆಮಾ ಅಂಗಳದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಿರ್ಮಾಣ ಕ್ಷೇತ್ರಕ್ಕೆ ಈ ಸಿನೆಮಾ ಮೂಲಕ ಇಳಿದಿದ್ದರು.
ಇದು ಬರೀ ಕೊಂಕಣಿ ಚಿತ್ರಕ್ಕೆ ಮಾತ್ರವಲ್ಲ ಇಡೀ ಕೋಸ್ಟಲ್ ವುಡ್ ಉದ್ಯಮದಲ್ಲಿಯೇ ದಾಖಲೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲಿ ತಮ್ಮ ವಿಶೇಷವಾದ ಸೆಟ್, ವಿನೂತನ ಮಾದರಿಯ ತಂತ್ರಜ್ಞಾನದಿಂದ ಚಿತ್ರ ಶ್ರೀಮಂತಿಕೆಯನ್ನು ಪಡೆದಿತ್ತು. ‘ನಶಿಬಾಸೋ ಖೆಳ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ಹ್ಯಾರಿ ಫರ್ನಾಂಡೀಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಗುಣವಂತ್ ಸೇನ್ ಅವರ ಸಂಗೀತ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಬಹುಭಾಷಾ ನಟಿ ಎಸ್ತೆರ್ ನೊರೊನ್ಹಾ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರಾದ ಜೆನೆಟ್ ಅವರ ಪುತ್ರಿ ಎಸ್ತೆರ್ ಈ ಹಿಂದೆ ಕನ್ನಡ, ತುಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಕಾಣಿಸಿ ಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.