ಬಾಲಿವುಡ್ ಆಫರ್ ಪಡೆದ ಕುಡ್ಲದ ಚಿತ್ರಾಲಿ!
Team Udayavani, Jul 19, 2018, 2:27 PM IST
ಕನ್ನಡದ ಖಾಸಗಿ ವಾಹಿನಿಯಲ್ಲಿ ಆಯೋಜಿಸಿದ ‘ಡ್ರಾಮ ಜೂನಿಯರ್’ ರಿಯಾಲಿಟಿ ಶೋದಲ್ಲಿ ವಿಜೇತಳಾದ ಮಂಗಳೂರಿನ ಚಿತ್ರಾಲಿ ಅವರಿಗೆ ಈಗ ಬಾಲಿವುಡ್ ಆಫರ್ ಕೂಡ ಬಂದಿದೆ. ಕನ್ನಡದ ಡ್ರಾಮ ಜೂನಿಯರ್ ಬಳಿಕ ಹಿಂದಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವ ಚಿತ್ರಾಲಿ ತನ್ನ ಅದ್ಭುತ ನಟನೆಯ ಮೂಲಕ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ.
ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿಯೂ ಮಿಂಚಿರುವ ಚಿತ್ರಾಲಿ ‘ಇಂಡಿಯಾಸ್ ಬೆಸ್ಟ್ ಡ್ರಾಮೇ ಬಾಜ್ ಸೀಸನ್ 3’ ಎಂಬ ಹಿಂದಿ ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರಿಗೆ ಬಂದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್‌ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಮಾಡಿದ ನಿರ್ದೇಶಕ ಒಮಂಗ್ ಅವರು ಚಿತ್ರಾಲಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿ ‘ನನ್ನ ಚಿತ್ರದಲ್ಲಿ ನಟಿಸುತ್ತೀಯಾ?’ ಎಂದು ಕೇಳಿದ್ದರು. ಅದಕ್ಕೆ ಚಿತ್ರಾಲಿ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಹಿಂದಿ ಸಿನೆಮಾದಲ್ಲೂ ಚಿತ್ರಾಲಿ ಆಫರ್ ಗಿಟ್ಟಿಸಿಕೊಂಡಂತಾಗಿದೆ. ವಿಶೇಷವೆಂದರೆ ನಟಿ ಹುಮಾ ಖುರೇಶಿ ಹಾಗೂ ನಟ ವಿವೇಕ್ ಒಬರಾಯ್ ಕೂಡ ಚಿತ್ರಾಲಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದಹಾಗೆ, ನಿರ್ದೇಶಕ ಒಮಂಗ್ ಅವರು ಪ್ರಿಯಾಂಕಾ ಚೋಪ್ರಾ ಅಭಿನಯದ ‘ಮೇರಿ ಕೋಮ್’, ‘ಸರ್ಬಜಿತ್’ ಹಾಗೂ ಭೂಮಿ ಸಹಿತ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.