“ಕುಪ್ಪಳಿ’ಸುತಾ ಬಂದ ನೆನಪುಗಳು
Team Udayavani, Mar 5, 2020, 5:56 AM IST
ಮಲೆನಾಡು ಸದಾ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಿದೆ. ರಾಷ್ಟ್ರ ಕವಿ ಕುವೆಂಪು ಅವರು ವಾಸವಿದ್ದ ಕವಿಶೈಲ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳ.ಚಳಿಗಾಲದಲ್ಲಿ ಇಲ್ಲಿನ ವಾತಾವರಣ ಅದ್ಬುತವಾಗಿರುತ್ತದೆ.
ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು.
ತೀರ್ಥಹಳ್ಳಿಯ ಸರ್ಕಲ್‌ನಲ್ಲಿ ಕುವೆಂಪು ಪ್ರತಿಮೆ ಕಂಡೊಡನೆ ಬೆಳಗ್ಗಿನಿಂದ ಕಟ್ಟಿಟ್ಟುಕೊಂಡ ಕಾತರಗಳೆಲ್ಲಾ ಕಂಬಳಿಹುಳದಿಂದ ಆಗಷ್ಟೇ ಹೊರಬಂದ ಮರಿಚಿಟ್ಟೆಯಂತೆ ಪಕಪಕನೆ ಕುಣಿಯತೊಡಗಿದವು. ಕುಪ್ಪಳಿಯೆಡೆಗೆ ನಮ್ಮ ವಾಹನ ತಿರುಗಿದೊಡನೆ ಮಡಿಲಲ್ಲಿದ್ದ ಮರಿಗುಬ್ಬಿಯನ್ನೂ ಮರೆತು ರಸಋಷಿಯು ಓಡಾಡಿದ ಹಾದಿಯನ್ನು ಮನ ಕಣ್ತುಂಬಿಕೊಳ್ಳತೊಡಗಿತು. ಸುಮಾರು 15 ಕಿ.ಮೀ. ದೂರ ಪ್ರಯಾಣದ ನಂತರ “ಕವಿಶೈಲಕ್ಕೆ ದಾರಿ’ ಎಂಬ ಫಲಕ ಕಾಣಿಸಿತು. ಅಕ್ಷರಬ್ರಹ್ಮನ ದೇಗುಲ ದೇವಸ್ಥಾನದ ಹೊಸ್ತಿಲು ದಾಟುವಾಗ ನಮಸ್ಕರಿಸಿಯೇ ಮುಂದಡಿ ಇಡುವುದು ರೂಢಿ. ಇಲ್ಲಿಯೂ ಹಾಗೈ ಮಾಡಿದಾಗ ಕೆಲವರು ಪಿಸಕ್ಕೆಂದರು, ಆದರೆ ನನಗದು ದೇಗುಲವೇ, ಅವರು ಅಕ್ಷರಬ್ರಹ್ಮನೇ. ಮೂರು ಚೌಕಿಯ, ಮೂರಂತಸ್ತಿನ ಹೆಮ್ಮನೆಯ ಒಳಬರುತ್ತಿದ್ದಂತೆಯೇ ಗಮನ ಸೆಳೆದವಳು ಸೊಂಪಾಗಿ ಬೆಳೆದು ನಳನಳಿಸುತ್ತಿರುವ ತುಳಸಿ. ಕವಿಮನೆಯ ಹಳೆಬಾಗಿಲು, ದಿಂಡಿಗೆ, ಪತ್ತಾಸು, ಅವರು ಮದುವೆಯಾದ ಮಂಟಪ, ಲಗ್ನಪತ್ರಿಕೆಯ ಪ್ರತಿ, ಹಿತ್ತಲ ಬಾಗಿಲ ಬಳಿಯಿರುವ ಕವಿದಂಪತಿಗಳ ದೊಡ್ಡ ಭಾವಚಿತ್ರ ಎಲ್ಲವೂ ಕಣ್ಮನಗಳಿಗೆ ಮಧುರಾನುಭೂತಿಯುಂಟು ಮಾಡಿತು. ಅದೆಷ್ಟೋ ಹೊತ್ತು ಆ ಭಾವಚಿತ್ರದೆದುರು ಸುಮ್ಮನೆ ನಿಂತಿದ್ದೆ ಭಾವಪರವಶಳಾಗಿ. ತನ್ನ ಮನೆಗೆ ಬಂದ ಕೂಸನ್ನು ಅವರೀರ್ವರು ಮಾತನಾಡಿಸುತ್ತಾ ಎದುರು ನಿಂತಿದ್ದಾರೆ ಎಂಬ ಭಾವದಲಿ ಕಣ್ಮುಚ್ಚಿದೆ, ಆ ಅಮೃತ ಘಳಿಗೆ ನನ್ನದಾಯಿತು.
ಬಾಣಂತಿ ಕೋಣೆಯೊಳಗೆ
ಕವಿ ಉಪಯೋಗಿಸಿದ ದಿವಾನದ ಮೇಲಿದ್ದ ಹಳೆಯ ಕಾಲದ ಟೆಲಿಫೋನ್ ನೋಡಿ ಉತ್ಸುಕಳಾಗಿ ಅದನ್ನೊಮ್ಮೆ ಮುಟ್ಟಿಯೇ ಬಿಟ್ಟೆ. ಯಾವುದನ್ನೂ ಯಾರೂ ಮುಟ್ಟಬಾರದೆಂಬ ಮೂಲ ನಿಯಮ ಆ ಹೊತ್ತಲ್ಲಿ ಅರಿವಿಗೈ ಬರಲಿಲ್ಲ. ಅನಂತರ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು. ಬಾಣಂತಿ ಕೋಣೆಯ ಪಕ್ಕದ ಕೋಣೆಯಲ್ಲಿ ಕವಿಯ ಕುಟುಂಬಸ್ಥರ ಅಪರೂಪದ ಸುಂದರ ಭಾವಚಿತ್ರಗಳೂ, ಅವರ “ಫ್ಯಾಮಿಲಿ ಟ್ರೀ’ ನಕ್ಷೆಯೂ ಇತ್ತು. ಅನಂತರದ ಅಡುಗೆ ಮನೆಯಲ್ಲಿ ಕೈಬಟ್ಟಲು, ಕಂಚಿನ ಲೋಟಗಳು, ಹಾಳೆಟೊಪ್ಪಿ, ಮಡಿಕೆಗಳು, ಚರಿಗೆ, ಕಡಗೋಲು ಮುಂತಾದ ಕವಿಮನೆಯ ಎಲ್ಲ ದಿನಬಳಕೆಯ ವಸ್ತುಗಳೇ ತುಂಬಿದ್ದವು. ಅಲ್ಲಿಂದ ಉಪ್ಪರಿಗೆ ಮೆಟ್ಟಿಲ ಹತ್ತಿ ಹೊರಟರೆ ಕಂಡದ್ದು ಸಣ್ಣ ಸಂಗ್ರಹಾಲಯ ಅವರು ಉಪಯೋಗಿಸಿದ ಪೆನ್ನು, ಕೋಟು, ಸ್ವೆಟರ್, ಚಪ್ಪಲಿ, ಕೂದಲುಗಳು, ಪಂಚೆ- ಹೀಗೆ ಕವಿ ಬಳಸಿದ್ದರೆನ್ನಲಾದ ವಸ್ತುಗಳ ಕಂಡೊಡನೆ ಪರವಶಳಾದೆ.ಅಲ್ಲಿಂದ ಉಪ್ಪರಿಗೆ ಮೆಟ್ಟಿಲೇರಿದರೆ, ಅಲ್ಲೊಂದು ಸಾರಸ್ವತ ಲೋಕವೇ ಧರೆಗಿಳಿದಂತಿತ್ತು. ಅವರು ಬರೆದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ಕವಿಯ ಮನೆಯನ್ನಯ ಸಂಪೂರ್ಣ ಕಣ್ತುಂಬಿ, ತವರನ್ನು ಬಿಟ್ಟು ಹೊರಟ ಮಗಳಂತೆ ಮತ್ತೆ ಮತ್ತೆ ಕವಿಮನೆಯನ್ನು ನೋಡುತ್ತಾ ಹಿಂತಿರುಗಿದೆ.
ರೂಟ್ ಮ್ಯಾಪ್
– ಮಂಗಳೂರುನಿಂದ ಶಿವಮೊಗ್ಗದಲ್ಲಿರುವ ಕವಿಶೈಲಕ್ಕೆ 3 ಗಂಟೆ 20 ನಿಮಿಷ ಇದೆ.143ಕಿ.ಮೀ .
-ಮಂಗಳೂರುನಿಂದ ತೆರಳಲು ಒಂದೇ ಮಾರ್ಗವಿರುವುದು. -ಮಂಗಳೂರು ನಿಂದ ಉಡುಪಿ- ಆಗುಂಬೆ-ತೀರ್ಥಹಳ್ಳಿ ಅಲ್ಲಿದ್ದ ಕುಪ್ಪಳಿಗೆ ತೆರಳಬೇಕು. ಸಾಕಾಷ್ಟು ಬಸ್ ವ್ಯವಸ್ಥೆ ಇದೆ.
ನೀವು ಇತ್ತೀಚೆಗೆ ಸ್ನೇಹಿತರು, ಬಂಧುಗಳೊಂದಿಗೆ ತೆರಳಿರುವ ಪ್ರವಾಸಿತಾಣಗಳಲ್ಲಿ ಕಂಡು ಬಂದ ಅದ್ಭುತ ವಿಚಾರಗಳ ಜತೆಗೆ ಅಲ್ಲಿ ನಿಮಗೇನು ಖುಷಿ ಕೊಟ್ಟಿತು ಎಂಬುದನ್ನು ಸೇರಿಸಿ ಇಲ್ಲಿ ನಿಮ್ಮ ಪ್ರವಾಸ ಕಥನಗಳನ್ನು ಬರೆಯಬಹುದು. ನಿಮ್ಮ ಅನುಭವ ಮತ್ತು ನೀವು ದಾಖಲಿಸಿದ ಮಾಹಿತಿಯೊಂದಿಗೆ ಒಳ್ಳೆಯ ಫೋಟೊ ಕೊಡಿ. ಪ್ರಕಟಿಸುತ್ತೇವೆ. ನಮ್ಮಇ-ಮೇಲ್ ವಿಳಾಸ:
mlr.sudina@ udayavani.com
ಶುಭಶ್ರೀ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.