ಮತ್ತೆ ಗೋವಾಕ್ಕೆ ಹೋಗೋಣ
Team Udayavani, Nov 15, 2018, 1:09 PM IST
ಪಣಜಿಗೆ ಹೋಗೋಣ ಬನ್ನಿ. ವಾರ್ಷಿಕ ಅಂತಾರಾಷ್ಟ್ರೀಯ ಸಿನಿಮೋತ್ಸವ ನ. 20 ರಿಂದ 28 ರವರೆಗೆ ನಡೆಯಲಿದೆ. ಇದು 49 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಮುಂದಿನ ವರ್ಷ ಸುವರ್ಣ ಸಂಭ್ರಮ.
ಪ್ರತಿ ವರ್ಷವೂ ಚಿತ್ರೋತ್ಸವಕ್ಕೆ ಏನಾದರೂ ಸೇರುತ್ತಲೇ ಇರುತ್ತದೆ. ಅದರಂತೆಯೇ ಈ ವರ್ಷವೂ ಒಂದಿಷ್ಟು ಹೊಸತಿದೆ. ಒಟ್ಟೂ 68 ದೇಶಗಳ 212 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ವರ್ಷ ಇಸ್ರೇಲ್ ದೇಶದ ಸಿನಿಮಾಗಳಿಗೆ ಕಂಟ್ರಿ ಫೋಕಸ್ ವಿಭಾಗದಡಿ ಮಹತ್ವ ನೀಡಲಾಗಿದೆ. ಹಾಗೆಯೇ ಜಾರ್ಖಂಡ್ ರಾಜ್ಯದ ಸಿನಿಮಾಗಳನ್ನು ವಿಶೇಷವಾಗಿ ಪರಿಗಣಿಸಲಾಗಿದೆ. ರೆಟ್ರಾಸ್ಪೆಕ್ಟಿವ್ (ಒಬ್ಬ ಚಲನಚಿತ್ರ ನಿರ್ದೇಶಕನ ಚಿತ್ರಗಳು ಮರುಓದು) ವಿಭಾಗದಡಿ ಖ್ಯಾತ ನಿರ್ದೇಶಕ ಇಂಗರ್ ಬರ್ಮನ್ ರ ಚಿತ್ರಗಳನ್ನು ಪರಿಗಣಿಸಲಾಗಿದೆ. ಅಂದ ಹಾಗೆ ಅವರ ಜನ್ಮಶತಮಾನೋತ್ಸವ ವರ್ಷವಿದು.
ಖೇಲೋ ಭಾರತ್ ನ ಬ್ರ್ಯಾಂಡ್‌ನ ವಿಸ್ತರಣೆ ಎಂಬಂತೆ ಈ ಬಾರಿಯ ಚಿತ್ರೋತ್ಸವದಲ್ಲಿ ಗೋಲ್ಡ್, ಸೂರ್ಮಾ, ಭಾಗ್ ಮಿಲ್ಕಾ ಭಾಗ್, ಮೇರಿ ಕಾಮ್, ಎಂಎಸ್‌ಡಿ : ದಿ ಅನ್‌ಟೋಲ್ಡ್ ಸ್ಟೋರಿ ಇತ್ಯಾದಿ ಚಿತ್ರಗಳು ಪ್ರದರ್ಶನವಾಗುತ್ತಿವೆ. ಇವೆಲ್ಲವೂ ಕ್ರೀಡೆಗೆ ಸಂಬಂಧಿಸಿದ ಚಿತ್ರಗಳು.
ಕನ್ನಡದ್ದೇನಿದೆ?
ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳಲ್ಲಿ ಈ ಬಾರಿ ಕನ್ನಡ ಚಲನಚಿತ್ರಕ್ಕೆ ಅವಕಾಶವಿಲ್ಲ, ಆದರೆ ಕರ್ನಾಟಕಕ್ಕಿದೆ. ಅಂದರೆ ತುಳು ಭಾಷೆಯ ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಉಳಿದಂತೆ ಯಾವ ಕನ್ನಡ ಚಿತ್ರಗಳೂ ಈ ವಿಭಾಗದಡಿ ಆಯ್ಕೆಯಾಗಿಲ್ಲ| ಚಲನಚಿತ್ರಗಳ ಪ್ರದರ್ಶನದೊಂದಿಗೆ ಮಾಸ್ಟರ್ ಕ್ಲಾಸ್, ಸಂವಾದ, ಓಪನ್ ಫೋರಂ ಎಲ್ಲವೂ ಉತ್ಸವಕ್ಕೆ ಕಳೆ ತುಂಬಲಿವೆ. ಸಿನಿಮೋತ್ಸವ ಆರಂಭವಾಗುವುದು ದಿ ಎಸ್ಪರನ್ ಪೇಪರ್ ಎಂಬ ಚಿತ್ರದಿಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.