ಮುಂದಿದೆ ರಾಹುಕಾಲ ಗುಳಿಗ ಕಾಲ
Team Udayavani, Apr 25, 2019, 6:11 AM IST
ಮನೋಜ್ ಕುಮಾರ್ ಪ್ರಸ್ತುತಿಯ ಸೂರಜ್ ಬೋಳಾರ್, ಪ್ರೀತಂ ನಿರ್ಮಾಣದ “ರಾಹು ಕಾಲ ಗುಳಿಗ ಕಾಲ’ ಶೂಟಿಂಗ್ ಮುಗಿಸಿ ಈಗ ಡಬ್ಬಿಂಗ್ ಪೂರ್ಣಗೊಳಿಸಿದೆ. ಫೈನಲ್ ಟ್ರೈಂಡಿಂಗ್ ನಡೆಯುತ್ತಿದೆ. ಮಣಿಕಾಂತ್ ಕದ್ರಿ ಸಂಗೀತದ ಜವಾಬಾœರಿ ನಿರ್ವಹಿಸಿದ್ದಾರೆ. ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಸ್ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್. ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನದಲ್ಲಿ ತೊಡಗಿಸಿದ್ದಾರೆ.
ಈಗಾಗಲೇ “ಪತ್ತೀಸ್ ಗ್ಯಾಂಗ್’ ಎಂಬ ಸಿನೆಮಾ ಮಾಡಿದ ಚಿತ್ರತಂಡ ಎರಡನೇ ಸಿನೆಮಾವಾಗಿ ರಾಹು ಕಾಲವನ್ನು ಸಿದ್ಧಪಡಿಸುತ್ತಿದೆ. ಪತ್ತೀಸ್ ಗ್ಯಾಂಗ್ ಶೂಟಿಂಗ್ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್ ಕೂಡ ಮಾಡಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನೆಮಾದಲ್ಲಿ, ಶೂಟಿಂಗ್ ವೇಳೆಯಲ್ಲಿ ಒರಿಜಿನಲ್ ಗನ್ ಹಿಡಿದುಕೊಳ್ಳಲಾಗಿದೆ. ಕೋಸ್ಟಲ್‌ವುಡ್‌ನಲ್ಲಿ ಇದೊಂದು ಮೊದಲ ಪ್ರಯತ್ನ. ಡಮ್ಮಿ ಬುಲೆಟ್ ಅಳವಡಿಸಿಕೊಂಡು ಶೂಟಿಂಗ್ ನಡೆಸಲಾಗಿದೆ. ಸಿನೆಮಾದಲ್ಲಿ ಒಂದು ಹಾಡಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ. ಕೆಲವೊಂದು ಸಮಯ ಕೆಲವರ ಜೀವನವೇ ಏನೇನೋ ಆಗಿಬಿಡುತ್ತದೆ. ಅಂತಹ ಕಾಲದಲ್ಲಿ ಸಮಯವಲ್ಲದ ಜಾಗದಲ್ಲಿ ಯಾರ್ಯಾರೋ ಬಂದು ಮತ್ತೇನೋ ಆಗಿ ಬಿಡುವ ಸಾಧ್ಯತೆ ಇದೆ. ಯಾರು ಹೇಗೆ?ಏನು? ಎಂದು ಯೋಚಿಸುವ ಕಾಲಕ್ಕೆ ಇನ್ನೇನೋ ಆಗುವ ಸಾಧ್ಯತೆಯೂ ಇದೆ. ಬಹುತೇಕ ಜನರ ಜೀವನದಲ್ಲಿ ಇವೆಲ್ಲ ನಡೆದಿರುವ ಲಕ್ಷಣವೂ ಇದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಎದುರಾಗುವ ಒಂದೊಂದು ಸನ್ನಿವೇಶವನ್ನು ರಾಹುಕಾಲ-ಗುಳಿಗ ಕಾಲದಲ್ಲಿ ಬಿಂಬಿಸುವ ವಿನೂತನ ಪ್ರಯತ್ನ ನಡೆದಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.