ಕುಡ್ಲದ ಕಾಮಿಡಿ ಸ್ಟಾರ್‌ಗಳಿಂದ ನೋ ಪಾಲಿಟಿಕ್ಸ್‌ !

Team Udayavani, Apr 11, 2019, 6:00 AM IST

Kudla!

ಮಂಡ್ಯದಲ್ಲಿ ಎಲೆಕ್ಷನ್‌ ಮಧ್ಯೆಯೇ ಸ್ಟಾರ್‌ ವಾರ್‌ ಜೋರಾಗಿದೆ. ಸ್ಯಾಂಡಲ್‌ವುಡ್‌ನ‌ ದರ್ಶನ್‌ ಹಾಗೂ ಯಶ್‌ ಅವರು ಸುಮಲತಾ ಅಂಬರೀಶ್‌ ಅವರ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಉಳಿದ ಕೆಲವು ಕಡೆಗಳಲ್ಲಿ ಕೂಡ ಹೀಗೆ ಸ್ಟಾರ್‌ ಪ್ರಚಾರ ಜೋರಾಗಿದೆ. ಆದರೆ, ಕರಾವಳಿ ಮಾತ್ರ ಇದಕ್ಕೆ ತದ್ವಿರುದ್ದ !

ಕೋಸ್ಟಲ್‌ವುಡ್‌ನ‌ಲ್ಲಿ ದಿನದಿಂದ ದಿನಕ್ಕೆ ತುಳು ಸಿನೆಮಾಗಳ ಸಂಖ್ಯೆ ಅಧಿಕಗೊಳ್ಳುತ್ತ ಕುಡ್ಲದ ಕಲಾವಿದರು ಕರಾವಳಿ ಭಾಗದಲ್ಲಿ ಸಖತ್‌ ಫೇಮಸ್‌ ಆಗುತ್ತಿದ್ದಾರೆ. ಅದರಲ್ಲಿಯೂ ಕುಡ್ಲದಲ್ಲಿ ಕಾಮಿಡಿ ಗೆಟಪ್‌ಗೆ ಜಾಸ್ತಿ ಒತ್ತು ನೀಡುವ ಕಾರಣದಿಂದ ಕಾಮಿಡಿ ಕಲಾವಿದರು ಕುಡ್ಲದ ಬಹುದೊಡ್ಡ ಆಸ್ತಿ.

ತುಳು ನಾಟಕ- ಸಿನೆಮಾದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದ ತುಳುವಿನ ಕಾಮಿಡಿ ಸ್ಟಾರ್‌ಗಳ ಬಗ್ಗೆ ಕರಾವಳಿ ಭಾಗದಲ್ಲಿ ಬಹುದೊಡ್ಡ ಗೌರವ. ಜಾತಿ ಮತ, ಧರ್ಮ ಪಕ್ಷ ಮೀರಿ ಎಲ್ಲರೂ ಇವರನ್ನು ಪ್ರೀತಿಸುವ ಕಾರಣದಿಂದ ಇವರು ರಾಜಕೀಯದತ್ತ ಕಣ್ಣಿಟ್ಟಿಲ್ಲ ಎಂಬುದು ವಿಶೇಷ.

ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಆಹ್ವಾನ ಬಂದಿದ್ದರೂ ಕೂಡ ತುಳು ಸಿನೆಮಾ ಕಲಾವಿದರು ನಯವಾಗಿ ನಿರಾಕರಿಸುವ ಮೂಲಕ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ತಾನು ಅಭಿನಯಿಸುವ ಸಿನೆಮಾವನ್ನು ಎಲ್ಲ ಪಕ್ಷದವರು ನೋಡುವಾಗ ನಾನು ಮಾತ್ರ ಒಂದು ಪಕ್ಷದ ಅಡಿಯಲ್ಲಿ ನಿಂತು ಪ್ರಚಾರ ಮಾಡುವುದು ಸರಿ ಕಾಣಿಸುವುದಿಲ್ಲ ಎಂಬುದು ಇವರ ವಾದ.

ಹೀಗಾಗಿಯೇ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸಹಿತ ಕೋಸ್ಟಲ್‌ವುಡ್‌ನ‌ ಪ್ರಮುಖ ಕಲಾವಿದರು ಪ್ರಚಾರದತ್ತ ಮುಖ ಮಾಡಿಲ್ಲ. ಬೇರೆ ಬೇರೆ ಪಕ್ಷದವರು ಮನೆಗೆ ಆಗಮಿಸಿ ಪ್ರಚಾರದಲ್ಲಿ ಒಮ್ಮೆ ಬನ್ನಿ ಎಂದು ಕರೆದಾಗಲೂ ಪ್ರೀತಿಯಿಂದಲೇ ಅದನ್ನು ನಿರಾಕರಿಸಿದ್ದಾರೆ.
“ರಾಜಕೀಯ ಎಲ್ಲ ನಮಗೆ ಆಗಿ ಬರಲ್ಲ’ ಎನ್ನುತ್ತ ರಾಜಕೀಯ ದಿಂದ ಅಂತರ ಕಾಯ್ದುಕೊಂಡೇ
ಇದ್ದಾರೆ.

ಹಾಗೆಂದು ಚುನಾವಣೆ ಪ್ರಕ್ರಿಯೆಯಿಂದ ಇವರು ದೂರ ನಿಂತಿಲ್ಲ. ಹೇಗೆಂದರೆ ಎ. 18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಾವೆಲ್ಲ ಮತದಾನ ಮಾಡೋಣ ಎನ್ನುವ ಜಾಗೃತ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

“ಮತದಾನ ಮಾಡಿ; ಭವ್ಯ ಭಾರತ ನಿರ್ಮಿಸಿ’ ಎಂಬ ಸಂಕಲ್ಪವನ್ನು ಉಲ್ಲೇಖೀಸಿ ಮತದಾನ ಮಾಡುವಂತೆ ಅವರು ಸಾಮಾಜಿಕ ಜಾಲತಾಣದ ಮುಖೇನ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷಗಳ ಪರವಾಗಿ ಮತ ಕೇಳುವ ಬದಲು ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡುತ್ತಿದ್ದಾರೆ.

ಅಂದಹಾಗೆ, ಸಿನೆಮಾದವರು ಪ್ರಚಾರಕ್ಕೆ ಹೋಗಿಲ್ಲ ಎಂಬ ಸಂಗತಿ ಇದ್ದರೂ ಕುಡ್ಲ ಭಾಗದಲ್ಲಿದ್ದ ಹಲವು ರಾಜಕೀಯ ನೇತಾರರು ಸಿನೆಮಾದ ನೆರಳಿನಲ್ಲಿದ್ದರು ಎಂಬುದು ಕೂಡ ಉಲ್ಲೇಖನೀಯ.

ಕೆಲವರು ಸಿನೆಮಾ ಮಾಡಿದ ಅನಂತರ ರಾಜಕೀಯಕ್ಕೆ ಬಂದಿದ್ದರೆ, ಇನ್ನೂ ಕೆಲವರು ರಾಜಕೀಯದಲ್ಲಿದ್ದು ಸಿನೆಮಾ ಮಾಡಿದವರಿದ್ದಾರೆ ಎಂಬುದು ವಿಶೇಷ.

– ದಿನೇಶ್‌ ಇರಾ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.