ಕುತೂಹಲದ ಪ್ರವೇಶ
Team Udayavani, Jun 6, 2019, 6:00 AM IST
ಕರಾವಳಿಯ ಒಂದು ನೈಜ ಘಟನೆಯನ್ನೇ ಆಧರಿಸಿಕೊಂಡು ಕಥೆಯಾಗಿ ಮಾಡಿ ಸಿನೆಮಾ ರೂಪದಲ್ಲಿ ಹೊರ ತರುವ ಚೇತನ್ ಮುಂಡಾಡಿ ಅವರ “ಪ್ರವೇಶ’ ಸಿನೆಮಾವು ತುಳು ಸಹಿತ ಎರಡು ಭಾಷೆಯಲ್ಲಿ ಹೊರ ಬರಲಿದೆ. ಚೇತನ್ ಮುಂಡಾಡಿ ಅವರು ಈ ಹಿಂದೆ ತನ್ನ “ಮದಿಪು’ ಚಿತ್ರಕ್ಕಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರತಿಭಾವಂತ. ಆದ್ದರಿಂದಲೇ ಇವ ರ ಈ ಪ್ರವೇಶ ಸಿನೆಮಾದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಕುಂದಾಪುರ ಕನ್ನಡ, ಮಂಗಳೂರು ಕನ್ನಡ, ಬೆಂಗಳೂರು ಕನ್ನಡ ಮುಂತಾದ ಪ್ರಾದೇಶಿಕ ಮಟ್ಟದ ಕನ್ನಡವನ್ನು ಈ ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಆ ಮೂಲಕ ಒಂದು ನೈಜತೆಯನ್ನು ತರುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರೆ.
ಚೇತನ್ ಅವರೇ ಬರೆದಿರುವ ಮೂಲಕಥೆಯನ್ನು ಖ್ಯಾತ ಸಿನೆಮಾ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ವಿ. ಮನೋಹರ್ ಅವರ ಸಂಗೀತವಿರುವ ಈ ಸಿನೆಮಾವು ಒಂದು ಧಾರ್ಮಿಕ ಭಾವನೆಯ ವಿಷಯವು ಕೋಮು ಸಾಮರಸ್ಯದಿಂದಿದ್ದ ಗ್ರಾಮದ ಸ್ವರೂಪವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಬಿಚ್ಚಿಡುತ್ತದೆ. ಕೆಜಿಎಫ್ ಸಿನೆಮಾದ ಎಡಿಟಿಂಗ್ ಮಾಡಿದ್ದ ಶ್ರೀಕಾಂತ್ ಅವರೇ ಪ್ರವೇಶವನ್ನೂ ಸಂಕಲನ ಮಾಡುತ್ತಿದ್ದಾರೆ. ಚೇತನ್ ಅವರ ಈ ಹಿಂದಿನ ಮದಿಪು ಸಿನೆಮಾವನ್ನು ಕೂಡ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರು. ಚಿತ್ರದ ನಾಯಕನಾಗಿ ಪೃಥ್ವಿ ಅಂಬಾರ್ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸಿದ್ದಾರೆ. ಖ್ಯಾತ ರಂಗಭೂಮಿ ನಟ ಚಂದ್ರಹಾಸ್ ಉಳ್ಳಾಲ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.