5 ಮಾಗಣೆಯ ನಾಗಲಾಡಿಯ ನಾಗದೇವರಿಗೆ ‘ಪುಂಡಿ ಪಣವು’!


Team Udayavani, Jan 31, 2019, 7:22 AM IST

31-january-14.jpg

ಮಾಲಾಡಿ, ಪೇಜಾವರ, ಬಂಗಾಡಿ, ಮುಗೇರ ಪಾಲೆ ಮಾರ್‌ ಈ ಐದು ಮಾಗಣೆಗಳಿಗೆ ನಾಗಲಾಡಿಯ ನಾಗದೇವರು, ದೈವ ಪಂಜುರ್ಲಿ ಮೂಲ ಶಕ್ತಿಗಳು. ಇದಕ್ಕೆ ಸಂಬಂಧಪಟ್ಟ ಜಾಗದಲ್ಲಿ ಯಾರೇ ವಾಸವಾಗಿದ್ದರೂ ಅವರು ಬಾಡಿಗೆ ರೂಪದಲ್ಲಿ ಪ್ರತಿವರ್ಷ ಸೋಣ ಸಂಕ್ರಮಣದಂದು ಪುಂಡಿಪಣವು ದೈವ ದೇವರಿಗೆ ಸಲ್ಲಿಸಬೇಕು. ಒಂದು ವೇಳೆ ಏನಾದರೂ ತೊಂದರೆಗಳಿಂದ ಪುಂಡಿಪಣವು ಸಲ್ಲಿಸಲು ಅಸಾಧ್ಯವಾದಾಗ ದೈವ ದೇವರ ಕ್ಷಮೆ ಇದೆ. ಅನ್ಯಾಯ ಅಹಂಕಾರದಿಂದ ಸಲ್ಲಿಸದೇ ಹೋದಾಗ ಅವರಿಗೆ ಮಹಾಶಕ್ತಿಗಳಿಂದ ಸಿಗುವ ಶಿಕ್ಷೆಯಿಂದ ಬುದ್ಧಿ ಕಲಿತು ದೈವ ದೇವರಿಗೆ ಶರಣಾಗುವ ಕಥೆ ಇದೀಗ ತುಳು ಸಿನೆಮಾ ರೂಪದಲ್ಲಿ ಮೂಡಿಬರಲಿದೆ. ‘ಪುಂಡಿ ಪಣವು’ ಎಂಬ ಟೈಟಲ್‌ನಲ್ಲಿ ಸಿನೆಮಾ ರೆಡಿಯಾಗಲಿದೆ.

ತವಿಷ್‌ ಎಂಟರ್‌ಪ್ರೈಸಸ್‌ ಲಾಂಛನದಲ್ಲಿ ರಾಮಕೃಷ್ಣ ಶೆಟ್ಟಿ ನಿರ್ಮಿಸಿದ ಗಂಗಾಧರ ಕಿರೋಡಿಯನ್‌ ನಿರ್ದೇಶನದ ‘ಪುಂಡಿ ಪಣವು’ ತುಳು ಚಿತ್ರ ನಾಳೆ ಕರಾವಳಿ ಯಾದ್ಯಂತ ತೆರೆಕಾಣಲಿದೆ. ಸಿನೆಮಾದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಸೊಬಗಿದೆ. ಜನಪದೀಯ ವಿಷಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ಮಣ್ಣಿನ ಪರಿಮಳ ಇದೆ. ಮರೆಯಾಗುತ್ತಿರುವ ಕೆಲವು ವಿಚಾರಗಳನ್ನು ‘ಪುಂಡಿಪಣವು’ ಸಿನೆಮಾ ಹೊಸ ತಲೆಮಾರಿನ ಯುವ ಜನತೆಗೆ ತಿಳಿಸಿಕೊಡುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ.

ಗೋಪಿನಾಥ್‌ ಭಟ್, ರಘುರಾಮ ಶೆಟ್ಟಿ, ಸತೀಶ್‌ ಶೆಟ್ಟಿ, ಸುಂದರ ಹೆಗ್ಡೆ, ಸೂರಜ್‌ ಸನಿಲ್‌, ಪ್ರೀತಂ ಶೆಟ್ಟಿ, ರಾಘವೇಂದ್ರ ರಾವ್‌, ಎಸ್‌.ವಿ. ಆಚಾರ್‌, ಆರ್‌.ಎನ್‌. ಶೆಟ್ಟಿ, ಮೋಹನ್‌ ಬೋಳಾರ್‌, ಹರೀಶ್‌ ಪಂಚಮಿ, ಶಶಿ ಶಿರ್ಲಾಲ್‌, ತಾರಾನಾಥ್‌ ಉರ್ವ, ಸುರೇಶ್‌, ಯೋಗೀಶ್‌, ಉದಯ್‌, ಸೌರಭ ಹೆಗ್ಡೆ, ಅರ್ಥ್ ಶೆಟ್ಟಿ, ಭಾಸ್ಕರ್‌ ಮಣಿಪಾಲ, ಶಶಿರಾಜ್‌ ಶೆಟ್ಟಿ, ಅಮಿನ್‌ ಮುಲ್ಲಕಾಡ್‌, ತುಳಸಿದಾಸ್‌, ಪ್ರಕಾಶ್‌ ನಾಯಕ್‌, ಸುವರ್ಣ ಶೆಟ್ಟಿ, ಹರಿಣಿ, ಪವಿತ್ರ ಶೆಟ್ಟಿ, ಜಲಜಾ ಶೇಖರ್‌, ಪ್ರತಿಮಾ ನಾಯ್ಕ, ಅಕ್ಷತಾ, ರಕ್ಷಿತಾ, ಅಕ್ಷಿತಾ, ಮಮತಾ ಶೆಟ್ಟಿ, ಕಾಮಾಕ್ಷಿ, ಜಯಶೀಲ ಶೋಭಾ ಶೇಖರ್‌ ಶೆಟ್ಟಿ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. 

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.