ಇತಿಹಾಸವನ್ನು ಸಾರುವ ರಾಮದುರ್ಗದ ಶ್ರೀ ವೆಂಕಟೇಶ್ವರ
Team Udayavani, Apr 25, 2019, 6:05 AM IST
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ವೆಂಕಟೇಶ್ವರ ದೇವಸ್ಥಾನವು ಐತಿಹಾಸಿಕ ಪರಂಪರೆಯನ್ನು ಹೊಂದಿರು ವುದರಿಂದ ದೂರ ದೂರಿನಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಶ್ರೀ ವೆಂಕಟೇಶ್ವರ ಭಾವೆ ರಾಜ ಮನೆತನದ ಕುಲ ದೇವರಾಗಿದ್ದರು. ದೇಗುಲದಲ್ಲಿ ಎಪ್ರಿಲ್
ಮಾಸದಲ್ಲಿ ಜರಗುವ ದಸರಾ ಉತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಮಂದಿ ಆಗಮಿಸುವುದು ಇಲ್ಲಿನ ವಿಶೇಷ. ಪುರಾತನ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಿರು ವುದರಿಂದ ನೋಡಲು ಆಕರ್ಷಣೀಯವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ತಾಲೂಕು ಕೇಂದ್ರವಾದ ರಾಮದುರ್ಗದಲ್ಲೂ ಅಂಥದೊಂದು ಸ್ಥಳವಿದೆ. ಅದೇ ಮಲಪ್ರಭಾ ನದಿಯ ದಡದಲ್ಲಿರುವ ಪುರಾತನ ವೆಂಕಟೇಶ್ವರ ದೇವಾಲಯ. ಈ ಐತಿಹಾಸಿಕ ದೇವಸ್ಥಾನ ರಾಮದುರ್ಗಕ್ಕೆ ಕಳಸಪ್ರಾಯವಾಗಿದೆ.
ನರಗುಂದ ಮತ್ತು ರಾಮದುರ್ಗ ಸಂಸ್ಥಾನಗಳ ಆಡಳಿತ 1,742ರಲ್ಲಿ ವಿಭಜನೆಯಾಯಿತು. ಆನಂತರ ಕೊನೆಯ ಅರಸರಾದ ರಾಜಾ ರಾಮರಾವ್ ವೆಂಕಟರಾವ್
ಭಾವೆಯವರು ಈ ದೇವಾಲಯ ನಿರ್ಮಿಸಿದರು.
ಕೊಂಕಣಸ್ಥ ಬ್ರಾಹ್ಮಣರಾದ ಭಾವೆ ರಾಜ ಮನೆತನದ ಕುಲದೇವತೆ ಮತ್ತು ರಾಜಲಾಂಛನವು ವೆಂಕಟೇಶ್ವರ ಆಗಿತ್ತು. ರಾಜಾ ರಾಮರಾವ್‌ಅವರು ವೆಂಕಟೇಶ್ವರ ದೇವರ ಭಕ್ತರಾಗಿದ್ದರಿಂದ ರಾಮನವಮಿಯಂದು ಉಪವಾಸವಿದ್ದು, ಮರುದಿನ ರಾಮನ ಮೂರ್ತಿಗೆ ವೆಂಕಟೇಶ್ವರ ವೇಷಭೂಷಣದಿಂದ ಅಲಂಕರಿಸಿ ವಿಜೃಂಭಣೆಯಿಂದ ರಥೋತ್ಸವವನ್ನು ಪ್ರಾರಂಭಿಸಿ, ತರುವಾಯವೇ ಪ್ರಸಾದ ಸೇವಿಸುತ್ತಿದ್ದರು ಎಂಬುದು ಪ್ರತೀತಿ.
ಆಕರ್ಷಿಣೀಯ ಕಂಬಗಳು
ದೇವಸ್ಥಾನದ ಒಳಭಾಗವು 28 ಕಂಬಗಳನ್ನು ಹೊಂದಿದ ಬೃಹತ್‌ಪ್ರಾಂಗಣವಾಗಿದೆ. ಇದರ ಸುತ್ತಲೂ ಇರುವ ಕಂಬಗಳು ಆಕರ್ಷಣಿಯವಾಗಿವೆ. ಗರ್ಭಗುಡಿಯ ಹೊರಗಡೆಯಲ್ಲಿರುವ ನವರಂಗವು 12 ಕಂಬಗಳ ಪ್ರಾಂಗಣವನ್ನು ಹೊಂದಿದೆ. ಇದರ ಜತೆಗೆ ದತ್ತಾತ್ರೇಯ, ಹನುಮಂತ ಹಾಗೂ ಪಾಂಡುರಂಗ ವಿಟuಲ ದೇವರ ಮೂರ್ತಿಗಳನ್ನೂ ಕಾಣಬಹುದು.
ಈ ಪ್ರಾಂಗಣದಲ್ಲಿ ದಕ್ಷಿಣ, ಉತ್ತರ ಹಾಗೂ ಪಶ್ಚಿಮ ದಿಕ್ಕಿಗೆ ಚಿಕ್ಕ ಬಾಗಿಲುಗಳಿವೆ. ಗರ್ಭಗುಡಿಯಲ್ಲಿರುವ ರಾಮನ ಆಕರ್ಷಕ ವಿಗ್ರಹವು ನಾಲ್ಕು ಕೈಗಳಿಂದ ಕೂಡಿದ್ದು ಶಂಖ, ಚಕ್ರ, ಬಿಲ್ಲು ಬಾಣಗಳನ್ನು ಹೊಂದಿವೆ. ಬಲಗಡೆಗೆ ಕಾಶಿಯಿಂದ ತಂದ ಸಾಲಿಗ್ರಾಮಗಳ ಹಾಗೂ ಮುಂದುಗಡೆಗೆ ಕೃಷ್ಣನ ಮೂರು ವಿಗ್ರಹಗಳು, ಲಕ್ಷ್ಮೀ ವೆಂಕಟೇಶ್ವರ, ವಿಷ್ಣು ಮತ್ತು ಸತ್ಯನಾರಾಯಣ ದೇವರ ಚಿಕ್ಕ ವಿಗ್ರಹಗಳನ್ನು ಕಾಣಬಹುದು. ಗರ್ಭಗುಡಿಯು ಬೃಹತ್‌ಗೊàಪುರವನ್ನು ಹೊಂದಿದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರುತ್ತದೆ. ಸುತ್ತಮುತ್ತಲ ಗ್ರಾಮಗಳಿಂದ ಬಾಲಾಜಿಯ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.
ಪಲ್ಲಕ್ಕಿ ಉತ್ಸವ ಇಲ್ಲಿನ ವಿಶೇಷ
ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ರಾಜರ ಕಾಲದಿಂದಲೂ ಇಂದಿನವರೆಗೂ ವೆಂಕಟೇಶ್ವರ ಪೂಜೆಯನ್ನು ಮಾಡುವ (ಬಾವಾಜಿ) ಅರ್ಚಕರು ಕಾಶಿಯವರಾಗಿದ್ದಾ ರೆ. ಈಗಿರುವ ಅರ್ಚಕ ಶ್ರೀಲಲ್ಲೂ ರಾಮದಾಸ ಮಹಾರಾಜರು ಹದಿನೈದನೇಯವರಾಗಿದ್ದಾರೆ. ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ಗೋವುಗಳಿಗಾಗಿ ಕೊಟ್ಟಿಗೆಯೂ ಇದೆ. ಮೈಸೂರಿನಲ್ಲಿ ನಡೆಯುವಂತೆ ಇಲ್ಲೂ ಕೂಡ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅಲ್ಲಿ ಅಕ್ಟೋಬರ್‌ನಲ್ಲಿ ನಡೆದರೆ, ಇಲ್ಲಿ ಎಪ್ರಿಲ್‌ನಲ್ಲಿ ದಸರೆ ನಡೆ ಯುವುದು ವಿಶೇಷ.
ಈ ಬಾರಿ ಎಪ್ರಿಲ… 14 ರಂದು ಶ್ರೀ ವೆಂಕಟೇಶ್ವರ ಜಾತ್ರೆಯ ನಿಮಿತ್ತ ವಿಜೃಂಭಣೆಯ ರಥೋತ್ಸವ ಜರಗಿತು. ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ಕಲ್ಲಿನ ತೇರನ್ನು ಹನುಮಂತ ದೇವಸ್ಥಾನದವರೆಗೆ ತಂದು ಮತ್ತೆ ಒಂದು ಗಂಟೆಗಳ ಕಾಲ ಸನ್ನೆ ಗೋಲುಗಳ ಮೂಲಕ ಇಳಿಜಾರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತಿರುಗಿಸಿ ಯಥಾ ಸ್ಥಿತಿಯಲ್ಲಿ ತಂದು ನಿಲ್ಲಿಸಲಾಗುತ್ತದೆ. ಈ ರೀತಿ ತೇರನ್ನು ತಿರುಗಿಸುವ ಕಾರ್ಯದಲ್ಲಿ ವಡ್ಡರ ಕೋಮಿನ ಪ್ರಯತ್ನ ಹಾಗೂ ಭಕ್ತಿಯ ಸೇವೆ ಮೆಚ್ಚುವಂತಹದು. ಈ ವಿಶೇಷ ರಥೋತ್ಸವ ನೋಡಲು ಪರವೂರಿನಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ರೂಟ್ ಮ್ಯಾಪ್
· ಮಂಗಳೂರಿನಿಂದ ರಾಮದುರ್ಗಕ್ಕೆ 453 ಕಿ.ಮೀ. ದೂರ.
· ರಾಮದುರ್ಗದಿಂದ ದೇವಸ್ಥಾನವೂ ಹತ್ತಿರದಲ್ಲಿದ್ದು ಅಟೋ, ಬಸ್‌ನ ಸೌಲಭ್ಯವಿದೆ.
· ದೇವಸ್ಥಾನದಲ್ಲಿ ಬೆಳಗ್ಗೆ 6 ರಿಂದ 8 ರವ ರೆಗೆ ದೇವರ ದರ್ಶ ನಕ್ಕೆ ಅವಕಾಶಯಿದೆ.
· ರಾಮದುರ್ಗವೂ ತಾಲೂಕು ಕೇಂದ್ರವಾಗಿರುವುದರಿಂದಾಗಿ ಪೆಟ್ರೋಲ್ ಬಂಕ್, ಊಟ, ವಸತಿಗೆ ಸಮಸ್ಯೆಯಿಲ್ಲ.
- ಸುರೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.