ಕೋಸ್ಟಲ್‌ನಲ್ಲಿ ರೆಡಿಯಾಗಲಿದೆ ಸ್ಯಾಂಡಲ್‌ವುಡ್ ನಾನ್‌ವೆಜ್ !
Team Udayavani, Jun 28, 2018, 12:16 PM IST
ಎಕ್ಕಸಕ, ಪಿಲಿಬೈಲ್ ಯಮುನಕ್ಕ ಮತ್ತು ಅಮ್ಮೆರ್ ಪೊಲೀಸಾ ಎಂಬ ಮೂರು ಚಿತ್ರಗಳನ್ನು ನೀಡಿರುವ ಕೆ. ಸೂರಜ್ ಶೆಟ್ಟಿ ಅವರ ಮುಂದಿನ ಪ್ಲ್ರಾನ್ ಏನು ಎಂಬ ಬಗ್ಗೆ ಕೋಸ್ಟಲ್ ವುಡ್‌ನಲ್ಲಿ ಸಣ್ಣ ನಿರೀಕ್ಷೆ ಮೂಡಿದೆ. ಕೋಸ್ಟಲ್ ನೆಲದಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ ಇವರು ಈಗ ನೇರವಾಗಿ ಕನ್ನಡಕ್ಕೆ ಹಾರಲು ಅಣಿಯಾಗಿರುವುದು ವಿಶೇಷ.
ತುಳುವಿನಲ್ಲಿ ‘ಇಂಗ್ಲಿಷ್’ ಎಂಬ ಸಿನೆಮಾ ಮಾಡಲು ಹೊರಟ ಅವರು ಮೆಲ್ಲನೆ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ‘ನಾನ್‌ವೆಜ್’ ಎಂಬ ಹೆಸರನ್ನೂ ಫಿಕ್ಸ್ ಮಾಡಿದ್ದಾರೆ. ಪ್ರತಿಭಾನ್ವಿತ ನಟ ಪ್ರಜ್ವಲ್ ಪ್ರಕಾಶ್ ಅವರು ಈ ಸಿನೆಮಾದಲ್ಲಿ ಮುಖ್ಯ ನೆಲೆಯಲ್ಲಿ ಅಭಿನಯಿಸಲಿದ್ದಾರೆ. ಪ್ರಜ್ವಲ್ ಶಾಲಾ ಕಾಲೇಜು ದಿನಗಳಲ್ಲೇ ನಟನೆ ಕುರಿತು ವಿಶೇಷ ಆಸಕ್ತಿ ಹೊಂದಿದ್ದು, ಅದನ್ನು ತಂದೆ ಮತ್ತು ತಾಯಿ ಬೆಳೆಸಿದ ಪರಿಣಾಮ ಹಲವು ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಚಿತ್ರೋದ್ಯಮಿ ಪ್ರಕಾಶ್ ಪಾಂಡೇಶ್ವರ ಅವರ ಅವರ ಪುತ್ರರಾಗಿರುವ ಪ್ರಜ್ವಲ್ ‘ಚಾಲಿ ಪೋಲಿಲು’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ಗೆ ಪರಿಚಯವಾಗಿದ್ದರು. ಬಳಿಕ ದಬಕ್ ದಬ ಐಸಾ ಚಿತ್ರದಲ್ಲಿ ನಟಿಸಿರುವ ಪ್ರಜ್ವಲ್ ಬಳಿಕ ಕಾಪಿಕಾಡ್ ಅವರ ಚಂಡಿಕೋರಿ ಮತ್ತು ಬರ್ಸ ಚಿತ್ರದಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ರಘು ಶೆಟ್ಟಿ ಅವರ ಅರ್ಜುನ್ ವೆಡ್ಸ್ ಅಮೃತಾ ಸಿನೆಮಾದಲ್ಲೂ ಇವರಿಗೆ ಅವಕಾಶ ಸಿಕ್ಕಿತ್ತು. ಅದರ ಯಶಸ್ಸಿನ ಬಳಿಕ ‘ಭೂಮಿಕಾ’ ಚಿತ್ರದಲ್ಲಿ ಆ್ಯಂಟಿ ಹೀರೋ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಜತೆ ನಟಿಸಿದ್ದಾರೆ. ಈಗ ಗಾಂಧಿನಗರದಲ್ಲಿ ಸದ್ದು ಮಾಡಲು ಹೊರಟಿರುವುದು ತುಳು ಚಿತ್ರರಂಗದೊಂದಿಗೆ ಸ್ಯಾಂಡಲ್‌ವುಡ್ ಅನ್ನು ಬೆಸೆದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.