ಕೃಷ್ಣಾಷ್ಟಮಿಗೆ ಕೋಸ್ಟಲ್ವುಡ್ ಶೈನಿಂಗ್!
ತುಳುವಿನಲ್ಲಿ 'ಗಿರಿಗಿಟ್'-ಕೊಂಕಣಿಯಲ್ಲಿ 'ನಿರ್ಮಿಲ್ಲೆಂ ನಿರ್ಮೋಣೆಂ'
Team Udayavani, Aug 22, 2019, 5:28 AM IST
ಈ ಬಾರಿಯ ಶ್ರೀಕೃಷ್ಣಾಷ್ಟಮಿಯ ಸಡಗರಕ್ಕೆ ಕೋಸ್ಟಲ್ವುಡ್ ಕೂಡ ಶೈನಿಂಗ್ ಆಗಲಿದೆ. ತುಳು, ಕೊಂಕಣಿಯಲ್ಲಿ ತಲಾ ಒಂದೊಂದು ಸಿನೆಮಾಗಳು ತೆರೆಕಾಣಲಿರುವ ಹಿನ್ನೆಲೆಯಲ್ಲಿ ಕರಾವಳಿಯ ಸಿನೆಮಾಲೋಕದಲ್ಲಿ ಅದ್ವಿತೀಯ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ.
ತುಳು ಸಿನೆಮಾಗಳ ಪಾಲಿಗೆ ಭವಿಷ್ಯ ರೂಪಿಸಲಿರುವ ಹಾಗೂ ಭರವಸೆ ಮೂಡಿಸಿರುವ ರೂಪೇಶ್ ಶೆಟ್ಟಿ ಅವರ ‘ಗಿರಿಗಿಟ್’ ಒಂದೆಡೆಯಾದರೆ; ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ನಿರ್ಮಿಲ್ಲೆಂ ನಿರ್ಮೋಣೆಂ’ ಸಿನೆಮಾ ಕೂಡ ಕೃಷ್ಣಾಷ್ಟಮಿ ದಿನದಂದೇ ತೆರೆಕಾಣಲಿದೆ.
ನಗಿಸಲಿದೆ ‘ಗಿರಿಗಿಟ್’
ಕೋಸ್ಟಲ್ವುಡ್‌ನಲ್ಲಿ ಸದ್ಯ ಭರವಸೆ ಮೂಡಿಸಿದ ಸಿನೆಮಾ ‘ಗಿರಿಗಿಟ್’. ಪೋಸ್ಟರ್, ಡೈಲಾಗ್, ಹಾಡು, ಟ್ರೇಲರ್ ಮೂಲಕವೇ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯಲ್ಲಿರುವ ಈ ಸಿನೆಮಾ ಕೃಷ್ಣಾಷ್ಟಮಿಯ ದಿನ ರಿಲೀಸ್ ಆಗಲಿದೆ.
ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಇರುವ ಕಾರಣದಿಂದ ಗಿರಿಗಿಟ್ ಮೇಲೆ ಎಲ್ಲರಿಗೂ ಬಹುನಿರೀಕ್ಷೆ. ಸದ್ಯ ಕೊಂಚ ಸಪ್ಪೆಯಾಗಿರುವ ತುಳು ಸಿನೆಮಾ ಲೋಕಕ್ಕೆ ಸ್ಫೂರ್ತಿ ನೀಡಲು ತಾಕತ್ತಿರುವ ಸಿನೆಮಾ ಇದು ಎಂದೇ ಬಣ್ಣಿಸಲಾಗುತ್ತಿದೆ.
50,000 ಗೆಲ್ಲಿ!
ವಿವಿಧ ಕಾರಣಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಗಿರಿಗಿಟ್ ಸಿನೆಮಾ ಪ್ರಚಾರದ ನೆಲೆಯಲ್ಲಿ ಇನ್ನೊಂದು ವಿಶೇಷತೆಗೆ ಕೈಹಾಕಿದೆ. ಮೊದಲ ಮೂರು ದಿನಗಳೊಗೆ (ಆ.23, 24, 25) ಸಿನೆಮಾ ನೋಡಿದ ಅದೃಷ್ಟಶಾಲಿ ಐವರಿಗೆ ತಲಾ 10,000 ರೂ.ಗಳಂತೆ ಒಟ್ಟು 50,000 ರೂ. ನಗದು ಬಹುಮಾನವಿರುತ್ತದೆ. ಇದರ ಲಕ್ಕಿಕೂಪನ್ ಅನ್ನು ತಂದು ಚಿತ್ರಮಂದಿರದಲ್ಲಿ ಇಟ್ಟಿರುವ ಬಾಕ್ಸ್ ನಲ್ಲಿ ಹಾಕಿದರೆ ಅದೃಷ್ಟಶಾಲಿಗಳ ಆಯ್ಕೆ ನಡೆಯಲಿದೆ.
ಪ್ರೀತಿಯ ಹೃದಯದಲ್ಲಿ ‘ನಿರ್ಮಿಲ್ಲೆಂ ನಿರ್ಮೋಣೆಂ’
ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ನಿರ್ಮಿಲ್ಲೆಂ ನಿರ್ರ್ಮೊಣೆಂ’ ಸಿನೆಮಾ ಸದ್ಯ ಹಾಡಿನ ಮೂಲಕ ಮೋಡಿ ಮಾಡಿದೆ. ‘ನಿರ್ಮಿಲ್ಲೆಂ ನಿರ್ಮೋಣೆಂ’ ಆ.23ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.ಮೆಲ್ವಿನ್ ಎಲ್ಪೆಲ್ ಅವರ ನಿರ್ದೇಶನದಲ್ಲಿ ಈ ಸಿನೆಮಾ ತಯಾರಾಗಿದೆ. 42 ದಿನಗಳ ಕಾಲ ಒಟ್ಟು ನಾಲ್ಕು ಹಂತಗಳಲ್ಲಿ ಈ ಸಿನೆಮಾ ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಮುಂತಾದೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಿನೆಮಾದ ನಾಯಕರಾಗಿ ಪ್ರತಾಪ್ ಮಿನೇಜಸ್, ಗೋಡ್ವಿನ್, ನಾಯಕಿಯರಾಗಿ ಸೀಮಾ ಬೊತೇಲೋ, ವೀರಾ ಪಿಂಟೋ ಅವರು ನಟಿಸುತ್ತಿದ್ದಾರೆ. ಮೀನಾಕ್ಷಿ ಮಾರ್ಟಿನ್, ಹ್ಯಾಂಬರ್ಟ್ ಗೋವಾ, ರೋನಿ ಸುರತ್ಕಲ್, ಚಾಲ್ಸ್ ರ್ಗೋಮ್ಸ್, ವಿನ್ನಿ ಫೆರ್ನಾಂಡಿಸ್, ನೋಬರ್ಟ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಸಂತೋಷ್, ಮಿಲನ್ ಮರ್ಕಂಜ, ಜೆರಾಲ್ಡ್ ಮತ್ತು ರಾಯನ್ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಚಿತ್ರಕಥೆಯನ್ನು ನೋಬರ್ಟ್ ಜಾನ್ ಅವರು ಬರೆದಿದ್ದಾರೆ. ಅವರು ಸಹ ನಿರ್ದೇಶಕರು. ಕೆಮರಾದಲ್ಲಿ ಮಂಜುನಾಥ್ ಅವರು ದುಡಿದಿದ್ದಾರೆ. ರೆಂಬಿಬಸ್ ಮತ್ತು ಆರ್. ಪಾಪನ್ ಜೋಸ್ವಿನ್ ಅವರ ಸಾಹಿತ್ಯ ಚಿತ್ರಕ್ಕಿದೆ.
ಪಡೀಲ್ಗೆ ಡಬಲ್ ಧಮಾಕ!
ಪಡೀಲ್ ಅಭಿನಯದ ‘ಗಿರಿಗಿಟ್’ ಸಿನೆಮಾ ರಿಲೀಸ್ ಆಗುವ ದಿನವೇ ಪಡೀಲ್ ಅಭಿನಯಿಸುವ ಕನ್ನಡ ಸಿನೆಮಾ ‘ಫ್ಯಾನ್’ ಕೂಡ ಬಿಡುಗಡೆಯಾಗಲಿರುವುದು ವಿಶೇಷ. ಹೀಗಾಗಿ ಈ ಬಾರಿಯ ಶ್ರೀ ಕೃಷ್ಣಾಷ್ಟಮಿ ಪಡೀಲ್ ಪಾಲಿಗೆ ಮಹತ್ವದ ದಿನ. ಸಿನೆಮಾದಲ್ಲಿ ನಾಯಕ ಆರ್ಯನ್, ನಾಯಕಿ ಅದ್ವಿತಿ ಶೆಟ್ಟಿ, ಸಲೆಬ್ರಿಟಿ ನಾಯಕಿ ಸಮೀಕ್ಷಾ, ವಿಜಯ್ ಕಾಶಿ, ಮಂಡ್ಯ ರಮೇಶ್, ರವಿ ಭಟ್, ರಘು ಪಾಂಡೇಶ್ವರ್, ಸ್ವಾತಿ ವಿಟ್ಲ, ಮಂಗೇಶ್ ಭಟ್, ವಿಜಯಲಕ್ಷ್ಮೀ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ್, ಗಣೇಶ್ ಗೌಡ ಕೊಂಡಾಣಿ, ಪ್ರಣತಿ ಗಾಣಿಗ ತಾರಾಗಣದಲ್ಲಿದ್ದಾರೆ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.